ತೆಕ್ಕಟ್ಟೆಯ ಸೇವಾ ಸಂಗಮ ವಿದ್ಯಾಕೇಂದ್ರಕ್ಕೆ ಸಮಗ್ರ ಪ್ರಶಸ್ತಿ


ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವವರು  ಪ್ರಮೋದ್ ಕುಮಾರ್,
 ಠಾಣಾಧಿಕಾರಿ ಕಾರ್ಕಳ
 
ಕುಂದಾಪುರ: ನಚೀಕೇತ ವಿದ್ಯಾಲಯ ಬೈಲೂರು, ಕಾರ್ಕಳ ಇವರ ಆಶ್ರಯದಲ್ಲಿ ನಡೆದ ವಿದ್ಯಾಭಾರತಿ ಉಡುಪಿ ಜಿಲ್ಲಾ ಘಟಕದ ಕ್ರೀಡಾಕೂಟದಲ್ಲಿ 5 ಶಾಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದು, ಸೇವಾ ಸಂಗಮ ವಿದ್ಯಾಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾಗಿರಿ ತೆಕ್ಕಟ್ಟೆಯ ಒಟ್ಟು 42 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದು, ಪ್ರಥಮ - 31 ಸ್ಥಾನ, ದ್ವಿತೀಯ - 32 ಸ್ಥಾನ, ತೃತೀಯ - 20  ಸ್ಥಾನದೂಂದಿಗೆ  4 ಚಾಂಪಿಯನ್ ಶಿಪ್ ಪಡೆದು ಕ್ರೀಡಾಕೂಟದ ಸಮಗ್ರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ ಹಾಗೂ 5 ನೇ ತರಗತಿಯ ಸ್ವಾತಿ, 8 ನೇ ತರಗತಿಯ ಕಿರಣಕುಮಾರ್, 9 ನೇ ತರಗತಿಯ ಪವನಕುಮಾರ್, 10 ನೇ ತರಗತಿಯ ಅಶ್ವೀತಾ ಇವರುಗಳು ವಯಕ್ತಿಕ ಚಾಂಪಿಯನ್ಶಿಪ್ ಪ್ರಶಸ್ತಿ ಪಡೆದಿರುವ ಬಗ್ಗೆ  ಶಾಲೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
 ಕುಂದಾಪ್ರ.ಕಾಂ> editor@kundapra.com