ಪರಿಸರ ಜಾಗೃತಿ ಕಾರ್ಯಕ್ರಮ


   ಪಿಲಿಕುಳ ನಿಸರ್ಗಧಾಮದಲ್ಲಿ ದಿನಾಂಕ 25/08/2012ರಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾಯೋಜಿತ 'ಪರಿಸರ ಜಾಗೃತಿ ಕಾರ್ಯಕ್ರಮ' ಮಂಗಳೂರಿನ ಶ್ರೀನಿವಾಸ್ ಕಾಲೇಜ್ ಆಫ್ ಎಜ್ಯುಕೇಶನ್ನ ವಿದ್ಯಾರ್ಥಿ-ಶಿಕ್ಷಕರಿಗೆ  ಹಮ್ಮಿಕೊಳ್ಳಲಾಗಿತ್ತು.
     ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರಿನ ಯೆನೆಪೋಯಾ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ನ ಪ್ರಾಂಶುಪಾಲರಾದ ಡಾ| ಸಿ. ಕೆ. ಮಂಜುನಾಥ ನೇರವರಿಸಿ ಮಾತನಾಡುತ್ತಾ ಪ್ರತಿಯೊಬ್ಬರು ಈ ಪರಿಸರವನ್ನು ವೈಜ್ಞಾನಿಕವಾಗಿ ಸಂಪ್ರದಾಯಬದ್ಧವಾಗಿ ಬಳಸಿಕೊಳ್ಳಬೇಕು. ಮಾನವನ ಅತೀಯಾದ ಆಸೆಯಿಂದ ಪರಿಸರನಾಶವಾಗುತ್ತಲಿದೆ ಅದನ್ನು ಸಂರಕ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಕರೆಯಿತ್ತರು. ಅಧ್ಯಕ್ಷತೆಯನ್ನು ಪಿಲಿಕುಳ ನಿಸರ್ಗಧಾಮದ ಕುಶಲಕಮರ್ಿಗ್ರಾಮದ ಯೋಜನಾಧಿಕಾರಿಯಾದ  ಪರಮೇಶ್ವರ ಅಡಿಗ ವಹಿಸಿದ್ದರು. ಅತಿಥಿಗಳಾಗಿ ಶ್ರೀನಿವಾಸ್ ಕಾಲೇಜ್ ಆಫ್ ಎಜ್ಯುಕೇಶನ್ನ ಪ್ರಾಂಶುಪಾಲರಾದ ಜ್ಯೋತಿ ಉಪಸ್ಥಿತರಿದ್ದರು.
       ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ವೈಜ್ಞಾನಿಕ ಅಧಿಕಾರಿಯಾದ ಜಯಪ್ರಕಾಶ ನಾಯಕ್ ಪರಿಸರಕ್ಕೆ ಸಂಬಂಧಿಸಿದ ಕಾನೂನು ಮತ್ತು ಪರಿಸರ ಮಾಲಿನ್ಯ, ಕಾರಣ ಪರಿಣಾಮ ಕುರಿತು ವಿವರಿಸಿದರು. ಅಪರಾಹ್ನ ನಡೆದ ಚರ್ಚೆಯಲ್ಲಿ ಪಿಲಿಕುಳ ನಿಸರ್ಗಧಾಮದ ವೈಜ್ಞಾನಿಕ ಅಧಿಕಾರಿ ವಿಘ್ನೇಶ್ವರ ಹೆಗ್ಡೆ ಜೀವವೈವಿಧ್ಯತೆ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಚಚರ್ಿಸಿದರು.
ಜೊತೆಗೆ ಪರಿಸರ ಸಂಬಂಧಿ ಆಟಗಳು, ಪರಿಸರ ರಸಪ್ರಶ್ನೆ, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಶೈಕ್ಷಣಿಕ ಸಹಾಯಕರಾದ ಪ್ರಿಯಾಂಕಾ ಹಾಗೂ ಜಗನ್ನಾಥ ನಡೆಸಿಕೊಟ್ಟರು. ಪಿಲಿಕುಳ ಪ್ರಾದೇಶಿಕ ವಿಜಾನ ಕೇಂದ್ರದ ಕ್ಯುರೇಟರ್ ಕೆ ಕೆ. ಸಿಂಗ್ ಸ್ವಾಗತಿಸಿದರು. ವಿವೇಕ್ ನಂಬಿಯಾರ್ ವಂದಿಸಿದರು, ಜಗನ್ನಾಥ ಕಾರ್ಯಕ್ರಮ ನಿರೂಪಿಸಿದರು.