ಬೇಳೂರು ಪ್ರೌಢಶಾಲೆ ಇಂಟರ್ಯಾಕ್ಟ ಉದ್ಘಾಟನೆ

ಕುಂದಾಪುರ: ಸೇವೆಯಿಂದ ಮನಶಾಂತಿ, ಮನಶಾಂತಿಯಿಂದ ಸಮಾಜದಲ್ಲಿ ಶಾಂತಿ. ಗ್ರಾಮೀಣ ಪರಿಸರದ ಮಕ್ಕಳನ್ನು ಸೇವೆಯಲ್ಲಿ ತೊಡಗುವಂತೆ ಮಾಡುತ್ತಿರುವ ರೋಡರಿ ಸಂಸ್ಥೆಯ ಕಾರ್ಯ ಶ್ಲಾಘನೀಯವಾದುದು ಎಂದು ಬೇಳೂರು ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷ ಕರುಣಾಕರ ಶೆಟ್ಟಿ ಹೇಳಿದರು. ಅವರು ಬೇಳೂರು ಸರಕಾರಿ ಪ್ರೌಢ ಶಾಲೆಯಲ್ಲಿ ಇಂಟರ್ಯಾಕ್ಟ ಕ್ಲಬ್ ಉದ್ಘಾಟಿಸಿ ಮಾತನಾಡುತ್ತಿದ್ದರು.
ರೋಟರಿ ಜಿಲ್ಲೆ 3180 ರ ಉಪರಾಜ್ಯಪಾಲ ಅಭಿನಂದನ್ ಎ. ಶೆಟ್ಟಿ ರೋಟರಿ ಪಿನ್ ತೊಡಿಸಿ ಪುಷ್ಪ ನೀಡಿ ಪದ ಪ್ರಧಾನ ಮಾಡಿದರು.
ತೆಕ್ಕಟ್ಟೆ ರೋಟರಿ ಅಧ್ಯಕ್ಷ ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಬೇಳೂರು ಗ್ರಾ. ಪಂ. ನ ಉಪಾಧ್ಯಕ್ಷ ಸುರೇಶ್ ಬೇಳೂರು, ಶಾಲಾ ಮುಖ್ಯೋಪಾಧ್ಯಾಯ ಸೋಮಯ್ಯ, ರೋಟರಿ ಕಾರ್ಯದಶರ್ಿ ಚಂದ್ರಶೇಖರ್ ಶೆಟ್ಟಿ, ಇಂಟರ್ಯಾಕ್ಟ ಕ್ಲಬ್ ಅಧ್ಯಕ್ಷ ಪ್ರವೀಣ್ ಹೆಗ್ಡೆ ಉಪಸ್ಥಿತರಿದ್ದರು.
ಸ್ಫೂತರ್ಿಧಾಮದ ಮುಖ್ಯ ಕಾರ್ಯನಿವರ್ಾಹಕ ಕೇಶವ ಕೋಟೇಶ್ವರ ಇಂಟರ್ಯಾಕ್ಟ ಮಹತ್ವದ ಕುರಿತು ತರಬೇತಿ ನೀಡಿದರು. ಶಾಲಾ ಶಿಕ್ಷಕ ಶಂಕರ ಕುಲಾಲರವರು ನೀರೂಪಿಸಿದರು. ಶಾಲಾ ವಿದ್ಯಾಥರ್ಿನಿಯರು ವಂದಿಸಿದರು.