ಕುಂದಾಪುರ: ಏ-ಒನ್ ಸ್ಪೋಟ್ರ್ಸ್ ಅಕಾಡೆಮಿ ಕೋಟೆಶ್ವರ ಇವರ ಆಶ್ರಯದಲ್ಲಿ ಭಾನುವಾರ ಕೋಟೇಶ್ವರದ ವಿಶ್ವಕರ್ಮ ಸಭಾಭವನದಲ್ಲಿ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯನ್ನು ಎರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಸುಮಾರು 72 ಸ್ಪರ್ಧಾಳುಗಳು ಭಾಗವಹಿಸಿದ್ದರು.
ಭಾನುವಾರ ನಡೆದ ಸಮಾರೋಪ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿ ಕೋಟೆಶ್ವರ ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಟಿ.ಶ್ರೀಯಾನ್ ಮಾತನಾಡಿ `` ಒಳಾಂಗಣ ಕ್ರೀಡೆಯಾದ ಚದುರಂಗದಾಟ ಮಕ್ಕಳ ಬೌದ್ದಿಕ ಮತ್ತು ಮಾನಸಿಕ ಆತ್ಮ ಸ್ಥೈರ್ಯವನ್ನು ಹೆಚ್ಚುಗೊಳಿಸಿ ಏಕಾಗ್ರತೆಯನ್ನು ಇಮ್ಮಡಿಗೊಳಿಸುತ್ತದೆ, ಇಂಥಹ ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿದಂತಹ ಏ-ಒನ್ ಸ್ಪೋಟ್ರ್ಸ್ ಅಕಾಡೆಮಿ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ'' ಎಂದರು.
ಶಾರದಾ ಕಾಲೇಜು ಬಸ್ರೂರು ಇಲ್ಲಿಯ ಪ್ರಾಂಶುಪಾಲರಾದ ಚಂದ್ರಪ್ರಭಾ ಮಾತನಾಡಿ `` ಶಿಕ್ಷಣವೆಂದರೆ ಅಂಕ ಗಳಿಸುವುದು ಮಾತ್ರವಲ್ಲ ವ್ಯಕ್ತಿತ್ವ ನಿರ್ಮಾಣ ಆಗಬೇಕಾಗಿದೆ, ಮಗುವಿನಲ್ಲಿರುವ ಅಂತರ್ಗತ ಪ್ರತಿಭೆಯನ್ನು ಗುರುತಿಸಿ ಆ ಸುಪ್ತ ಪ್ರತಿಭೆಯನ್ನು ಹೊರ ಬಿಂಬಿಸುವಲ್ಲಿ ಪೆÇೀಷಕರ ಪಾತ್ರ ಪ್ರಾಮುಕ್ಯವಾದುದು'' ಎಂದರು.
ಉಡುಪಿ ಜಿಲ್ಲಾ ಚೆಸ್ ಅಸೋಷಿಯೇಶನ್ ಅಧ್ಯಕ್ಷ ರಾಜಗೋಪಾಲ ಶೈಣೈ, ವಿಶ್ವಕರ್ಮ ಸಮಾಜ ಕೋಟೆಶ್ವರ
ಇಲ್ಲಿಯ ಅಧ್ಯಕ್ಷ ಆನಂದ ಆಚಾರ್ಯ, ಜ್ಯೋತಿ ಜ್ಯುವೆಲ್ಲರ್ಸ್ ಕೋಟೇಶ್ವರದ ಮಾಲಕ ಚಂದ್ರಮೋಹನ ಶೇಟ್, ಏ-ಒನ್ ಸ್ಪೋಟ್ರ್ಸ್ ಅಕಾಡೆಮಿ ಕೋಟೆಶ್ವರದ ಅಧ್ಯಕ್ಷ ರಾಜೇಶ ಪ್ರಭು, ರೋಟರಿ ಕೆ.ಆರ್. ನಾಯಕ್. ಎಸ್.ಬಿ. ಐತಾಳ್ ತೀರ್ಪುಗಾರರಾದ ಬಾಬು ಪೂಜಾರಿ, ರತ್ನಾಕರ ಶೆಟ್ಟಿ ಮತ್ತಿತರು ಉಪಸ್ಥಿತರಿಉದ್ದರು.
ಪುರುಶೋತ್ತಮ ಕಾಮತ್ ಕೋಟೆಶ್ವರ ಪ್ರಾಸ್ತಾವಿಕ ಮಾತುಗಳಲ್ಲಿ ಸಂಸ್ಥೆಯ ಸ್ಥೂಲ ಪರಿಚಯ ಮಾಡಿ ವಂದನಾರ್ಪಣೆಗೈದರು, ನರೇಶ್ ನಿರೂಪಿಸಿದರು.
ಫಲಿತಾಂಶ:
10 ವರ್ಷದೊಳಗಿನ ವಿಭಾಗ; ಪ್ರಥಮ; ಸಿದ್ದಾರ್ಥ, ದ್ವಿತೀಯ: ರೋಹಿತ್ ಕಾಮತ್, ತ್ರತೀಯ; ಸುಚೀತಾ ಎಸ್.ಶೆಟ್ಟಿ, ಚತುರ್ಥ; ಮನೀಶ್.ಜಿ.ಶ್ರೀಯಾನ್, ಪಂಚಮ;ಪ್ರತ್ವೀಕಾ, ಷಷ್ಟ; ಮೇಘನಾ ಪ್ರಭು, ಸಪ್ತಮ; ರೋಹನ ಶೆಟ್ಟಿ.
12 ವರ್ಷದೊಳಗಿನ ವಿಭಾಗ; ಪ್ರಥಮ; ಅಮೂಲ್ಯ ಶೆಟ್ಟಿ, ದ್ವಿತೀಯ; ವಿಯೋಲ್, ತ್ರತೀಯ;ರಜತ್, ಚತುರ್ಥ; ಮನೀಶ್, ಪೂರ್ಣೇಶ್, ಪಂಚಮ; ಸಂಭ್ರಮ್, ಷಷ್ಟಮ: ಯತೀಶ್
14 ವರ್ಷದೊಳಗಿನ ವಿಭಾಗ; ಪ್ರಥಮ;ಅಮ್ರತಾ, ದ್ವಿತೀಯ; ವ್ರದ್ದಿಕಾ, ತ್ರತೀಯಾ ;ಗಣೇಶ್ ಚತುರ್ಥ; ಸುಕನ್ಯಾ ಶೆಟ್ಟಿ, ಪಂಚಮ; ವಿಘ್ನೇಶ್, ಷಷ್ಟಮ: ಶ್ರೇಯಸ್, ಸಪ್ತಮ; ಕಿರಣ್
ಅಂಡರ್ ಓಪನ್ ವಿಭಾಗ; ಪ್ರಥಮ; ಶ್ರವಣ ಪ್ರಭು, ದ್ವಿತೀಯ; ಅಕ್ಷಯ ಐತಾಳ್, ತ್ರತೀಯ; ಪ್ರಜ್ವಲ ಬಿ.ಸಿ. ಚತುರ್ಥ: ಬಿ.ಕೆ.ಮಂಜುನಾಥ, ಪಂಚಮ: ಕೌಶಿಕ್ ಉಡುಪ