ತಾಲೂಕು ಮಟ್ಟದ ಕಬ್ಬಡಿ ಪಂದ್ಯಾಟ ಉದ್ಘಾಟನೆ

ಕುಂದಾಪುರ: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಕುಂದಾಪುರ, ಮತ್ತು ಪದವಿ ಪೂರ್ವ ಕಾಲೇಜು ತೆಕ್ಕಟ್ಟೆ ಇವರ ಆಶ್ರಯದಲ್ಲಿ ಪ್ರೌಡ ಶಾಲಾ ವಿಭಾಗದ ಕಬ್ಬಡಿ ಪಂದ್ಯಾಟದ ಉದ್ಘಾಟನಾ ಸಮಾರಂಭ ತೆಕ್ಕಟ್ಟೆ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
          ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಟಿ. ಶ್ರೀಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತೆಕ್ಕಟ್ಟೆ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ  ಶಿವರಾಮ ಶೆಟ್ಟಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ಕ್ಷೇತ್ರ ಸಮನ್ವಯಾಧಿಕಾರಿ ಶೋಭಾ ಶೆಟ್ಟಿ, ತೆಕ್ಕಟ್ಟೆ ಗ್ರಾ.ಪಂ ಉಪಾಧ್ಯಕ್ಷ ಸಂಜೀವ ದೇವಾಡಿಗ, ಕುಂದಾಪುರ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸದಾರಾಮ ಶೆಟ್ಟಿ, ಶಿಕ್ಷಣ ತಜ್ಞ ಕೆ.ವಿ.ನಾಯಕ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ದತ್ತಾತ್ರೇಯ ನಾಯಕ್, ಸ.ಪ.ಪೂ. ತೆಕ್ಕಟ್ಟೆ ಕಾಲೇಜು ಪ್ರಾಂಶುಪಾಲ ಜಗದೀಶ ಭಟ್, ಡಾ.ಎಚ್. ಬಲ್ಲಾಳ್, ರವೀಂದ್ರ ಶೆಟ್ಟಿ ಮತ್ತು ಕಾಲೇಜಿನ ಶಿಕ್ಷಕ ವ್ರಂದದವರು ಉಪಸ್ಥಿತರಿದ್ದರು. ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮಕ್ಕೆ ಆಗಮಿಸಿ ಶುಭಕೋರಿದರು.
             ತೆಕ್ಕಟ್ಟೆ ಸ.ಪ.ಪೂ. ಕಾಲೇಜು ಉಪ ಪ್ರಾಂಶುಪಾಲ ಎಚ್.ಗೋಪಾಲ್ ಶೆಟ್ಟಿ ಸ್ವಾಗತಿಸಿದರು. ದೈಹಿಕ ಶಿಕ್ಷಕ ಪ್ರಕಾಶ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿ, ಸಹಶಿಕ್ಷಕ ಸಂತೋಷ ವಂದಿಸಿದರು.
ಪಂದ್ಯಾಟದಲ್ಲಿ ತಾಲೂಕಿನ ಶಾಲೆಗಳ 10 ಬಾಲಕರ ತಂಡ ಹಾಗೂ 7 ಬಾಲಕಿಯರ ತಂಡಗಳು ಪಾಲ್ಘೊಂಡಿದ್ದವು.

ಫಲಿತಾಂಶ: 
ಬಾಲಕರ ವಿಭಾಗ:      ಪ್ರಥಮ- ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜು
                            ದ್ವಿತೀಯ- ಸರಕಾರಿ ಪದವಿ ಪೂರ್ವ ಕಾಲೇಜು ಬಿದ್ಕಲ್ ಕಟ್ಟೆ
ಬಾಲಕಿಯರ ವಿಭಾಗ:   ಪ್ರಥಮ- ಸರಕಾರಿ ಪದವಿ ಪೂರ್ವ ಕಾಲೇಜು ಹಾಲಾಡಿ
                             ದ್ವಿತೀಯ- ಸರಕಾರಿ ಪ್ರೌಡಶಾಲೆ ಬೇಳೂರು.