ತೆಕ್ಕಟ್ಟೆ ರೋಟರಿಯಿಂದ ಸಾಧಕರಿಗೆ ಸನ್ಮಾನ

      ಕುಂದಾಪ್ರ: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನಾಲ್ವರು ಸಾಧಕರನ್ನು ಇತ್ತೀಚೆಗೆ ತೆಕ್ಕಟ್ಟೆ ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
            ನವೋದಯ ಸರ್ಕಾರಿ ಶಾಲೆಯಲ್ಲಿ 90ಕ್ಕೂ ಅಧಿಕ ಅಂಕ ಪಡೆಯತ್ತಾ ಬಂದಿರುವ ಕು|| ಸೌಮ್ಯ,    ಟೈಲರ್ ವೃತ್ತಿಯಲ್ಲೇ ಸರಾಸರಿ 50 ವರ್ಷ ಕಳೆದ ಟೈಲರ್ ಸೀತಾರಾಮ ಆಚಾರ್ಯ, ಪಾಕಶಾಸ್ತ್ರದಲ್ಲಿ ಪ್ರಾವಿಣ್ಯತೆ ಹೊಂದಿರುವ ಸುಬ್ರಹ್ಮಣ್ಯ ಪುರಾಣಿಕ, ಮುಂಬಯಿಯಲ್ಲಿ ಕುಂದಗನ್ನಡದ ಬಗ್ಗೆ ಕೆಲಸ ನಿರ್ವಹಿಸಿದ್ದ ರತ್ನಾಕರ ಶೆಟ್ಟಿ ಯವರೇ ಸನ್ಮಾನಿಸಲ್ಪಟ್ಟ ಸಾಧಕರು.
          ತೆಕ್ಕಟ್ಟೆ ರೋಟರಿ ಕ್ಲಬ್‍ಗೆ ಇತ್ತೀಚೆಗೆ ಅಧಿಕೃತ ಭೇಟಿ ನೀಡಿದ್ದ ರೋಟರಿ ಗವರ್ನರ್ ದೇವದಾಸ ಬಿ.ರೈ ರವರು ಸಾಧಕರಿಗೆ ಗೌರವಾರ್ಪಣೆ ಮಾಡಿದರು. ತೆಕ್ಕಟ್ಟೆ ರೋಟರಿ ಅಧ್ಯಕ್ಷ ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಉಪರಾಜ್ಯಪಾಲ ಅಭಿನಂದನ್ ಶೆಟ್ಟಿ, ವಲಯ ಸೇನಾನಿ ಚಂದ್ರಶೇಖರ್ ಮೆಂಡನ್, ರೋಟರಿ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ ಮತ್ಯಾಡಿ  ಉಪಸ್ಥಿತರಿದ್ದರು.
           ಸಾಧಕರ ಪರಿಚಯ ಕೇಶವ ಕೋಟೇಶ್ವರ ಮಾಡಿದರು. ದಿನಕರ ಕೊಠಾರಿ ನಿರೂಪಿಸಿದರು. ಗೋಪಾಲ ಕೃಷ್ಣ ಪುರಾಣಿಕ ಸ್ವಾಗತಿಸಿ, ವಂದಿಸಿದರು.
ಕುಂದಾಪ್ರ.ಕಾಂ> editor@kundapra.com