ಉಪ್ಪುಂದ ಜೇಸಿಐ ವತಿಯಿಂದ ಉಪ್ಪುಂದ ಶಂಕರ ಕಲಾಮಂದಿರದಲ್ಲಿ ಸೆಪ್ಟಂಬರ್ 9ರಿಂದ 16ವರೆಗೆ ನಡೆಯಲಿರುವ ಜೇಸಿ ಸಪ್ತಾಹವನ್ನು ರವಿವಾರ ಸಂಜೆ ಜರುಗಿದ ಸಮಾರಂಭದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ವ್ಯಕ್ತಿಯೊಬ್ಬನ ಬದುಕಿಗೆ ಬೇಕಾದ ಅಗತ್ಯತೆಯನ್ನು ಒಮ್ಮೆ ನೀಡುವುದಕ್ಕಿಂತ ಆತನು ಜೀವನಪರ್ಯಂತವೂ ತನ್ನ ಕಾಲ ಮೇಲೆ ತಾನು ನಿಂತು ಬದುಕನ್ನು ನಡೆಸುವಂತಹ ಶಕ್ತಿಯನ್ನು ಕಲ್ಪಿಸುವ ಜೇಸಿಐ ಸಂಸ್ಥೆಯ ಧ್ಯೇಯವು ಎಲ್ಲರಿಗೂ ಮಾದರಿಯಾಗಲಿ ಎಂದು ಅವರು ಹೇಳಿದರು.
ಜೇಸಿಐ ಅಧ್ಯಕ್ಷ ಪ್ರಕಾಶ್ ಭಟ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಉಡುಪಿಯ ಹನುಮಾನ್ ಸಮೂಹ ಸಂಸ್ಥೆಯ ಆಡಳಿತ ನಿದರ್ೇಶಕ ಪಿ. ವಿಲಾಸ್ ನಾಯಕ್, ಯುವಜೇಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಸದಾನಂದ ನಾವಡ, ಉಪ್ಪುಂದ ಜೇಸಿರೆಟ್ ಅಧ್ಯಕ್ಷೆ ಪೂಜಾ ಪ್ರಕಾಶ್ ಭಟ್, ಉಪ್ಪುಂದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಯು. ವಿಷ್ಣು ಪಡಿಯಾರ್, ಜೇಸಿಐ ಸ್ಥಾಪಕಾಧ್ಯಕ್ಷ ದಿವಾಕರ ಶೆಟ್ಟಿ, ಜೇಸಿಐ ನಿಕಟಪೂವರ್ಾಧ್ಯಕ್ಷ ಗಣೇಶ್ ಪಡಿಯಾರ್, ಸಪ್ತಾಹ ಸಭಾಪತಿ ಗಿರೀಶ್ ಶ್ಯಾನುಭಾಗ್, ಖಜಾಂಚಿ ಮಂಗೇಶ್ ಶ್ಯಾನುಭಾಗ್ ಮೊದಲಾದವರು ಉಪಸ್ಥಿತರಿದ್ದರು. ಉಪ್ಪುಂದ ಜೇಸಿಐ ವತಿಯಿಂದ ವಿಶೇಷ ಸಾಧಕರಿಗೆ ಕೊಡಮಾಡುವ ಸಾಧನಾಶ್ರೀ ಪ್ರಶಸ್ತಿಯನ್ನು ಉದಯವಾಣಿ ವರದಿಗಾರ ಚಂದ್ರ ಕೆ. ಹೆಮ್ಮಾಡಿ ಅವರಿಗೆ ಪ್ರದಾನ ಮಾಡಲಾಯಿತು.
ಜೇಸಿಐ ಅಧ್ಯಕ್ಷ ಪ್ರಕಾಶ್ ಭಟ್ ಸ್ವಾಗತಿಸಿದರು. ಯೋಜನಾಧಿಕಾರಿಗಳಾದ ಸುಬ್ರಹ್ಮಣ್ಯ ಗಾಣಿಗ, ರಮೇಶ್ ಶೇಟ್, ಶ್ರೀಕರ ಮಹಾಲೆ ಮತ್ತು ವಿಕ್ರಮ ಶೆಟ್ಟಿ ಸಹಕರಿಸಿದರು. ಕಾರ್ಯದಶರ್ಿ ಜಯರಾಜ್ ವಂದಿಸಿದರು. >editor@kundapra.com<