ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿಗೆ ಜೇಸಿ ಸಾಧನಾಶ್ರೀ ಪ್ರಶಸ್ತಿ ಪ್ರದಾನ

ಬೈಂದೂರು: ಉಪ್ಪುಂದ ಜೇಸಿಐ ವತಿಯಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟವಾದ ಸಾಧನೆಗೈದವರಿಗೆ ಕೊಡಮಾಡುವ 2012-13ನೇ ಸಾಲಿನ ಜೇಸಿ ಸಾಧನಾಶ್ರೀ ಪ್ರಶಸ್ತಿಯನ್ನು ಉದಯವಾಣಿ ವರದಿಗಾರ ಚಂದ್ರ ಕೆ. ಹೆಮ್ಮಾಡಿಯವರಿಗೆ ಪ್ರದಾನ ಮಾಡಲಾಯಿತು.
        ಉಪ್ಪುಂದ ಶಂಕರ ಕಲಾಮಂದಿರದಲ್ಲಿ ರವಿವಾರ ಸಂಜೆ ಜರುಗಿದ ಸಮಾರಂಭದಲ್ಲಿ ಜೇಸಿ ಸಪ್ತಾಹವನ್ನು ಉದ್ಘಾಟಿಸಿದ ಬೈಂದೂರು ಶಾಸಕ ಕೆ. ಲಕ್ಷ್ಮೀನಾರಾಯಣ ಅವರು ಚಂದ್ರ ಕೆ. ಹೆಮ್ಮಾಡಿಯವರಿಗೆ ಜೇಸಿ ಸಾಧನಾಶ್ರೀ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಶುಭಹಾರೈಸಿದರು. 
    ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೇಸಿಐ ಅಧ್ಯಕ್ಷ ಪ್ರಕಾಶ್ ಭಟ್ ಅವರು, ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿಯವರ ಮಾನವೀಯ, ಸಾಹಿತ್ಯಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಅಂತಃಕರಣದ ಬರಹಗಳು ಹಾಗೂ ಚಟುವಟಿಕೆಗಳನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುತ್ತಿರುವುದಾಗಿ ಹೇಳಿದರು. ಮುಖ್ಯ ಅತಿಥಿ ಉಡುಪಿಯ ಹನುಮಾನ್ ಸಮೂಹ ಸಂಸ್ಥೆಯ ಆಡಳಿತ ನಿದರ್ೇಶಕ ಪಿ. ವಿಲಾಸ್ ನಾಯಕ್, ಯುವಜೇಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಸದಾನಂದ ನಾವಡ, ಉಪ್ಪುಂದ ಜೇಸಿರೆಟ್ ಅಧ್ಯಕ್ಷೆ ಪೂಜಾ ಪ್ರಕಾಶ್ ಭಟ್, ಉಪ್ಪುಂದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಯು. ವಿಷ್ಣು ಪಡಿಯಾರ್, ಜೇಸಿಐ ಸ್ಥಾಪಕಾಧ್ಯಕ್ಷ ದಿವಾಕರ ಶೆಟ್ಟಿ, ಜೇಸಿಐ ನಿಕಟಪೂವರ್ಾಧ್ಯಕ್ಷ ಗಣೇಶ್ ಪಡಿಯಾರ್, ಸಪ್ತಾಹ ಸಭಾಪತಿ ಗಿರೀಶ್ ಶ್ಯಾನುಭಾಗ್, ಖಜಾಂಚಿ ಮಂಗೇಶ್ ಶ್ಯಾನುಭಾಗ್ ಮೊದಲಾದವರು ಉಪಸ್ಥಿತರಿದ್ದರು. 
      ಜೇಸಿಐ ಅಧ್ಯಕ್ಷ ಪ್ರಕಾಶ್ ಭಟ್ ಸ್ವಾಗತಿಸಿದರು. ಯೋಜನಾಧಿಕಾರಿಗಳಾದ ಸುಬ್ರಹ್ಮಣ್ಯ ಗಾಣಿಗ, ರಮೇಶ್ ಶೇಟ್, ಶ್ರೀಕರ ಮಹಾಲೆ ಮತ್ತು ವಿಕ್ರಮ ಶೆಟ್ಟಿ ಸಹಕರಿಸಿದರು. ಕಾರ್ಯದಶರ್ಿ ಜಯರಾಜ್ ವಂದಿಸಿದರು.