ತಾಲೂಕಿನ ಪ್ರಮುಖ ದೇವಳ ಸೇರಿದಂತೆ ಏಲ್ಲೆಡೆ ಚೌತಿ ಸಂಭ್ರಮ

ಕುಂದಾಪುರ: ಗಣೇಶ ಚತುರ್ಥಿಯ ಅಂಗವಾಗಿ ವಿಘ್ನನಿವಾರಕನಾದ ಗಣಪನನ್ನು ತಾಲೂಕಿನ ಆನೆಗುಡ್ಡೆ, ಹಟ್ಟಿಯಂಗಡಿ ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ, ಸಾರ್ವಜನಿಕ ಗಣೇಶೋತ್ಸವಗಳಲ್ಲಿ, ಮನೆಗಳಲ್ಲಿ ಭಕ್ತಿ ಭಾವದಿಂದ ಪೂಜಿಸಲಾಯಿತು.

  ಕುಂಭಾಶಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ

       ಸಿದ್ದಿ ಕ್ಷೇತ್ರ ಎಂದೇ ಪ್ರಖ್ಯಾತವಾದ ಕರಾವಳಿಯ ಸಪ್ತ ಮೋಕ್ಷ ಕ್ಷೇತ್ರಗಳಲ್ಲೋಂದಾದ ಕುಂಭಾಸಿ (ಕುಂಭಕಾಸಿ, ಕುಂಭಾಶಿ)ಯ ಆನೆಗುಡ್ಡೆ ಸ್ರೀ ವಿನಾಯಕ ದೇವಾಲಯದಲ್ಲಿ ಗಣೇಶ ಚತುರ್ಥಿ ಸಂಭ್ರಮದಿಂದ ನಡೆಯಿತು. 
        ಈ ವರ್ಷ ನಂದನ ನಾಮ ಸಂವತ್ಸರ ಬಾದ್ರಪದ ಶುದ್ಧ ಚತುರ್ಥಿಯಂದು ಆನೆಗುಡ್ಡೆ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯನ್ನು ವಿಶೇಷವಾಗಿ ಆಯೋಜಿಸಲಾಗಿತ್ತು. ಅಷ್ಟೋತ್ತರ ಸಹಸ್ರ ನಾರೀಕೇರ ಗಣಯಾಗ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಿದ್ಧಿವಿನಾಯಕನ ಸನ್ನಿಧಿಯಲ್ಲಿ ಜರುಗಿದವು. ಸಾಂಸ್ಕ್ರತಿಕ ಕಾರ್ಯಕ್ರಮವಾಗಿ ಸಂಜೆ ಮಂಗಳೂರಿನ ಜ್ಞಾನ ಐತಾಳ್ ಹಾಗೂ ಬಳಗದವರಿಂದ ನೃತ್ಯ ಮತ್ತು ಸುಗಮ ಸಂಗೀತ, ಯಕ್ಷಶ್ರೀ ಪ್ರವಾಸಿ ಯಕ್ಷಗಾನ ಮೇಳದಿಂದ ಬಯಲಾಟ, ಬುಧವಾರ ಮಹಾಗಣಪತಿ ವಾದ್ಯವೃಂದ ಕುಂಭಾಸಿ ಇವರಿಂದ ಸ್ಯಾಕ್ಸೋಫೋನ್ ವಾದನ, ಗಜಾನನ ಯಕ್ಷಗಾನ ಪ್ರಸಾಧನ ಹಂದಟ್ಟು, ಕೋಟ ಇವರಿಂದ ದಶಾವತಾರ ಸೇವೆಯಾಟ ನಡೆಯಿತು
ದೇವಸ್ಥಾನದ ಅನುವಂಶಿಂಕ ಆಡಳಿತ ಮೊಕ್ತೇಸರರಾದ ಕೆ. ಲಕ್ಷ್ಮೀನಾರಾಯಣ ಉಪಾದ್ಯಾಯ, ಅನುವಂಶಿಕ ಪರ್ಯಾಯ ಅರ್ಚಕರಾದ ಕೆ. ಬಾಲಚಂದ್ರ ಉಪಾದ್ಯಾಯ ಹಾಗೂ ಸಹೋದರರು, ಅನುವಂಶಿಕ ಮೊಕ್ತೇಸರರಾದ ಕೆ. ಸೂರ್ಯನಾರಾಯಣ ಉಪಾದ್ಯಾಯ ಹಾಗೂ ಕೆ. ಶ್ರೀರಮಣ ಉಪಾದ್ಯಾಯರ ಮೇಲುಸ್ತುವಾರಿಯಲ್ಲಿ ಗಣೇಶ ಚತುಥರ್ಿ ಅದ್ದೂರಿಯಾಗಿ ನೆರವೇರಲಿದೆ.

ಹಟ್ಟಿಯಂಗಡಿಯಲ್ಲಿ ಸಂಭ್ರಮದ ಗಣೇಶ ಚೌತಿ

          ಹಟ್ಟಿಯಂಗಡಿಯ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಆಡಳಿತ ಧರ್ಮದರ್ಶಿ ಹಟ್ಟಿಯಂಗಡಿ ರಾಮಚಂದ್ರ ಭಟ್ಟರ ನೇತೃತ್ವದಲ್ಲಿ ಈ ವರ್ಷ ಗಣೇಶ ಚೌತಿಯನ್ನು ಮೂರು ದಿನಗಳ ಕಾಲ ಸಡಗರದಿಂದ ಆಚರಿಸಲಾಗುತ್ತಿದೆ. ಬುಧವಾರ ಬೆಳಿಗ್ಗೆ 8ರಿಂದ ಶ್ರೀ ಮಹಾಗಣಪತಿ ಹೋಮ ಸಂಕಲ್ಪ ನಡೆಯಿತು. ಮಧ್ಯಾಹ್ನ 12ಕ್ಕೆ 1008 ತೆಂಗಿನಕಾಯಿ ಮಹಾಗಣಪತಿ ಹವನದ ಪೂಣರ್ಾಹುತಿ ಮಹಾಪೂಜೆ, ಮಹಾ ಸಂತರ್ಪಣೆ ನಡೆಯಿತು. ಇದೇ ಸಂದರ್ಭದಲ್ಲಿ ಮಂಗಳೂರಿನ ಕದ್ರಿ ರಮೇಶ್ ನಾಥ್ ಹಾಗೂ ಬಳಗದವರಿಂದ ವಿಶೇಷ ವಾದ್ಯ ಗೋಷ್ಟಿ, ಸಂಜೆಯ ನಂತರ ರಂಗ ಪೂಜಾದಿ ಕಾರ್ಯಕ್ರಮಗಳು ನಡೆಯಿತು.
         ಗುರುವಾರ ಬೆಳಿಗ್ಗೆ 10ರಿಂದ ಶ್ರೀ ಸತ್ಯ ಗಣಪತಿ ವೃತ ಹಾಗೂ ಕಥಾ ನಿರೂಪಣೆ ನಡೆದರೆ ಮಧ್ಯಾಹ್ನ 1 ಗಂಟೆಗೆ ಮಹಾ ಪೂಜೆ ಹಾಗೂ ಮಂಗಳಾರತಿ ನಡೆಯಲಿದೆ. ಸಂಜೆ 6,30ರಿಂದ ಮೂಕಾಂಬಿಕಾ ನೃತ್ಯ ಶಾಲೆ ದಬರ್ೇ ಪುತೂರಿನ ವಿದ್ವಾನ್ ದೀಪಕ್ ಕುಮಾರ್ ಮತ್ತು ಸಂಗಡಿಗರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
        ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಲಕ್ಷ ದೂವರ್ಾರ್ಚನೆ ಹಾಗೂ ಸಿಂಧೂರಾರ್ಚನೆ ನಡೆದರೆ, ಮಧ್ಯಾಹ್ನ ಎಂದಿನಮತೆ ಮಹಾ ಪೂಜೆ ಹಾಗೂ ಮಹಾಮಂಗಳಾರತಿ ನಡೆಯಲಿದೆ. ಸಂಜೆ 4ರಿಂದ ಧಾಮರ್ಿಕ ಸಬೆ ಹಾಗೂ ಸನ್ಮಾನ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ. ಪ್ರಭಾಕರ ಶರ್ಮ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಾದ ಕೋಟ, ಹೆಚ್. ಹರಿಕೃಷ್ಣ ಹಂದೆ ಹಾಗೂ ಯಕ್ಷಗಾನ ಕಲಾವಿದರಾದ ನೆಬ್ಬುರು ನಾರಾಯಣ ಭಾಗವತರನ್ನು ಮಂಗಳೂರಿನ ಜಿಲ್ಲಾಧಿಕಾರಿಗಳಾದ ಡಾ.ಕೆ.ಚಿನ್ನಪ್ಪ ಗೌಡ ಸನ್ಮಾನಿಸಲಿದ್ದಾರೆ. ಎ.ಸಿ. ಸದಾಶಿವ ಪ್ರಭು, ಬೆಂಗಳೂರಿನ ಅರುಣ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಗಣೇಶ ದೇವಾಲಯ ಗುಡ್ಡಟ್ಟು

         ಬಾರ್ಕೂರು ಮಂದರ್ತಿ ಮಾರ್ಗವಾಗಿ ಸಾಗಿದಾಗ ಪ್ರಸಿದ್ದ ಗುಡ್ಡಟ್ಟು ದೇವಾಲಯ ತಲುಪಬಹುದು. ಚಿಕ್ಕದಾದ ಗುಹೆಯೊಂದರೊಳಗೆ ಬಂಡೆಯ ರೂಪದಲ್ಲಿ ಕಾಣುತ್ತದೇ ಇಲ್ಲಿನ ಗಣಪತಿಯ ಶಿಲಾ ವಿಗ್ರಹ . ಆಯಿರಕೊಡ(ಸಾವಿರಕೊಡ) ಇಲ್ಲಿನ ವಿಶೇಷ ಪೂಜಾ ವಿಧಿ. ಮೊದಲು ಗುಹೆಯೊಳಗಿನ ನೀರನ್ನು ಸಂಪೂರ್ಣ ಖಾಲಿ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಂತರ ಅರ್ಚಕರಿಂದ ಹೊರಾಂಗಣದಲ್ಲಿರುವ ಬಾವಿಯಿಂದ ನೀರು ತಂದು ಗುಹೆಗೆ ಹುಯ್ಯಲಾಗುತ್ತದೆ. ಗಣೇಶ ಚತುರ್ಥಿ  ದಿನ ನಡೆಯುವ ಈ ಪೂಜೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಘೋಂಡು ಪ್ರಸಾದ ಸ್ವೀಕರಿಸುತ್ತಾರೆ.

     ದೇವಾಲಯಗಳನ್ನು ಹೊರತು ಪಡಿಸಿ ತಾಲೂಕಿನ ಹಲವೆಡೆ ಸಾರ್ವಜನಿಕ ಗಣೇಶೋತ್ಸವ, ಹಾಗೂ ವಿವಿಧ ಗಣಪತಿ ಮಂದಿರಗಳಲ್ಲಿ ಸಂಭ್ರಮದಿಂದ  ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಇನ್ನು ಸಂಘ ಸಂಸ್ಥೆಗಳಿಂದ ವಿವಿಧ ಸ್ಪಧರ್ೆಗಳು, ಮನೋರಂಜನಾ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ತಾಲೂಕಿನ ಶಿರೂರು, ಬೈಂದೂರು, ಉಪ್ಪುಂದ, ನಾಗೂರು, ತ್ರಾಸಿ, ಹೆಮ್ಮಾಡಿ, ತಲ್ಲೂರು, ಕುಂದಾಪುರ, ಕೋಟೇಶ್ವರ, ಬೀಜಾಡಿ, ಉಪ್ಪಿನಕುದ್ರು, ಹಟ್ಟಿಕುದ್ರು, ಬಸ್ರೂರು, ವಂಡ್ಸೆ, ಕಟ್ಕೆರೆ, ಸಿದ್ದಾಪುರ, ಅರೆಹೊಳೆ ಮೊದಲಾದೆಡೆ ವಿಶೇಷ ಪೂಜೆವಿಧಿಗಳು ನಡೆದವು. ಇನ್ನು ಹಲವರ ಮನೆಗಳಲ್ಲಿಯೂ ಗಣಪನ ಪೂಜೆ ಭಕ್ತಿಪೂರ್ವಕವಾಗಿ ಜರುಗಿತು.
-ಯೋಗಿ