ಖಂಬದಕೋಣೆಯಲ್ಲಿ ಅಗಸ್ಟ್11ರಿಂದ 'ಕೊಂಕಣಿ ರಂಗವೈಭವ'ಪ್ರಾದೇಶಿಕ ನಾಟಕೋತ್ಸವ

ಕುಂದಾಪುರ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರು ಹಾಗೂ ರಂಗ ತರಂಗ(ರಿ) ಉಪ್ಪುಂದ ಇವರ ಸಹಯೋಗದಲ್ಲಿ ಪ್ರಪ್ರಥಮ ಪ್ರಾದೇಶಿಕ ಕೊಂಕಣಿ ನಾಟಕೋತ್ಸವ 'ಕೊಂಕಣಿ ರಂಗ ವೈಭವ' ಕಾರ್ಯಕ್ರಮ ತಾ.11 ಹಾಗೂ ತಾ.12ರಂದು ಖಂಬದಕೋಣೆಯ ನಿರ್ಮಲ ಸಭಾ ಭವನದಲ್ಲಿ ಜರುಗಲಿದೆ.
       ಹಿಂದೂ,ಕ್ರಿಶ್ಚನ್ ಹಾಗೂ ಮುಸ್ಲಿಂ ಧರ್ಮದಲ್ಲಿನ ಸುಮಾರು 42 ಪಂಗಡದವರು ಮಾತನಾಡುವ  ಕೊಂಕಣಿ ಭಾಷೆಯ ರಂಗ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಮ್ಮಿ ಕೊಳ್ಳಲಾದ ಈ ಉತ್ಸವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ತಾ.11 ರಂದು ಸಂಜೆ 6.30ಕ್ಕೆ ಉದ್ಘಾಟಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಕಾಸರಗೋಡು ಚಿನ್ನಾ ವಹಿಸಲಿದ್ದಾರೆ.ಪ್ರಧಾನ ಅಥಿತಿಯಾಗಿ ಬೈಂದೂರು ಶಾಸಕ ಕೆ ಲಕ್ಷ್ಮೀನಾರಾಯಣ ಭಾಗವಹಿಸಲಿದ್ದಾರೆ.
       ಮೊದಲ ದಿನ ಬೈಂದೂರಿನ ಹೋಲಿ ಕ್ರಾಸ್ ಚರ್ಚ್‍ನ ಕಲಾವಿದರಿಂದ 'ಸ್ವಾರ್ಥಿ ಸಂಸಾರು' ಹಾಗೂ ನಾಯ್ಕನಕಟ್ಟೆ ಶ್ರೀ ವೆಂಕಟರಮಣ ಸೇವಾ ಸಮಿತಿಯ ಕಲಾವಿದರಿಂದ 'ಘಡೇ ಏಕ್ ಫಟ್ಟಿಕ್'ನಾಟಕ ಪ್ರದರ್ಶನಗೊಳ್ಳಲಿದೆ. ಎರಡನೆ ದಿನ ತಾ.12 ರಂದು ಬೆಳಿಗ್ಗೆ 10.30ಕ್ಕೆ ರಂಗಸಂವಾದ ಹಾಗೂ ವಿಚಾರ ಗೋಷ್ಠಿ ನಡೆಯಲಿದ್ದು ಕರಾವಳಿಯ 30ಕ್ಕೂ ಅಧಿಕ ಕೊಂಕಣಿ ರಂಗ ಕಲಾವಿದರು ಪಾಲ್ಗೋಳ್ಳಲಿದ್ದಾರೆ. ಸಂಜೆ4.30ಕ್ಕೆ ಶಿರೂರು ಮೇಸ್ತ ಕಲಾತಂಡದವರ 'ತೇ ಕೋಣ'ನಾಟಕದ ಬಳಿಕ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಮಾರುತಿ ನಾಟಕ ಸಂಘ ಶಿರಾಲಿ ಯವರಿಂದ 'ಬ್ರಹ್ಮಾಲೆ ಘಾಂಟಿ'ನಾಟಕದೊಂದಿಗೆ ಉತ್ಸವ ಕೊನೆಗೊಳ್ಳಲಿದೆ. ಜಿಲ್ಲೆಯ ಹಲವು ಗಣ್ಯರು,ನಾಯಕರು,ಕಲಾವಿದರು ಅಥಿತಿಯಾಗಿ ಆಗಮಿಸಲಿದ್ದು ಇದೇ ಸಂದರ್ಭದಲ್ಲಿ ವಿವಿಧ ಸಾಂಸ್ಕøತಿಕ ಸಾಧಕರನ್ನು ಗೌರವಿಸಿ ಸನ್ಮಾನಿಸಲಾಗುವುದು. ಈ ಎಲ್ಲಾ  ಕಾರ್ಯಕ್ರಮಕ್ಕೆ ಆಗಮಿಸಿ ಸಹಕರಿಸಬೇಕೆಂದು ಅಕಾಡೆಮಿ ಸದಸ್ಯ ,ಸಂಚಾಲಕ ಓಂಗಣೇಶ್ ಹಾಗೂ ರಿಜಿಸ್ಟ್ರಾರ್ ಡಾ||ಬಿ.ದೇವಿದಾಸ ಪೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ನಿಮ್ಮ ಪ್ರತಿಕ್ರಿಯೆ ಬರೆಯಿರಿ