ಸೆ. 15 - 16ರಂದು ಕುಪ್ಪಳ್ಳಿಯಲ್ಲಿ ಸಾಂಗತ್ಯದ ಚಿತ್ರ ಶಿಬಿರ

ತೀರ್ಥಹಳ್ಳಿ: ಸಿನೆಮಾ ರಂಗದ ಹಾದಿಯ ಕುರಿತಾಗಿ ಬರಹ, ಸಂವಾದ, ಚರ್ಚೆಯ ಮೂಲಕ ರ್ವಿಮರ್ಶಿಸುತ್ತಾ ಬಂದಿರುವ ಸಾಂಗತ್ಯ ತನ್ನ ಏಂಟನೇ ಚಿತ್ರ ಶಿಬಿರವನ್ನು ಸೆ.  15 ಮತ್ತು 16ರಂದು ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಲ್ಲಿ ಆಯೋಜಿಸಿದೆ. ಎರಡು ದಿನಗಳ ಕಾಲ ನಡೆಯುವ  ಶಿಬಿರದಲ್ಲಿ ವಿವಿಧ ಚಿತ್ರ ವಿಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಈ ನಡುವೆ ಉಪನ್ಯಾಸ, ಸಂವಾದ ಸಿನಿತಜ್ಞರೊಂದಿಗೆ ಮಾತುಕತೆ ನಡೆಯಲಿದ್ದು ಸಿನಿತಜ್ಞ ಪರಮೇಶ್ ಗುರುಸ್ವಾಮಿ ಉಪಸ್ಥಿತರಿರುವರು. ಶಿಬಿರದಲ್ಲಿ ಭಾಗವಹಿಸುವ ಆಸಕ್ತರು ಹೆಸರು ನೋಂದಾಯಿಸಿಕೊಳ್ಳಬೇಕಾಗಿ ಪ್ರಕಟಣೆ ತಿಳಿಸಿದೆ. ಮಾಹಿತಿಗಾಗಿ ಪ್ರದೀಪ- ಮೊ: 9964022581, 9886288392, ಮೇಲ್: saangatya@gmail.com