ಲೋಕಾಯುಕ್ತ ದಾಳಿ: ಸರ್ವೇಯರ್ ಪರಾರಿ

    ಕುಂದಾಪುರ: ಬೈಂದೂರು ವಿಶೇಷ ತಹಶೀಲ್ದಾರರ ಕಛೇರಿಗೆ ಉಡುಪಿ ಲೋಕಾಯುಕ್ತ ಅಧಿಕಾರಿಗಳು ದಿಡೀರ್ ದಾಳಿ ನಡೆಸಿದ ಪರಿಣಾಮ ಸರ್ವೇಯರ್ ಪರಾರಿಯಾದ ಘಟನೆ  ನಡೆದಿದೆ.
              ವಾರದ ಹಿಂದೆ ಉಪ್ಪುಂದ ಗ್ರಾ. ಪಂ. ವ್ಯಾಪ್ತಿಗೆ ಸೇರಿದ 144 / 7 ಸಿ ಯ 14 . ಒಂದೂವರೆ ಸೆಂಟ್ಸ್ ಜಾಗವನ್ನು ಕನ್ವರ್ಷನ್ ಮಾಡುವ ಬಗ್ಗೆ ಉಪ್ಪುಂದ ಗ್ರಾ. ಪಂ. ಸದಸ್ಯ ರವಿಚಂದ್ರನಕ್ಷೆ  ಅರ್ಜಿ ನೀಡಿದ್ದರು.  ಆದರೆ ಈ ಕೆಲಸಕ್ಕೆ   ಸರ್ವೇಯರ ಮಂಜಪ್ಪ ಮೂರು ಸಾವಿರ ಹಣ ಕೊಡುವಂತೆ ಒತ್ತಾಯಿಸಿದ್ದ.   ಅರ್ಜಿ ದಾರರು ಈ ಬಗ್ಗೆ  ಲೋಕಾಯುಕ್ತರಿಗೆ ಮಾಹಿತಿ ನೀಡಿದ್ದರು.
            ಸಾರ್ವಜನಿಕರ ದೂರಿನನ್ವಯ  ಬೈಂದೂರು ಸರ್ವೇ ವಿಭಾಗಕ್ಕೆ ದಿಡೀರ್ ಬೇಟಿ ನೀಡಿ ಲೋಕಾಯುಕ್ತ ಇನ್ಸ್ ಪೆಕ್ಟ್ ರ್ ಬಿ. ಪಿ. ದಿನೇಶ್ ಕುಮಾರ್ ತಂಡ ಕಡತಗಳು ಬಾಕಿ ಉಳಿದಿರುವುದು ಸೇರಿದಂತೆ ಅಧಿಕಾರಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಸೂಕ್ತ ಕ್ರಮ  ಕೈಗೊಳ್ಳಲಾಗುವುದು   ಎಂದಿದ್ದಾರೆ.
             ಸರ್ವೇ ಇಲಾಖೆಯಲ್ಲಿ ನಕ್ಷೆ ಸೇರಿದಂತೆ ಇಲಾಖಾ ಕಾರ್ಯ ನಡೆಸಿಕೊಡಲು ಹಣದ ಬೇಡಿಕೆಯಿಡುವ ಬಗ್ಗೆ ಹಲವಾರು  ಬಾರಿ ಸಾರ್ವಜನಿಕರು ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು. ಬೈಂದೂರು ತಹಶೀಲ್ದಾರ ಕಛೇರಿಗೆ 3ನೇ ಬಾರಿ ಲೋಕಾಯುಕ್ತ ದಾಳಿ ನಡೆದಿದ್ದು ಲೋಕಾಯುಕ್ತ ಅಧಿಕಾರಿಗಳು ಆಗಮಿಸುತ್ತಿದ್ದಂತೆ ಪರಾರಿಯಾದ ಸರ್ವೇಯರ ಸ್ಥಳದಲ್ಲಿ ಮೊಬೈಲ್, ಚಪ್ಪಲಿ ಬಿಟ್ಟು ಹೋಗಿರುವುದಾಗಿ ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.                          


ಕುಂದಾಪ್ರ.ಕಾಂ> editor@kundapra.com