ತೆಕ್ಕಟ್ಟೆಯಲ್ಲಿ "ಯುವಚೇತನ- ರಾಷ್ಟ್ರಚಿಂತನ"

ಕುಂದಾಪುರ: ಯುವಕರುಗಳಲ್ಲಿ ರಾಷ್ಟ್ರಚಿಂತನೆ ಮೂಡಿಸುವ ಪವಿತ್ರ ಕೆಲಸ ನಡೆಯಬೇಕಿದೆ. ಭಾರತಾಂಬೆಯ ಮಕ್ಕಳಾದ ನಾವುಗಳು ದೇಶಕಟ್ಟುವ ಚೇತನವಾಗಬೇಕು ಎಂದು ಸಾಲಿಗ್ರಾಮ ಡಿವೈನ್ ಪಾರ್ಕ್ ನ ಅಧಿಕಾರಿ ಸುಬ್ರಮಣ್ಯ ಇವರು ಹೇಳಿದರು. ಅವರು ಇತ್ತೀಚೆಗೆ ತೆಕ್ಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜು, ವಿವೇಕ ಜಾಗ್ರತ ಬಳಗ ಕುಂದಾಪುರ, ರೋಟರಿ ಕ್ಲಬ್ ತೆಕ್ಕಟ್ಟೆ, ಹಾಗೂ ಕೋಟೇಶ್ವರ ಇವರುಗಳ ಸಂಯುಕ್ತ ಆಶ್ರಯದಲ್ಲಿ ತೆಕ್ಕಟ್ಟೆ ಪದವಿಪೂರ್ವ ಕಾಲೇಜಿನಲ್ಲಿ ವಿವೇಕಾನಂದರ 150ನೇ ಜನ್ಮ ದಿನಾಚರಣೆಯ ಅಂಗವಾಗಿ ಜರುಗಿದ "ಯುವಚೇತನ- ರಾಷ್ಟ್ರಚಿಂತನ" ಕಾರ್ಯಕ್ರಮದಲ್ಲಿ ಮಾತನಾಡಿದರು.
       ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಡಿ.ಎಸ್ ಶೈಲಜಾ ಅಧ್ಯಕ್ಷತೆ ವಹಿಸಿದ್ದರು. ಕೋಟೇಶ್ವರ ಹಾಗೂ ತೆಕ್ಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷರುಗಳಾದ ನಾಗರಾಜ ಆಚಾರ್ ಸುಧಾಕರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.