ತೆಕ್ಕಟ್ಟೆ:ರಕ್ಷಾಬಂಧನ ಆಚರಣೆ.

ಕುಂದಾಪುರ: ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾಕೇಂದ್ರದಲ್ಲಿ  ರಕ್ಷಾಬಂಧನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ಸಹನಾ ಡೆವಲಪ್ಪರ್ಸ್‍ನ ಮಾಲಕ ಸುರೇಂದ್ರ ಶೆಟ್ಟಿ ಮಾತನಾಡಿ ``ಅಣ್ಣ ತಂಗಿಯರ ಬಾಂದವ್ಯವನ್ನು ಸಾರುವ ರಕ್ಷಬಂಧನದ ಆಚರಣೆಯ ಮಹತ್ವವನ್ನು ಅರಿಯಬೇಕು.  ಹಿಂದೂ ಸಂಸ್ಕøತಿ, ಸಂಸ್ಕಾರಗಳನ್ನು ಸಂಪನ್ನಗೊಳಿಸುವ ಶಾಲೆಯ ಶಿಕ್ಷಣ ವ್ಯವಸ್ಥೆ ನಿಜಕ್ಕೂ ಶ್ಲಾಘನೀಚಿiÀುವಾದದ್ದು ಎಂದರು. ಶಾಲಾ ಸಂಚಾಲಕ ಶ್ರೀಯುತ ಟಿ.ರಮೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು.ಪ್ರೌಢಶಾಲಾ ಪ್ರಾಚಾರ್ಯರಾದ ಶ್ರೀಯುತ ಸುಬ್ರಾಯ ಹಂದೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಕೆ.ಇಂದ್ರಾಕ್ಷಿ ಉಡುಪ ಪ್ರಸ್ತಾವನೆಗೈದು, ವಿದ್ಯಾರ್ಥಿನಿ ಚಿಂತನಾ ಧನ್ಯ ನಿರೂಪಿಸಿದರು. ವರುಣ್ ಸ್ವಾಗತಿಸಿ, ಪ್ರತೀಕ್ಷಾ ಮಧ್ಯಸ್ಥ ವಂದಿಸಿದರು.
ನಿಮ್ಮ ಪ್ರತಿಕ್ರಿಯೆ ಬರೆಯಿರಿ
 ಕುಂದಾಪ್ರ.ಕಾಂ> editor@kundapra.com