ಔಷಧಿ ವನ ಪ್ರಾತ್ಯಕ್ಷಿಕೆ ಹಾಗೂ ಪರಿಸರ ಮಾಹಿತಿ ಕಾರ್ಯಕ್ರಮ

ಕುಂದಾಪುರ : ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾಕೇಂದ್ರದಲ್ಲಿ ಇತ್ತಿಚೆಗೆ  ರಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಕುಂದಾಪುರ ಸಹಯೋಗದೊಂದಿಗೆ ಕೋಟೇಶ್ವರ ವಲಯ ಮಟ್ಟದ ಔಷಧಿ ವನ ಪ್ರಾತ್ಯಕ್ಷಿಕೆ ಹಾಗೂ ಪರಿಸರ ಮಾಹಿತಿ ಕಾರ್ಯಕ್ರಮ ಜರಗಿತು. ಉದ್ಘಾಟಿಸಿದ ಕೋಟೇಶ್ವರ ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ.ಟಿ.ಶ್ರೀಯಾನ್ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಕರೆಕೊಟ್ಟು ಹಿಂದೂ ಸಂಸ್ಕೃತಿ ಸಂಸ್ಕಾರಗಳನ್ನು ಬೆಳೆಸುವ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಪನ್ಮೂಲ ವ್ಯಕ್ತಿ ಕೃಷಿ ಅಧಿಕಾರಿ ವಿಷ್ಣು ಎನ್.ಎಮ್. ಪ್ರಸ್ತಾವನೆ ಮಾಡುತ್ತಾ ಹೆಚ್ಚು ಕ್ರಿಮಿನಾಶಕ ಬಳಕೆಯ ಅವಶ್ಯಕತೆಯಿಂದ ಕ್ಯಾಬೇಜ್,ಕಾಲಿಫ್ಲವರ್ ಹಾಗೂ ಬಹಳಷ್ಟು ತರಕಾರಿ ಮತ್ತು ಹಣ್ಣುಗಳು ಕ್ಯಾನ್ಸರ್ಕಾರಕಗಳಾಗುತ್ತಿವೆ. ಮಾನವನ ಆಯುಷ್ಯ ದಿನೇ ದಿನೇ ಕುಸಿಯುತ್ತಿದೆ ಎಂದು ತಿಳಿಸುತ್ತಾ ಪರಿಸರ ರಕ್ಷಣೆ ಹಾಗೂ ಸಸಿ ಬೆಳೆಸುವ ಬಗ್ಗೆ ಮಾಹಿತಿ ನೀಡಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಸುಬ್ರಾಯ ಹಂದೆ ಹಾಗೂ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಕೆ. ಇಂದ್ರಾಕ್ಷಿ ಉಡುಪ ಸಮಯೋಚಿತವಾಗಿ ಮಾತನಾಡಿದರು. ಕೋಟೇಶ್ವರ ವಲಯ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಸುಮಾರು 70 ಸದಸ್ಯರು ಹಾಜರಿದ್ದು ಪ್ರೌಢಶಾಲಾ ವಠಾರದಲ್ಲಿ ಸುಮಾರು 60 ಸಸಿಗಳನ್ನು ನೆಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ವಿದ್ಯಾಥರ್ಿಗಳಾದ ಅಭಿಷೇಕ್ ನಿರೂಪಿಸಿ, ಸುಮಂಗಲಾ ಸ್ವಾಗತಿಸಿದರು, 10ನೆ ತರಗತಿಯ ಅಶ್ವಿತಾ ವಂದಿಸಿದರು.
ಪೋಟೋ;
ಗಣಪತಿ.ಟಿ.ಶ್ರೀಯಾನ್ ಕಾರ್ಯಕ್ರಮ ಉದ್ಘಾಟಿಸಿದರು
ಕೃಷಿ ಅಧಿಕಾರಿ ವಿಷ್ಣು ಎನ್.ಎಮ್. ಪ್ರಸ್ತಾವನೆಗೈದರು
 
ನಿಮ್ಮ ಪ್ರತಿಕ್ರಿಯೆ ಬರೆಯಿರಿ ಕುಂದಾಪ್ರ.ಕಾಂ> editor@kundapra.com