ಕುಂದಾಪುರ: ಇಲ್ಲಿಗೆ ಸಮೀಪ ಹೂವಿನಕೆರೆ ಬಾವಿಸಮೀರ ಶ್ರೀ ವಾದಿರಾಜ ಮಠಕ್ಕೆ ಹೋಗುವ ಅಡ್ಡ ರಸ್ತೆಯ ಪಕ್ಕದಲ್ಲಿರುವ ಸರಕಾರಿ ಸ್ಥಳದಲ್ಲಿ ಸ್ಮಶಾನ ನಿರ್ಮಾಣಕ್ಕೆ ವಕ್ವಾಡಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಉದ್ದೇಶಿತ ಸ್ಥಳದಿಂದ ಸ್ಮಶಾನ ನಿರ್ಮಾಣಪ್ರಕ್ರಿಯೆಯನ್ನು ಹಿಂತೆಗೆದುಕೊಳ್ಳುವಂತೆ ವಕ್ವಾಡಿ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳು ಕಾಳಾವರ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಮಾಡಿಕೊಂಡಿದ್ದಾರೆ.
ಉಡುಪಿ ಸೋದೆ ಮಠ ಸಂಸ್ಥಾನದ ವಾದಿರಾಜರ ಮೂಲ ಜನ್ಮಕ್ಷೇತ್ರವಾದ ಹೂವಿನಕೆರೆ ಗೌರಿಗದ್ದೆ ಹಾಗೂ ಅವರ ಆರಾಧನಾ ದೇವರಾದ ಚೆನ್ನಕೇಶವ ದೇವಾಲಯಕ್ಕೆ ಭಕ್ತಾಧಿಗಳು ಇದೇ ಮಾರ್ಗದಲ್ಲಿ ಸಂಚರಿವುದರಿಂದ ಅವರ ಧಾಮರ್ಿಕ ಭಾವನೆಗಳಿಗೆ ಧಕ್ಕೆಯಾಗುವುದಲ್ಲದೇ, ಸುತ್ತ ಮುತ್ತಲಿನ ಪ್ರದೇಶದಲ್ಲಿ ಹೇರಳವಾದ ಜನಸಂದಣಿ ಮತ್ತು ಬಸ್ಸು ನಿಲ್ದಾಣ ಇರುವುದರಿಂದ ಜನವಸತಿ ಇಲ್ಲದೆ ಇರುವ ಗ್ರಾಮದ ಒಂದು ಮೂಲೆಯಲ್ಲಿ ಸ್ಮಶಾನ ನಿಮರ್ಾಣಕ್ಕೆ ಗ್ರಾಮಸ್ಥರು ಮನವಿಮಾಡಿದ್ದಾರೆ.
ಈ ಸಂಧರ್ಭದಲ್ಲಿ ಯೋಗ ಕ್ಷೇಮ ಸತ್ಸಂಗ, ವಾದಿರಾಜ ಮಠದ ಅರ್ಚಕ ವೃಂದ, ಬೃಹ್ಮಲಿಂಗೇಶ್ವರ ಯುವಕ ಮಂಡಲ, ಕಳ್ಳಿ ಗುಡ್ಡೆ ಪ್ರೆಂಡ್ಸ್ , ವಾದಿರಾಜ ಭಜನಾ ಮಂಡಳಿ, ವಾಡರ್ಿನ ಪಂಚಾಯಿತಿ ಸದಸ್ಯರು, ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಪ್ರಗತಿ ಬಂಧು, ಸ್ವಸಹಾಯ ಸಂಘದ ಪಧಾದಿಕಾರಿಗಳು, ಸದಸ್ಯರು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಯೋಗಿಶ್ ಕುಂಭಾಶಿ
ಕುಂದಾಪ್ರ.ಕಾಂ> editor@kundapra.com