ಕೋಟ : ಎಸ್.ಎಸ್.ಎಲ್.ಸಿ. ವಿಶೇಷ ಸಾಧಕರಿಗೆ ಸನ್ಮಾನ

  ಕುಂದಾಪುರ:  2011 - 12 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ಕೋಟ ವಿವೇಕ ಆಂಗ್ಲಮಾಧ್ಯಮ ಪ್ರೌಢ ಶಾಲೆಯ 42 ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ನಡೆದ ಸರಳ ಸಮಾರಂಣವೊಂದರಲ್ಲಿ ಸ್ಮರಣಿಕೆಯನ್ನಿತ್ತು ಗೌರವಿಸಲಾುತು.
        ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೋಟ ವಿದ್ಯಾ ಸಂಘದ ಕಾರ್ಯದರ್ಶಿ ಪಿ.ಸುಬ್ರಹ್ಮಣ್ಯ ಉಪಾಧ್ಯ ಸಮಾರಂಭದ ಅಧ್ಯಕ್ಷತಯನ್ನು ವಹಿಸಿ ವಿದ್ಯಾರ್ಥಿಗಳ ಸಾಧನೆ ಮತ್ತು ಅಧ್ಯಾಪಕ ವೃಂದದವರ ಶ್ರಮವನ್ನು ಶ್ಲಾಘಿಸಿದರು. ಶಾಲೆ ಸತತ ಐದು ಬಾರಿ ಶೇಕಡಾ ನೂರು ಫಲಿತಾಂಶವನ್ನು ದಾಖಲಿಸಿರುವುದನ್ನು ಪ್ರಶಂಸಿಸಿ ಮುಂದೆಯೂ ವಿಶಿಷ್ಠ ಸಾಧನೆಗೈಯುವಂತೆ ಕರೆನೀಡಿದರು.
      ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಘದ ಕೋಶಾಧ್ಯಕ್ಷ ವೆಲೇರಿಯನ್ ಮಿನೇಜಸ್ ಶುಭ ಹಾರೈಸಿದರು. ಆಡಳಿತ ಮಂಡಳಿಯ ಸದಸ್ಯ ಭಾಸ್ಕರ ಹಂದೆ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾಗೇಶ್ ಶಾನುಭಾಗ್, ಬಾಲಿಕಾ ಪ್ರೌಡಶಾಲೆಯ ಮುಖ್ಯಶಿಕ್ಷಕ ಶ್ರೀಪತಿ ಹೇರ್ಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
  ಆಂಗ್ಲ ಮಾಧ್ಯ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಮದೇವ ಐತಾಳ್ ಸ್ವಾಗತಿಸಿದರು. ಶಿಕ್ಷಕ ಪಿ. ವಿಶ್ವೇಶ್ವರ ಹಂದೆ ಶಾಧಕರನ್ನು ಪರಿಚುಸಿದರು. ವಿಶಾಖಾ ಮತ್ತು ಬಳಗ ಪ್ರಾರ್ಥಿಸಿದರು. ಶಿಕ್ಷಕಿ ಗ್ರೇಸಿ ಲೋಬೊ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ನೀರಜ ವಂದಿಸಿದರು.

ನಿಮ್ಮ ಪ್ರತಿಕ್ರಿಯೆ ಬರೆಯಿರಿ 
ಕುಂದಾಪ್ರ.ಕಾಂ> editor@kundapra.com