ಸಪ್ತ ಕಲಾವಿದರ ಬಹುವರ್ಣ ಕಲಾಕೃತಿಗಳ ಪ್ರದರ್ಶನ


      ಏಳು ಸಂಖ್ಯೆಗೂ ಬಣ್ಣಗಳಿಗೂ ಸಂಬಂಧ. ಏಳು ಬಣ್ಣ ಸೇರಿ ಬಿಳಿ ಬಣ್ಣವಾಯಿತು ಅನ್ನುವುದು ಲೋಕೋಕ್ತಿ. ಇಲ್ಲಿ ಏಳು ಮಂದಿ ಖ್ಯಾತ ಕಲಾವಿದರು ಸೇರಿ ಬಣ್ಣ ಬಣ್ಣದ ಚೆಲುವಿನ ಚಿತ್ತಾರಗಳ ಮೂಲಕ ರಂಗೇರಿಸುವ ಲೋಕವನ್ನು ಮೂಡಿಸಿದ್ದಾರೆ.
      ಹೌದು, ಸೆಪ್ಟಂಬರ್ 9 ರಿಂದ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಹೊರ ರಾಜ್ಯಗಳ ಅನುಭವೀ, ಪ್ರಸಿದ್ಧ ಕಲಾವಿದರು 6 ದಿನಗಳ ಕಲಾಪ್ರದರ್ಶನದಲ್ಲಿ ಬಹುವಿಧ ವಿಷಯ,ವಿನ್ಯಾಸ, ಬಣ್ಣಗಳ ಗ್ರಹಿಕೆ ಮೂಲಕ ಸಾರ್ಥಕತೆಯ ಭಾವ ತಳೆದಿದ್ದಾರೆ
ಏಳು ಮಂದಿ ಕಲಾವಿದರಲ್ಲಿ ಐವರು ಮಾಯಾನಗರಿ ಮುಂಬಯಿಯವರು. ಒಬ್ರು ಕೇರಳದವರು ಮತ್ತೊಬ್ಬರು ಬಲ್ಲೇ ಬಲ್ಲೇ ಪಂಜಾಬಿನವರು ಇನ್ನೊಬ್ಬರು ಗುಜರಾತ್ ಮೂಲದವರು. ಈಗಾಗಲೆ ಹೆಸರು ಮಡಿರುವ ಬಹುತೇಕ ಹಿರಿಯ ಕಲಾವಿದರು ಒಂದೊಂದಾಗಿದ್ದವರು ಒಂದಾದುದು ಪ್ರದರ್ಶನಕ್ಕಾಗಿಯೇ ಆಗಿದೆ.
      ಬೇರೆ ಬೇರೆ ರಾಜ್ಯದ ಕಲಾವಿದರು ಒಂದಾದ ಮಾಧ್ಯಮ ಕಲಾಪ್ರದರ್ಶನ. ಅವರವರ ಆಲೋಚನಾ ಲಹರಿ, ಅವರವರ ಶೈಲಿ,ಅವರವರ ಊರಿನ-ಕಲಾಶೈಲಿಯ ಪ್ರಭಾವ ಎಲ್ಲವೂ ಮೆಳೈಸಿರುವುದು ಪ್ರದರ್ಶನವನ್ನು ವಿಶಿಷ್ಟವಾಗಿಸಿವೆ. ಜೊತೆಗೆ ಇಬ್ಬರು ಶಿಲ್ಪಗಳನ್ನು ಪ್ರದಶರ್ಿಸುತ್ತಿರುವುದು ಚಿತ್ತ ಮತ್ತು ಶಿಲ್ಪ ಕಲಾಸಕ್ತ ಪ್ರೇಕ್ಷಕರಿಗೆ ಇಮ್ಮಡಿ ಖುಷಿ ಕೊಟ್ಟಿದೆ.
         ಶ್ರೀಮತಿ  ವಿಜಯಲಕ್ಷ್ಮಿ ಡಿ ಮೇರ್ ಅವರು ಮಹಿಳಾ ಲೋಕ, ದೀಪಕ್ ವಾಂಖೆಡೆ ಭಾರತೀಯ ಭೂಚಿತ್ರಣಗಳನ್ನು, ಬಾಬು ಅವರು ಸರಳ ಗಾಸಿಪ್ಗಳಿಗೆ ಕಲಾರೂಪವನ್ನು, ದೀಪಕ್  ಮೇರ್ ಅವರ ಅವ್ಯಕ್ತ ವಿಷಯಗಳನ್ನು ಬಣ್ಣಗಳಲ್ಲಿ ಚಿತ್ರಿಸಿದ್ದಾರೆ. ಕುಲ್ದೀಪ್ ಕಾರೇಗಾಂವ್ಕರ್ ಅವರು ಅವ್ಯಕ್ತ ಚಿತ್ರಗಳಲ್ಲಿ ಬಣ್ಣದ ಸಂದೇಶವನ್ನು, ಬಾಬು ಸಾಹೇಬ್ ಝೆಂಜೆ ಅವರು ಗಾಸಿಫ್ ( ಗಾಳಿ ಸುದ್ದಿ) ಗಳನ್ನು ಆಧಾರವಾಗಿಸಿ ಚಿತ್ತಾರ ಬರೆದಿದ್ದಾರೆ.
         ಗುಂಪಿನ ಯುವ ಕಲಾವಿದೆ ರಾಧಿಕಾ ದೇಶಪಾಂಡೆ ಮತ್ತು ಚರಣ್ಜೀತ್ ಸಿಂಗ್ ತಮ್ಮ ಕಲಾತ್ಮಕಚಿಂತನೆಗಳನ್ನು ಮರ,ಮುರ, ಕಲ್ಲು ಮತ್ತಿತರ ಘನ ವಸ್ತುಗಳನ್ನು ಬಳಸಿ ಯಾರಾದರೂ ಒಂದು ಕ್ಷಣ ನಿಂತೇ ಬಿಡುವಂತಹ ಕಲಾಕೃತಿಗಳನ್ನು ಪ್ರದಶರ್ಿಸುತ್ತಿದ್ದಾರೆ. ಒಟ್ಟು ಬಹುವಿಧ ಆಲೋಚನೆ, ಬಹು ಬಗೆಯ ವರ್ಣ ಸಂಯೋಜನೆ, ಸರಳವೆಂದರೆ ಸರಳ ಕ್ಲಿಷ್ಟವೆಂದರೆ ಕ್ಲಿಷ್ಟವೆಂಬಂತಹ ಆಕರ್ಷಕ ಕೃತಿಗಳು,ಮೂರ್ಕಾಲ್ಕು ರಾಜ್ಯದ ಯೋಚನೆಗಳು,ನಾಲ್ಕಾರು ಚಿತ್ರ ಪರಂಪರೆಯ ಸಮ್ಮಿಲನ ಇದು ಪ್ರದರ್ಶನ ಒಟ್ಟಂದಕ್ಕೆ ಒಪ್ಪವಿಟ್ಟ ಅಂಶಗಳು.
ಬರಹ:-ಶೇಖರ ಅಜೆಕಾರು
ಪತ್ರಕರ್ತರು
         ಉದ್ಘಾಟಕ ಪ್ರೊ. ಅಂದಾನಿ ಅವರಂದಂತೆ ಬೇರೆ ಬೇರೆ ರಾಜ್ಯದವರು ಬೇರೆ ಬೇರೆ ರಾಜ್ಯಗಳಲ್ಲಿ ತಮ್ಮ ಕೃತಿ ಪ್ರದರ್ಶನ ಮಾಡುವುದು ಕಲಾವಿದರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಮತ್ತು ಶೈಲಿ ವಿಚಾರಗಳ ವಿನಿಮಯಕ್ಕೆ ಅನುಕೂಲವಾಗುತ್ತದೆ.ಇದು ಪ್ರದರ್ಶನದಲ್ಲಿ ಎದ್ದು ಕಾಣುವ ಅಂಶ. ಒಂದಾಗಿ ಬನ್ನಿ, ಎಲ್ಲರೂ ಒಂದಾಗಿ ಬನ್ನಿ, ಒಮದಾಗಿ ಮುಂದಡಿ ಇಡೋಣ ಎಂಬ ತಂಡದ ಆಶಯ ಶಬ್ದಗಳಲ್ಲಿ ಕೇಳಿದೆ, ಚಿತ್ರಗಳಲ್ಲಿ ಪಡಿ ಮೂಡಿದೆ. ಈ ಒಂದಾಗುವ ಆಶಯ ಕಲೆಯ-ಕಲಾವಿದರ ನಮ್ಮೆಲ್ಲರ ಆಶಯವಾಗಿ, ಗಟ್ಟಿಯಾಗಿ ದೇಶದ ಏಕತೆ ಉಳಿಯಲಿ ಬೆಳೆಯಲಿ.
                                                                                                More Photos>>