ಎಚ್.ಐ.ವಿ ಭಾದಿತರ ಸಹವರ್ತಿ ಸಮಾವೇಶ


ಕುಂದಾಪುರ: ಎಚ್.ಐ.ವಿ ಭಾದಿತರ ಬಗೆಗಿನ ದೃಷ್ಟಿಕೋನ ಬದಲಾಗಬೇಕಿದೆ. ಎಚ್.ಐ.ವಿ ಕೇವಲ ಲೈಂಗಿಕ ರೋಗ ಎನ್ನುವ ಕಲ್ಪನೆಯಿಂದ ನಾವು ಹೊರಬರಬೇಕಿದೆ. ಇಂದಿಗೂ ಎಚ್.ಐ.ವಿ ಹರಡುವ ಮಾಧ್ಯಮವನ್ನು ನಿಖರವಾಗಿ ಹೇಳಲು ಸಾದ್ಯವಾಗಿಲ್ಲ. ಅದೆಷ್ಟೋ ಮಕ್ಕಳು, ಮಹಿಳೆಯರು ಅರಿವಿಲ್ಲದೇ ಎಚ್.ಐ.ವಿ ಭಾದೆಗೊಳಪತ್ತಿದ್ದಾರೆ. ಏನೂ ತಪ್ಪು ಮಾಡದವರನ್ನು ಅಸ್ಪ್ರಶ್ಯರಂತೆ ಕಂಡು ಕುಟುಂಬದಿಂದ, ಸಮಾಜದಿಂದ ದೂರವಿಡುವುದು ಸಮಂಜಸಲ್ಲ ಎಂದು ಕೆದೂರು ಸ್ಫೂರ್ತಿಧಾಮದ  ಕೇಶವ ಕೋಟೇಶ್ವರ ಹೇಳಿದರು. ಅವರು ಕುಂದಾಪುರ ಹೋಟೆಲ್ ಹರಿಪ್ರಸಾದ್ನ ಅಕ್ಷತ ಸಭಾಂಗಣದಲ್ಲಿ ನಡೆದ ಎಚ್.ಐ.ವಿ ಭಾದಿತರ  ಎಚ್.ಐ.ವಿ ಭಾದಿತರ ಸಹವರ್ತಿ ಸಮಾವೇಶ  ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
         ಉಡುಪಿಯ ದೀಪಾಜ್ಯೋತಿ ನೆಟ್ವರ್ಕ್  ಆಫ್ ಪಾಸಿಟಿವ್ ಪೀಪಲ್ಸ್  ವತಿಯಿಂದ  ಆಯೋಜಿಸಲಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಶ್ಯಾಮಲಾ ಜಿ. ವಹಿಸಿದ್ದಾರೆ. ಮುಖ್ಯ ಅತಿಥಿಯಾಗಿ ಕುಂದಾಪುರ ತಾಲೂಕು ವೈದ್ಯಾಧಿಕಾರಿ ಡಾ|| ಉದಯ ಶಂಕರ ಭಾಗವಹಿಸಿದ್ದರು.
       'ಸ್ವಸಹಾಯ ಸಂಘದ ಮಹತ್ವ ಹಾಗೂ ಸಬಲೀಕರಣ' ವಿಷಯದ ಮೇಲೆ ಕೋಣಿ ಮಾತಾ ಮಾಂಟೇಸ್ಸರಿ ವ್ಯವಸ್ಥಾಪಕ  ಪ್ರಕಾಶ್ಚಂದ್ರ ಶೆಟ್ಟಿ ತರಬೇತಿ ನೀಡಿದರು.
       ಸಂತೋಷ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು, ಶಾಂತಿ ನರೋನ್ಹ ಪ್ರಾಸ್ತಾವಿಕ ಮಾತನ್ನಡಿದರು. ಮೋಹನ್ ಸುವರ್ಣ ಸ್ವಾಗತಿಸಿ, ಉಮಾ ವಂದಿಸಿದರು 

ಕುಂದಾಪ್ರ.ಕಾಂ> editor@kundapra.com