ಬ್ರಾಹ್ಮಣ ಪರಿಷತ್ ವತಿಯಿಂದ ವಿದ್ಯಾರ್ಥಿ ಸಹಾಯ ಧನ ವಿತರಣೆ

ಕುಂದಾಪುರ: ಕೊಟೇಶ್ವರ ವಲಯ ಬ್ರಾಹ್ಮಣ ಪರಿಷತ್ ವತಿಯಿಂದ ವಿದ್ಯಾರ್ಥಿ  ಸಹಾಯ ಧನ ವಿತರಣಾ ಸಮಾರಂಭ ಕೋಟೇಶ್ವರದ ಶ್ರೀ ಕೋದಂಡರಾಮ ಮಂದಿರದಲ್ಲಿ ಜರುಗಿತು.
       ದ್ರಾವಿಡ ಬ್ರಾಹ್ಮಣ ಪರಿಷತ್ ಕೊಟೇಶ್ವರ ವಲಯಾಧ್ಯಕ್ಷ ವೈ.ಎನ್.ವೆಂಕಟೇಶಮೂರ್ತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿದ್ವಾನ್ ಕೆ.ರಾಘವೇಂದ್ರ ಪುರಾಣಿಕ, ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಕೆ.ಶ್ರೀನಿವಾಸ ಹೆಬ್ಬಾರ್, ಮಹಿಳಾ ವೇದಿಕೆಯ ಅಧ್ಯಕ್ಷೆ ಸರಸ್ವತಿ ವಿ. ಉಡುಪ  ಉಪಸ್ಥಿತರಿದ್ದರು. 
       ಡಾಕ್ಟರೇಟ್ ಪದವಿ ಪಡೆದ ಸಂಸ್ಕೃತ ಉಪನ್ಯಾಸಕ, ಡಾ || ಪ್ರಸನ್ನ ಕುಮಾರ್ ಐತಾಳ್ ಮತ್ತು ಶ್ರೀ ಕೋದಂಡರಾಮ ಮಂದಿರದ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ದೊಡ್ಮನೆ ನಾಗೇಂದ್ರ ಭಟ್ಟರನ್ನು ಗೌರವಿಸಲಾಯಿತು.
     ವಿಮಲಾ ವಿ ಭಟ್ ಕಾರ್ಯಕ್ರಮ ನಿರೂಪಿಸಿ,  ವಲಯ ಕಾರ್ಯದಶರ್ಿ ಅನಂತಪದ್ಮನಾಭ ಉಡುಪ ಸ್ವಾಗತಿಸಿದರು. ಡಾ || ಪ್ರಸನ್ನ ಕುಮಾರ ಐತಾಳ ವಂದಿಸಿದರು. 
      ಬ್ರಾಹ್ಮಣ ಪರಿಷತ್ ಹಮ್ಮಿಕೊಂಡ, ರಮಾದೇವಿ ಮತ್ತು ಕೋಣಿ ರಾಮಕೃಷ್ಣ ಪುರಾಣಿಕ ಪ್ರಾಯೋಜಿತ 'ಧಾಮರ್ಿಕ ಜಾಗೃತಿಗಾಗಿ ಭಾಗವತ' ಸರಣಿ ಕಾರ್ಯಕ್ರಮದಂಗವಾಗಿ, ಪುರಸ್ಕಾರ ಸಮಾರಂಭದ ಮುನ್ನ ಉಡುಪಿ ಪಯರ್ಾಯ ಶ್ರೀ ಸೋದೆ ಮಠದ ವಿದ್ವಾನ್ ಕೆ. ರಾಘವೇಂದ್ರ ಪುರಾಣಿಕರು ಭಾಗವತ ಪ್ರವಚನ ನಡೆಸಿಕೊಟ್ಟರು.