ಹೆತ್ತವಳನ್ನೇ ಹೊರ ನೂಕಿದ ಮಕ್ಕಳು; ವ್ರದ್ಧೆಗೆ “ಸ್ಫೂರ್ತಿ”ಯ ಆಸರೆ

ಕುಂದಾಪುರ ತಾಲೂಕು ಇಡೂರು ಕುಂಜಾಡಿಯ ಸುಶೀಲ ನಾಯ್ಕ ಮಕ್ಕಳಿಂದ ನಿರ್ಲಕ್ಷಕೊಳಪಟ್ಟು ಸ್ಫೂರ್ತಿಧಾಮ ಸೇರಿಕೊಂಡ ದುರ್ದೈವಿ. 30 ವರ್ಷಗಳ ಹಿಂದೆಯೇ ಗಂಡನನ್ನು ಕಳೆದುಕೊಂಡು ಒಂಟಿಯಾದ ಸುಶೀಲ ನಾಯ್ಕ ಆಸ್ಪತ್ರೆಯೊಂದರಲ್ಲಿ ವಾರ್ಡ ಆಯಾ ಆಗಿ 22 ವರ್ಷ ರೋಗಿಗಳ ಸೇವೆ ಮಾಡಿ ನಿವೃತ್ತಿಯಾದರು. 21 ವರ್ಷದ ಹಿಂದೆ ನಿವೃತ್ತಿಯಾಗುವಾಗ 60 ಸಾವಿರ ಪಿ.ಎಫ್ ಮೊತ್ತವನ್ನು ತನ್ನ ಒಬ್ಬಳೇ ಹೆಣ್ಣು ಮಗಳಿಗಾಗಿ ಖರ್ಚು ಮಾಡಿ ಕೈ ಖಾಲಿ ಮಾಡಿಕೊಂಡ ತಾಯಿ ಈಗ ವೃದ್ದಾಪ್ಯದಲ್ಲಿ ಮಗಳ ಮನೆಗೆ ಹೋದರೆ ಅಲ್ಲಿ  ಈ ತಾಯಿ ಪಾಲಿಗೆ ಬಾಗಿಲು ಬಂದ್ 4 ಜನ ಗಂಡು ಮಕ್ಕಳು. ಮಗ ಎಲ್ಲಿದ್ದಾನೆ ಎನ್ನುವುದೇ ತಿಳಿದಿಲ್ಲ. ಆದರೆ ಉಳಿದ ಮೂವರೂ ಕಣ್ಣೆದುರೆಗೇ ಇದ್ದರೂ ಹೆತ್ತ ತಾಯಿಯನ್ನು ಕಣ್ಣೆತ್ತಿ ನೋಡದೆ ಕಟುಕರಂತೆ ವರ್ತಿಸುತ್ತಿದ್ದಾರೆ ಎಂದು ಸುಶೀಲ ನಾಯ್ಕ ಹೇಳುತ್ತಾರೆ.
          ಅವರಿವರ ಮನೆ ನೆಂಟರಿಷ್ಠರಿಂದ ಸಹಾಯ ಯಾಚಿಸಿ ಹೋದರೆ ಎಲ್ಲಿಯೂ ಆಶ್ರಯ ಸಿಕ್ಕಿಲ್ಲ. ಎಲ್ಲರೂ ಅಷ್ಠಿಷ್ಟು ಸಹಾಯ ಮಾಡಿ ಕೈ ತೊಳೆದುಕೊಂಡೇ ವಿನಹ ಸುಶೀಲರ ನೋವಿಗೆ ಸ್ಪಂದಿಸಲಿಲ್ಲ. ಆನಾರೋಗ್ಯ ಬಾಧಿಸಿದಾಗ ಉಡುಪಿ ಅಜ್ಜರಕಾಡಿನ ಸರಕಾರಿ ಆಸ್ಪತ್ರೆಗೆ ದಾಖಲಾದರು. ಆರೋಗ್ಯ ಸುಧಾರಿಸಿದಾಗ ವೈದ್ಯರು ಡಿಸ್‍ಚಾರ್ಜ ಮಾಡಿದರು. ನೆಲೆಯಿಲ್ಲ ಮುದಿ ಜೀವಕ್ಕೆ ಬೆಲೆಯೂ ಇಲ್ಲ. ಅವರಿವರಲ್ಲಿ ಕಾಡಿ ಬೇಡಿದರು ಪ್ರಯೋಜನೆ ಆಗಲಿಲ್ಲ. ಇಂತಹ ಸಮಯದಲ್ಲಿ ಈ ತಾಯಿಗೆ ನೆರವಿಗೆ ಬಂದವರು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯೋಗೀಶ್ ಜೋಗಿ. ಸ್ಫೂರ್ತಿಧಾಮದ ಮುಖ್ಯ ಕಾರ್ಯನಿವಾಹಕ ಕೇಶವ ಕೋಟೇಶ್ವರರನ್ನು ಸಂಪರ್ಕಿಸಿ ಸ್ಫೂರ್ತಿಧಾಮಕ್ಕೆ ಸೇರಿಸಿದರು. ಎಲ್ಲಾ ಇದ್ದು ಅನಾಥೆಯಂತೆ ಸುಶೀಲ ನಾಯ್ಕ ಈಗ  ಸ್ಫೂರ್ತಿಧಾಮದ ಮಕ್ಕಳೊಂದಿಗೆ ನೆಮ್ಮದಿಯಿಂದಿದ್ದಾರೆ.   
          ಈ ಘಟನೆಯನ್ನು ವಿಧಿ ವಿಪರಿರ್ಯಾಸವೆನ್ನಬೇಕೋ ಅಥವಾ ಕರ್ಮಫಲ ಎಂದು ಈ ಎಲ್ಲಾ ಸಂಕಷ್ಟಗಳನ್ನು ಅನುಭವಿಸಬೇಕೋ ಎನ್ನುವುದನ್ನು ಅರ್ಥೈಸಲಾಗುತ್ತಿಲ್ಲ.. ಐದು ಮಕ್ಕಳಿಗೆ ಜನ್ಮ ನೀಡಿದ ಮಹಾ ತಾಯಿಯೊಬ್ಬಳು ತನ್ನ 74ರ ಇಳಿವಯಸ್ಸಿನಲ್ಲಿ ಐದು ಜನ ಮಕ್ಕಳು ಜೀವಂತ ಇರುವಾಗಲೇ 2 ವರ್ಷಗಳಿಂದ ಅಲ್ಲಲ್ಲ್ಲಿ ಅಲೆದು ಕೊನೆಗೆ ಸ್ಫೂರ್ತಿಧಾಮ ಸೇರಿಕೊಂಡಿದ್ದು ಮಾತ್ರ ವಿದಿ ಲೀಲೆ ಅನ್ನಲೇಬೇಕಾಗಿದೆ.
 ವರದಿ: ಯೋಗೀಶ್ ಕುಂಭಾಸಿ