ಅಪಾಯದಂಚಿನಲ್ಲಿದೆ ಹೊಸಂಗಡಿ - ಕೋಟೆಕೆರೆ ರಸ್ತೆ

ಕುಂದಾಪ್ರ: ಕೆರೆಯ ಅಭಿವೃದ್ಧಿಯ ಹೆಸರಿನಲ್ಲಿ ನಡೆದ ಅವ್ಯವಸ್ಥೆಯಿಂದಾಗಿ ಹೊಸಂಗಡಿ-ಕೋಟೆಕೆರೆಯ ರಸ್ತೆಯ ಸಂಚಾರಿಗಳು ತೀರ ತೊಂದರೆ ಅನುಭವಿಸುವಂತಾಗಿದೆ.
'ಊರಿಗೆ ಒಂದು ಕೆರೆ ಅಭಿರುವದ್ಧಿ' ಯೋಜನೆಯಂತೆ ಇತ್ತೀಚಿಗೆ ಸಣ್ಣ ನೀರಾವರಿ ಇಲಾಖೆ ಯಿಂದ ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ 20ಎಕರೆಯಷ್ಟಿರುವ  ಕೋಟೆಕೆರೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ ಹೂಳನ್ನು ಕೆರೆಯ ಇಕ್ಕೆಲದಲ್ಲಿ ರಾಶಿ ಹಾಕಿದರ ಪರಿಣಾಮ, ಅನಾಧಿಕಾಲದಿಂದಲೂ ಹೊಸಂಗಡಿಯಿಂದ ಬಾಳೆಜೆಡ್ದು, ಜಂಭೆ, ಕಲ್ಲುಗುಡ್ಡೆ, ಕಾರೂರು ಮುಂತಾದ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಒಳ ಪಾದಚಾರಿ ರಸ್ತೆಯು ಮಳೆಯಿಂದಾಗಿ ಕೆಸರುಮಯವಾಗಿ ರೂಪುಗೊಂಡಿದೆ. ಮಾತ್ರವಲ್ಲದೇ ಕೆರೆಗೆ ಸೂಕ್ತ ತಡೆಬೇಲಿ ಇಲ್ಲದಿರುವುದರಿಂದ ಇಲ್ಲಿನ ಸಂಚಾರ ಅಪಾಯಕಾರಿಯೆನಿಸಿದೆ. ಕೊಂಚ ಜಾಗ್ರತೆ ತಪ್ಪಿದರೂ ಸುಮಾರು 15 ಕ್ಕೂ ಅಧಿಕ ಆಳದ ಕಂದಕದ ಕೆರೆಗೆ ಆಹುತಿಯಾಗುವ ಅಪಾಯವಿದೆ. ಇನ್ನಾದರು ಸಂಬಂಧ ಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಯಾರು ಏನಂತಾರೆ ?
ಅನಾಧಿ ಕಾಲ ದಿಂದಲೂ ಪಾದಚಾರಿಗಳ ಒಡಲನಾಡಿ ಯಾಗಿರುವ ಈ ರಸ್ತೆಯು ವಿಧ್ಯಾರ್ಥಿಗಳಿಂದ ಹಿಡಿದು ,ಹಗಲು -ರಾತ್ರಿ ಉದ್ಯೋಗಸ್ತರು ಪರ ಊರಿನ ಸಂಪರ್ಕ ಬಳಸಿಕೊಳ್ಳಲಾಗುತ್ತಿದೆ . ಆದರೆ ಈ ಕೋಟೆ ಕೆರೆ ಹೆಸರಿನಲ್ಲಿ ರಸ್ತೆಯನ್ನು ಪೂರ್ಣಹಾಳು ಗೆಡವಲಾಗಿದೆ .ಹಾಗೆಯೇ  ಬಹಳಷ್ಟು ವಿಸ್ತಾರಗೊಳಿಸಲಾಗಿದ್ದೂ ,ಯಾವುದೇ ತರಹದ ಸುರಕ್ಷಾ ತಡಬೆಲಿಯನ್ನು ನಿರ್ಮಿಸದೇ ,ಮೊದಲಿದ್ದದನ್ನು ನಾಶಪಡಿಸಲಾಗಿದೆ .ಸಂಚಾರಕ್ಕೆ ಅಯೋಗ್ಯ ವೆನಿಸಿದ ಈ ರಸ್ತೆ ಯನ್ನು ಗ್ರಾಮ ಪಂಚಾಯತ್ ಕಂಡೂ ಕಾಣದಂತೆ ಕಣ್ಣು ಮುಚ್ಚಿ ಕುಳಿತಿರವುದು ಎಷ್ಟು ಸಮಂಜಸ ?
  -ವೆಂಕಟೇಶ ಪೂಜಾರಿ  ಹಿರಿಯ ನಾಗರಿಕ.

ಹಲವೆಡೆ ಅರ್ಧ ಅಡಿಗೂ ಹೆಚ್ಚು ಕಾಲು ಮಣ್ಣಿನಲ್ಲಿ ಹೂತು ಹೋಗುತ್ತಿರುವ್ದರಿಂದ ಕೆಸರು ಲೇಪಿತ ಚಪ್ಪಲಿ ಧರಿಸಿ ಶಾಲಾ ಆವರಣ ಪ್ರವೇಶಿಸಲು ಆಸಾಧ್ಯ ವಾಗುತ್ತಿದೆ .ಆದ್ದರಿಂದ ನಿಯಮಿತ ಸಮಯಕ್ಕಿಂತ ತುಸು ಬೇಗ ಮನೆಯಿಂದ ಹೊರಟು ಅನಿವಾರ್ಯವಾಗಿ ಮಾರ್ಗ ಬದಲಾಯಿಸ ಬೇಕಾಗಿದೆ ".
-ನಾಗರಾಜ್ ಹೈಸ್ಕೂಲ್ ವಿಧ್ಯಾರ್ಥಿ
ಬರಹ-ಶಿವಕುಮಾರ್ ಹೊಸಂಗಡಿ