ಏಳು ಕಲಾವಿದರ ಚಿತ್ರ ಪ್ರದರ್ಶನ 'ಕನ್ವರ್ಜನ್ಸ್ ' ಉದ್ಘಾಟನೆ.


ಬೆಂಗಳೂರು: ಬೇರೆ ಬೇರೆ ರಾಜ್ಯದ ಕಲಾವಿದರು ಒಟ್ಟಾಗಿ ಬೇರೆ ಬೇರೆ ರಾಜ್ಯಗಳಲ್ಲಿ ತಮ್ಮ ಕಲಾಕೃತಿಗಳ ಪ್ರದರ್ಶನ ಮಾಡುವುದು ಭಾವೈಕ್ಯತೆಯ ದೃಷ್ಟಿಯಿಂದಲೂ ಮಹತ್ವವಾದುದು. ಇದು ಇಂದಿನ ಅಗತ್ಯತೆ ಕೂಡಾ ಎಂದು ಪ್ರೊ.ವಿಜಿ ಅಂದಾನಿ ಅವರು ಹೇಳಿದರು.
         ಅವರು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಶುಕ್ರವಾರದಂದು ನಾಲ್ಕು ರಾಜ್ಯಗಳ ಏಳು ಮಂದಿ ಕಲಾವಿದರ ಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅನ್ಯ ರಾಜ್ಯದವರು ಆಸಕ್ತಿಯಿಂದ ನಮ್ಮ ರಾಜಧಾನಿಯಲ್ಲಿ ಈ ಪ್ರದರ್ಶನ ಆಯೋಜಿಸಿರುವುದು ಅಭಿನಂದನೀಯ ಮತು ರಾಜ್ಯದ ಬಗ್ಗೆ ಇತರೆಡೆಯ ಕಲಾವಿದರಿಗೆ ಇರುವ ಗೌರವವನ್ನು ಸೂಚಿಸುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಭಿನ್ನ ಅಭಿರುಚಿಯ ವಿಭಿನ್ನ ರಾಜ್ಯಗಳ ಕಲಾವಿದರು ಒಂದಾಗಿ ಪ್ರದರ್ಶನ ಮಾಡುವುದು ಪರಸ್ಪರ ಕಲಾಭಿವ್ಯಕಿಯ ವಿನಿಮಯಕ್ಕೆ ಪೂರಕವಾಗಿದೆ ಎಂದು  ಮುಖ್ಯ ಅತಿಥಿಗಳಾಗಿದ್ದ ಹಿರಿಯ ಕಲಾವಿದ ಎಂ.ಬಿ.ಪಾಟೀಲ್  ಅವರು ಹೇಳಿರು.ಶಿವಾನಂದ ಬಸವಂತಪ್ಪ ಅವರು ಅತಿಥಿಗಳಾಗಿದ್ದರು.

ಅತಿಥಿಗಳಾಗಿದ್ದರು.
ಮಹಾರಾಷ್ಟ್ರದ  4, ಕೇರಳದ ಓರ್ವ ಮತ್ತು ಪಂಜಾಬ್ ಗುಜರಾತಿನ ತಲಾ ಒಬ್ಬರು ಕಲಾವಿದರು ಈ ಪ್ರದರ್ಶನದಲ್ಲಿ ಭಾಗವಹಿಸುತ್ತಿದ್ದಾರೆ. ಕಲಾವಿದರಾದ ಬಾಬು ಸಾಹೇಬ್ ಝಂಜೆ, ಚರಣ್ ಜೀತ್ ಸಿಂಗ್, ದೀಪಕ್ ವಾಂಖಡೆ, ದೇಪಕ್ ಎನ್.ಮೇರ್, ಕುಲ್ದೀಪ ಕಾರೆಗಾಂವ್ ಕರ್, ರಾಧಿಕ ದೇಶಪಾಂಡೆ, ವಿಜಲಕ್ಷ್ಮಿ ಡಿ.ಮೇರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರದರ್ಶನ ಸೆಪ್ಟೆಂಬರ್ 12ರ ವರೆಗೆ ನಡೆಯಲಿದೆ.
ಕಲಾವಿದ ದೀಪಕ್ ವಾಂಖಡೆ ಕಾರ್ಯಕ್ರಮ ರೂಪಿಸಿ ವಂದಿಸಿದರು.  
 ಕುಂದಾಪ್ರ.ಕಾಂ> editor@kundapra.com