ಮೂಡುಗೋಪಾಡಿ: ಶಾಲಾ ಸಂಪೂರ್ಣ ಸ್ವಚ್ಚತಾ ಪಾಕ್ಷಿಕ. & ತಾಯಂದಿರ ಮೇಳಕುಂದಾಪುರ: ಇಲ್ಲಿನ ಎಫ್.ಎಸ್.ಎಲ್. ಇಂಡಿಯಾ, ಜ್ವಾಲಿ ಕಲಾರಂಗ ಮತ್ತು ಕ್ರೀಡಾರಂಗ ಮೂಡುಗೋಪಾಡಿ ಇವರ ಸಹಭಾಗಿತ್ವದಲ್ಲಿ  ಸರಕಾರಿ ಪ್ರಾಥಮಿಕ ಶಾಲೆ ಮೂಡುಗೋಪಾಡಿಯಲ್ಲಿ ಮಂಗಳವಾರ ಶಾಲಾ ಸಂಪೂರ್ಣ ಸ್ವಚ್ಚತಾ ಪಾಕ್ಷಿಕ ಆಚರಿಸಲಾಯಿತು. ಶಾಲಾ ವಿದ್ಯಾಥರ್ಿಗಳು ಹಾಗೂ ಎಫ್.ಎಸ್.ಎಲ್. ಸ್ವಯಂ ಸೇವಕರಿಂದ ಶಾಲಾ ಪರಿಸರ, ಶೌಚಾಲಯ, ಮತ್ತು ಪೀಠೋಪಕರಣಗಳ ಸ್ವಚ್ಚತಾ ಕಾರ್ಯ ನಡೆಯಿತು.
          ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಜಾಹ್ನವಿ ನಜರತ್ ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚೇತನಾ ಸಂಸ್ಥೆ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಬೀಜಾಡಿ ಗ್ರಾ.ಪಂ. ಉಪಾಧ್ಯಕ್ಷೆ ವೈಲೆಟ್ ಬೆರೆಟ್ಟೋ, ಸ್ಥಳೀಯರಾದ ಸುರೇಂದ್ರ, ಎಫ್.ಎಸ್.ಎಲ್. ಇಂಡಿಯಾದ ಸಂಚಾಲಕ ಜೊಯ್ ಕರ್ ವಾಲೋ, ಶರತ್, ದೀಪಕ್, ದಿನೇಶ್, ಮತ್ತು ವಿದೇಶಿ ಸ್ವಯಂ ಸೇವಕರು ಉಪಸ್ಥಿತರಿದ್ದರು.
         ರವಿ ಕಟ್ಕೇರೆ ಕಾರ್ಯಕ್ರಮ ನಿರ್ವಹಿಸಿ, ಶಾಲಾ ಮುಖ್ಯ ಶಿಕ್ಷಕ ರಾಮ ಪೂಜಾರಿ ಸ್ವಾಗತಿಸಿದರು, ಸುಜಾತಾ ವಂದಿಸಿದರು.
        ಸಭಾ ಕಾರ್ಯಕ್ರಮದ ನಂತರ ಮೂಡುಗೋಪಾಡಿ ಭಾಗದ ಪ್ರಮುಖ ಬೀದಿಗಳಲ್ಲಿ ಘೋಷಣಾ ಫಲಕದೊಂದಿಗೆ ಜಾಥಾ ನಡೆಸಲಾಯಿತು. 

 ತಾಯಂದಿರ ಮೇಳ


ಕುಂದಾಪುರ: ಸರಕಾರಿ ಪ್ರಾಥಮಿಕ ಶಾಲೆ ಮೂಡುಗೋಪಾಡಿಯಲ್ಲಿ ಇತ್ತೀಚೆಗೆ ಮೀನಾ ತಂಡದ ವತಿಯಿಂದ ತಾಯಂದಿರ ಮೇಳ ನಡೆಯಿತು.

       ಕೆನರಾ ಕಿಡ್ಸ್ ಬೀಜಾಡಿ ಇದರ ಸಂಚಾಲಕಿ ವಿನಂತಿ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬೀಜಾಡಿ ಗ್ರಾ.ಪಂ. ಉಪಾಧ್ಯಕ್ಷೆ ವೈಲೆಟ್ ಬೆರೆಟ್ಟೋ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಜಾಹ್ನವಿ ನಜರತ್ ಸದಸ್ಯರಾದ ನೆಬಿಸಾ ಉಪಸ್ಥಿತರಿದ್ದರು. ಮಾರ್ಗದಶರ್ಿ ಶಿಕ್ಷಕಿ ಬಿ.ನಿರ್ಮಲಾ ಪ್ರಾಸ್ತಾವಿಕ ಮಾತುಗಳನ್ನಾಡಿದರು.                  ಶಾಲೆ ಮುಖ್ಯ ಶಿಕ್ಷಕ ರಾಮ ಪೂಜಾರಿ ಸ್ವಾಗತಿಸಿ, ಸುಜಾತಾ ಕಾರ್ಯಕ್ರಮ ನಿರ್ವಹಿಸಿ , ರವಿ ಕಟ್ಕೇರೆ ವಂದಿಸಿದರು.