ತಾಲೂಕು ಛಾಯಾಗ್ರಾಹಕರ ಸಂಘದ ಪದಗ್ರಹಣ/ನೆರವು


ಕುಂದಾಪುರ: ಸೌತ್ ಕೆನರಾ ಪೋಟೊಗ್ರಾಫರ್ಸ್ ಅಸೋಸಿಯೇಶನ್ ಇದರ ಕುಂದಾಪುರ ವಲಯದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹೋಟೆಲ್ ಹರಿಪ್ರಸಾದ್‍ನ ಅಕ್ಷತಾ ಸಭಾಂಗಣದಲ್ಲಿ ಜರುಗಿತು. ಸಂಘದ ನೂತನ ಅಧ್ಯಕ್ಷ ಹರೀಶ್ ಅವರಿಗೆ ನಿಕಟಪೂರ್ವ ಅಧ್ಯಕ್ಷ ಆಲೂರು ಸುದರ್ಶನ ಶೆಟ್ಟಿ ಅಧಿಕಾರ ಹಸ್ತಾಂತರಿಸಿದರು. ಎಸ್‍ಕೆಪಿಎ ಉಪಾಧ್ಯಕ್ಷ ಗಣೇಶ್, ಕುಂದಾಪುರ ಸಂಘದ ಗೌರವಾಧ್ಯಕ್ಷ ರಾಬರ್ಟ್ ಡಿಸೋಜ, ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ, ನಿಕಟಪೂರ್ವ ಕಾರ್ಯದರ್ಶಿ ನಾಗರಾಜ ರಾಯಪ್ಪನಮಠ, ಕೋಶಾಧಿಕಾರಿ ದೊಟ್ಟಯ್ಯ ಪೂಜಾರಿ, ನೂತನ ಕಾರ್ಯದರ್ಶಿ ಪ್ರಮೋದ್ ಆಚಾರ್ಯ, ಉಪಾಧ್ಯಕ್ಷ ಗ್ರೇಶನ್, ಕೋಶಾಧಿಕಾರಿ ರಾಜಾ ಮಠದಬೆಟ್ಟು ಉಪಸ್ಥಿತರಿದ್ದರು. ಸುರೇಶ್ ಕಾರ್ಯಕ್ರಮ ನಿರ್ವಹಿಸಿದರು. 

ಮಾನವೀಯ ನೆರವು
ಕುಂದಾಪುರ ತಾಲೂಕು ಛಾಯಾಗ್ರಾಹಕರ ಸಂಘದ ಸದಸ್ಯರ ವತಿಯಿಂದ ಅನಾರೋಗ್ಯದಿಂದ ಬಳಲುತ್ತೀರುವ ಸಂಘದ ಸದಸ್ಯ ರಾಘವೇಂದ್ರ ದೇವಾಡಿಗ ಇವರಿಗೆ ಮಾನವೀಯ ನೆರವುನ್ನು ಕುಂದಾಪುರ ಸಂಘದ ಗೌರವಾಧ್ಯಕ್ಷ ರಾಬರ್ಟ್ ಡಿಸೋಜ ಮತ್ತು 
ಅಧ್ಯಕ್ಷ ಹರೀಶ್ ಶುಕ್ರವಾರ ಹಸ್ತಾಂತರಿಸಿದರು.ಎಸ್‍ಕೆಪಿಎ ಜಿಲ್ಲಾ ಉಪಾಧ್ಯಕ್ಷ ಗಣೇಶ್,ಕುಂದಾಪುರ ವಲಯ ಉಪಾಧ್ಯಕ್ಷ ಗ್ರೇಶನ್,ರಾಜೀವ್ ಜಿ ನಾಯ್ಕ್, ಕಾರ್ಯದರ್ಶಿ ಪ್ರಮೋದ್ ಚಂದನ್ ಆಚಾರ್ಯ,ಕೋಶಾಧಿಕಾರಿ ರಾಜಾ ಮಠದಬೆಟ್ಟು,ಮಾಜಿ ಅಧ್ಯಕ್ಷ ಗಣೇಶ್ ವೆಲಕಂ ಹಾಗೂ ಸಂಘದ ಸದ್ಯರು ಉಪಸ್ಥಿತರಿದ್ದರು.