ಕುಂಭಾಶಿ: ಹೊಳೆಸಾಲು ಪ್ರದೇಶದ ಜನರ ಬವಣೆಗಿಲ್ಲವೆ ಕೊನೆ...?

ಕುಂದಾಪುರ: ಕಳೆದ ಹಲವು ವರುಷಗಳಿಂದ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ತಾಲೂಕಿನ ಕುಂಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಳೆಸಾಲು ಪ್ರದೇಶ ನಿವಾಸಿಗಳ ಕಷ್ಟಕ್ಕೆ ಕೊನೆಇಲ್ಲವೇ ಎನ್ನುವ ಪ್ರಶ್ನೆಯೊಂದು ಅಲ್ಲಿನ ನಾಗರೀಕರನ್ನು ಕಾಡುತ್ತಿದೆ.

ಕುಂಭಾಶಿಯಿಂದ ಹೊಳೆಸಾಲು ಪ್ರದೇಶವಾಗಿ ಹೊಳೆ ಕಟ್ಟಿನ ಮೂಲಕ ಸಮುದ್ರದ ತನಕ ಕಾಲುವೆ ನಿಮರ್ಿಸಲಾಗಿದ್ದು ಈ ಪ್ರದೇಶದ ನೀರು ಈ ಕಾಲುವೆ ಮೂಲಕವೇ ಸಮುದ್ರ ಸೇರುತ್ತದೆ. ಕಾಲುವೆಯ ಸುತ್ತಲೂ ಹಲವಾರು ಕುಟುಂಬಗಳು ವಾಸವಿರುವುದರಿಂದ ಮಳೆಗಾಲದಲ್ಲಿ ಇವರುಗಳ ಪಾಡು ಹೇಳತೀರದಾಗಿದೆ. ಈ ಬಗ್ಗೆ ಆಡಳಿತ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ಮಾತ್ರ ಸ್ಥಳೀಯರನ್ನು ಆತಂಕಕ್ಕೀಡುಮಾಡಿದೆ.

 ಕಾಲುವೆಯ ರಿವಿಟ್ಮೆಂಟ್ ಸಂಪೂರ್ಣ ಶಿಥಿಲಗೊಂಡಿದ್ದು ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಗೆ ಕಾಲುವೆಯ ಒಂದು ಭಾಗದ ಸುಮಾರು 15ರಿಂದ 20 ಅಡಿಗಳಷ್ಟು ದೂರದ ಕಟ್ಟೆ  ಒಡೆದು ಸಂಪೂರ್ಣ ಕೊಚ್ಚಿ ಹೋಗಿದೆ. ಪರಿಣಾಮವಾಗಿ ಕಾಲುವೆಯ ಪಕ್ಕದಲ್ಲಿರುವ ಭತ್ತದ ಗದ್ದೆಗಳಿಗೆ ಹಾಗೂ ಮನೆಯ ತೋಟಗಳಿಗೆ ನೀರು ನುಗ್ಗಿ ಅಪಾರ ಕೃಷಿ ಹಾನಿಯಾಗಿದೆ.

ಸ್ಥಳೀಯ ನಿವಾಸಿ ಹೊಳೆಕಟ್ಟು ಗಿರಿಜಾರವರ ತೆಂಗಿನ ಗಿಡಗಳು ಹಾಗೂ ಅಡಿಕೆ ಗಿಡಗಳು ಈಗಾಗಲೇ ಸಂಪೂರ್ಣ ಕೊಳೆತು ಹೋಗಿವೆ. ಮನೆಯ ಗೋಡೆ ಕುಸಿಯುವ ಭೀತಿಯಲ್ಲಿದ್ದು ಆಗಲೋ ಈಗಲೋ ಎನ್ನುವ ಸ್ಥಿತಿಯಲ್ಲಿದೆ. ಗಿರಿಜಾರವರ ಮನೆ ಕಾಲುವೆಯ ಸಮೀಪವೇ ಇದ್ದು ಮನೆಯಲ್ಲಿರುವ ಶಾಲೆಗೆ ತೆರಳುವ ಮಕ್ಕಳು ಮಳೆ ನೀರು ಜಾಸ್ಥಿಯಿರುವ ಸಂದರ್ಭದಲ್ಲಿ ಮನೆಯಲ್ಲೇ ಇರಭೇಕಾದ ದುಸ್ಥಿತಿ ಇಲ್ಲಿದೆ.
ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಟಿ. ಶ್ರೀಯಾನ್, ಸ್ತಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು(ಪಿ.ಡಿ.ಓ.) ಹಾಗೂ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದ್ದಾರೆ. 


ಮನೆಗಿಲ್ಲದ  ಸೂಕ್ತ ಸಂಪರ್ಕ ಮಾರ್ಗ; ಅತಂತ್ರ ಸ್ಥಿತಿಯಲ್ಲಿ ಮನೆಮಂದಿ

             
            ಕುಂಭಾಶಿ ಹೊಳೆಸಾಲು ಪ್ರದೇಶದಲ್ಲಿ ವಾಸ ಮಾಡುತ್ತಿರುವ ಹೊಳೆಕಟ್ಟು ಶ್ರೀಧರ ಎನ್ನುವವರ ಮನೆ ಹಾಗೂ ಮನೆ ಮಂದಿ ಮಳೆ ಬಂತೆಂದರೆ ಸಂಪೂರ್ಣ ದಿಗ್ಬಂಧನಕ್ಕೊಳಗಾಗುತ್ತಾರೆ. ಇವರ ಮನೆಗೆ ಹೋಗಲು ಯಾವುದೇ ರೀತಿಯ ಸಂಪರ್ಕಮಾರ್ಗ ಇಲ್ಲದೇ ಪರದಾಡುತ್ತಿರುವ ಇವರು 10-12 ವರ್ಷಗಳಿಂದ ತಾವೇ ಒಂದು ವಿದ್ಯುತ್  ಕಂಬವನ್ನು 12 ಅಡಿ ಆಳದ ಈ ಕಾಲುವೆಗೆ ಅಡ್ಡ ಹಾಕಿಕೊಂಡು ಅಡ್ಡಾಡುತ್ತಿದ್ದು, ಮಳೆ ಬಂದಾಗ  ನೀರಿನಿಂದ ಸಂಪೂರ್ಣವಾಗಿ ಇದೂ ಮೊಣಕಾಲೆತ್ತರಕ್ಕೆ ಮುಚ್ಚುವುದರಿಂದ ಮನೆಯಲ್ಲಿದ್ದವರು ಮನೆಯಲ್ಲಿ ಉಳಿಯಬೇಕಾದ ಪರಿಸ್ಥಿತಿ ಇದೆ ಸದ್ಯ ಮನೆಯಲ್ಲಿ ಅಂಗನವಾಡಿಗೆ ಹಾಗೂ ಪ್ರಾಥಮಿಕ ಶಾಲೆಗೆ ತೆರಳುವ ಚಿಕ್ಕ ಮಕ್ಕಳಿದ್ದು, ಮಳೆಗಾಲದಲ್ಲಿ ಉಂಟಾಗುವ ಅವ್ಯವಸ್ಥೆಯಿಂದಾಗಿ ಕೆಲವೊಮ್ಮೆ 2-3 ದಿನಗಳ ಕಾಲ ಶಾಲೆಗೆ ತೆರಳಲಾಗದ ಅತಂತ್ರ ಸ್ಥಿತಿ ಇದೆ. ಇನ್ನು ಮನೆಯಲ್ಲಿನ ಗಬರ್ಿಣಿಯರು , ವಯಸ್ಸಾದವರು ಸೇರಿದಂತೆ ಸಂಪೂರ್ಣ ಮನೆಯವರೆಲ್ಲರೂ ಸಂಪರ್ಕ ಮಾರ್ಗದ ಅವ್ಯವಸ್ಥೆಯಿಂದ ಮರಗುವಂತಾಗಿದೆ.

          ಸಣ್ಣ ನೀರಾವರಿ ಯೋಜನೆಯ ಅನುದಾನದಿಂದ ಶಿಥಿಲಗೊಂಡಿರುವ ಕಾಲುವೆಯ ರಿವಿಟ್ಮೆಂಟ್ ಬದುಗಳನ್ನು ಕಟ್ಟಿ ಕೊಡುವ ಬಗ್ಗೆ ಇಲಾಖೆಯಿಂದ ಸಂಪೂರ್ಣ ವಿಶ್ವಾಸ ದೊರಕಿದೆ ಹಾಗೂ ಶ್ರೀಧರ ಅವರ ಸಮಸ್ಯೆಯ ಬಗ್ಗೆ ಜಿಲ್ಲಾ ಪಂಚಾಯತ್ನಲ್ಲಿ ಚಚರ್ಿಸಿದ್ದು ಸಮಸ್ಯೆ ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಗಿದೆ. ಮುಂದಿನ ವರ್ಷದಲ್ಲಿ ಶಾಶ್ವತ ಕಾಲು ಸಂಕ ಮಾಡಿಸಿಕೊಡಲಾಗುವುದು ''
 ``ಮೀನುಗಾರಿಕಾ ಇಲಾಖೆಯಿಂದ ಇನ್ನೊಂದು ಭಾಗದಲ್ಲಿರುವ ಮನೆಗಳ ಸಂಪರ್ಕ ರಸ್ತೆಗೆ ಕಾಂಕ್ರಿಟೀಕರಣ ಮಾಡಲಾಗುವುದು. ಇದಕ್ಕಾಗಿ 5 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಅನುದಾನ ಈಗಾಗಲೇ ಬಿಡುಡೆಯಾಗಿದ್ದು ಕೂಡಲೇ ಕಾಮಗಾರಿ ಆರಂಭವಾಗಲಿದೆ''.
- ಗಣಪತಿ ಶ್ರೀಯಾನ್ ಜಿಲ್ಲಾ ಪಂಚಾಯತ್ ಸದಸ್ಯರು.

ವರದಿ: ಯೋಗೀಶ್ ಕುಂಭಾಸಿ