ಸೋಣೆ ತಿಂಗಳ ``ಹೊಸ್ತಿಲು ಪೂಜೆ - ಅಜ್ಜಿ ಶಾಸ್ತ್ರ''


 ಕರಾವಳಿಯಲ್ಲಿ ಹಬ್ಬ ಹರಿ-ದಿನಗಳಿಗೆ ವಿಶೇಷ ಸ್ಥಾನ ಕಲ್ಪಿಸಲಾಗಿದೆ.ಇಲ್ಲಿ ಆಚರಿಸಲಾಗುವ ಒದೊಂದು ಹಬ್ಬಗಳಿಗೂ ಅದರದ್ದೇ ಆದ ಇತಿಹಾಸವಿದೆ. ನಾಗಮಂಡಲ, ಭೂತಕೋಲ, ಭೂತಾರಾಧನೆ, ಜಕ್ಣಿ, ಹೊಸ್ತು, ತುಳಸಿ ಪೂಜೆ, ಹೊಸ್ತಿಲ್ ಪೂಜೆ(ಅಜ್ಜಿ ಶಾಸ್ತ್ರ) ಹೀಗೆ ಹಲವಾರು ಸಂಪ್ರದಾಯಬದ್ದ ಆಚರಣೆಗಳು ಉಡುಪಿ ಕುಂದಾಪುರ ಭಾಗದಲ್ಲಿ ಆಚರಣೆಯಲ್ಲಿರುವ ಸಾಂಸ್ರ್ಕತಿಕ ಚೌಕಟ್ಟಿನ ವಿಧಿ-ವಿಧಾನಗಳು. ಆಯಾಯ ತಿಂಗಳಿಗನುಸಾರವಾಗಿ ಒದೊಂದು ಆಚರಣೆ ಅವವರವರ ಅನುಕೂಲಕ್ಕೆ ಅವರವರ ಸಂಪ್ರದಾಯಕ್ಕನುಗುಣವಾಗಿ ನಡೆಯುತ್ತಿರುತ್ತದೆ.
ಇದು ಸೋಣೆ ತಿಂಗಳ ಕಾಲ. ದೇವಸ್ಥಾನಗಳಲ್ಲಿ ಸೋಣೆ ಆರತಿ, ಹೂವಿನ ಪೂಜೆ ಮುಂತಾದ ಶುಭ ಕಾರ್ಯಗಳು ನಡೆಯುವುದು ಈಗ ಸಾಮಾನ್ಯ. ಅಲ್ಲದೇ ಪ್ರತಿ ಮನೆಯಲ್ಲೂ ಸಂಪ್ರದಾಯಬದ್ದವಾಗಿ ಹೊಸ್ತಿಲು ಪೂಜೆ ಮಾಡುವುದು ಪುರಾತನ ಕ್ರಮ.

ಹೊಸ್ತಿಲು ಪೂಜೆ: ಅಂತೆಯೇ ಈ ಕಾಲದಲ್ಲಿ ಗದ್ದೆಯ ಬದುಗಳಲ್ಲಿ ಸೋಣೆ ಹೂ ಬೆಳೆಯುತ್ತದೆ. ಅದನ್ನು ಕಿತ್ತು ತರುವ ಮನೆಯ ಗ್ರಹಿಣಿ ಅಥವಾ ಯಜಮಾನ್ತಿ ಮೊದಲು ಹೊಸ್ತಿಲನ್ನು ಶುಭ್ರವಾಗಿ ತೊಳೆದು ಶೇಡಿಯಿಂದ ಹೊಸ್ತಿಲಿಗೆ ಗೆರೆ ಬರೆದು ನಂತರ ಸೋಣೆ ಹೂ ಮುಂತಾದವುಗಳನ್ನು ಇಟ್ಟು ಹೊಸ್ತಿಲಿಗೆ ಕೈ ಮುಗಿದು ವಂದಿಸುತ್ತಾರೆ. ಪ್ರತಿ ಸೋಣೆ ತಿಂಗಳು ಆರಂಭವಾಗುವ ಸಂಕ್ರಮಣದಿಂದ ಮೊದಲುಗೊಂಡು ಒಂದು ತಿಂಗಳುಗಳ ಕಾಲ ಆಚರಣೆ ಪ್ರತಿನಿತ್ಯ ನಡೆಸಲಾಗುತ್ತದೆ.

ಅಜ್ಜಿ ಶಾಸ್ತ್ರ: ಕುಂದಾಪುರ ಭಾಗದಲ್ಲಿ ಅಜ್ಜಿ ಶಾಸ್ತ್ರ ಅಥವಾ ಅಜ್ಜಿ ಪೂಜೆ ಎಂಬ ಹಬ್ಬವನ್ನು ಆಚರಿಸಲಾಗುತ್ತದೆ. ಸೋಣೆ ತಿಂಗಳಿನಲ್ಲಿ  ಪ್ರತಿನಿತ್ಯ ಹೊಸ್ತಿಲಿಗೆ ಪೂಜೆ ಸಲ್ಲಿಸುವುದರೊಂದಿಗೆ ಹೊಸ್ತಿಲ ಪೂಜೆ ಆಚರಣೆಯ ಮುಕ್ತಾಯ ಹಂತದಲ್ಲಿ `ಅಜ್ಜಿ'ಎನ್ನುವ ಹೆಸರಿನಲ್ಲಿ ವಿಭಿನ್ನ ಸಂಪ್ರದಾಯ ನಡೆಸಲಾಗುತ್ತದೆ. ಸಂಪ್ರದಾಯದಂತೆ ಅಜ್ಜಿ ಆಚರಣೆಯಂದು ರಾತ್ರಿ ಹೊಸ್ತಿಲಿಗೆ ದೂಪಧಾರತಿಯೊಂದಿಗೆ ವಿಶೇಷ ಪೂಜೆ ಮಾಡುತ್ತಾರೆ. ಅಲ್ಲದೇ ದೋಸೆ ಮತ್ತು ಸಾರು ಮುಂತಾದ ಖಾದ್ಯಗಳನ್ನು ನೈವೇದ್ಯ ರೂಪದಲ್ಲಿ ಅಗಲಿದ ಪಿತ್ರುಗಳಿಗೆ ಅಪರ್ಿಸುವ ಶಾಸ್ತ್ರ ಇದಾಗಿದೆ. ಹಿಂದಿನ ಕಾಲದ ನಂಬಿಕೆಯಂತೆ ಮರಣ ಹೊಂದಿದ ಹಿರಿಯರಿಗೆ ನೈವೇದ್ಯ ಅಪರ್ಿಸುತ್ತಾರೆ. ಅಜ್ಜಿ ಶಾಸ್ತ್ರದ ಮುಂದಿನ ದಿನದಿಂದ ಬೆಳಿಗ್ಗಿನ ಹೊಸ್ತಿಲು ಪೂಜೆ ಮಾಡುವ ಸಂಪ್ರದಾಯವಿಲ್ಲ.ಅಜ್ಜಿ ಶಾಸ್ತ್ರದ ದಿನವೇ ಹೊಸ್ತಿಲು ಪೂಜೆಯ ಕೊನೆ ದಿನವೆನ್ನುವುದು ಕೆಲವರ ನಂಬಿಕೆ.

ಒಟ್ಟಿನಲ್ಲಿ ಅನಾದಿ ಕಾಲದ ನಂಬಿಕೆಯನ್ನು ಇಂದಿಗೂ ಆಚರಿಸಿಕೊಂಡು ಬಂದಿರುವ ಜನತೆ ಆಚರಣೆಯ ಹೆಸರಿನಲ್ಲಿ ನೆಂಟರಿಷ್ಟರೊಂದಿಗೆ ಬೆರೆಯುವ ಸದಾವಕಾಶವನ್ನು ಅನುಭವಿಸುವ ಕ್ಷಣವನ್ನು ಪಡೆಯುವುದರಲ್ಲಿ ಎರಡು ಮಾತಿಲ್ಲ.

" ನಮ್ಮ ಪೂವರ್ಿಜರ ಕಾಲದಿಂದಲೂ
 ಅಚರಿಸಿಕೊಂಡು ಬಂದಿರುವ ಸಂಪ್ರದಾಯ 
ಹೊಸ್ಥಿಲ್ ಪೂಜೆ ಮತ್ತು ಅಜ್ಜಿಯಾಗಿದ್ದು,
 ಇನ್ನು ಮುಂದೆಯೂ ಸಂಪ್ರದಾಯ
 ಬದ್ದವಾಗಿ ಆಚರಿಸುತ್ತೇವೆ.
 ಅಜ್ಜಿ ಶಾಸ್ತ್ರದಲ್ಲಿ ಸತ್ತ ಹಿರಿಯರಿಗೆ 
ಕೆಲವು ಪದಾರ್ಥಗಳನ್ನು ಮೀಸಲು
(ನೈವೇದ್ಯ) ಇಡುವುದರ ಮೂಲಕ
 ಅವರನ್ನು ನೆನಸಿಕೊಳ್ಳುವುದು.''
- ಲಕ್ಷ್ಮೀ ಕುಂಭಾಶಿ, ಹಿರಿಯರು

ಚಿತ್ರ-ಲೇಖನ: ಯೋಗೀಶ್ ಕುಂಭಾಶಿ.