ವಿದ್ಯಾಭಾರತಿ ಜಿಲ್ಲಾ ಘಟಕ ಜ್ಞಾನ ವಿಜ್ಞಾನ ಮೇಳ.

ಕುಂದಾಪುರ: ವಿದ್ಯಾಭಾರತಿ ಉಡುಪಿ ಜಿಲ್ಲಾ ಘಟಕದ ಜ್ಞಾನ - ವಿಜ್ಞಾನ ಮೇಳವು ಸೇವಾಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆ 
ಶಾಲೆಯಲ್ಲಿ ಜರಗಿತು. ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾಗೇಶ ಶ್ಯಾನುಭಾಗ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಿದ್ಯಾಭಾರತಿ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರು ಮತ್ತು ಕಾರ್ಕಳ ಬೈಲೂರು ನಚಿಕೇತ ವಿದ್ಯಾಲಯದ ಸಂಚಾಲಕರಾದ ಮಚ್ಛೇಂದ್ರನಾಥ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಚಾಲಕ ಟಿ.ರಮೇಶ ನಾಯಕ್ ಇವರು ತೀಪರ್ುಗಾರರಿಗೆ ಸ್ಮರಣೀಕೆ ನೀಡಿ ಗೌರವಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಸುಬ್ರಾಯ ಹಂದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
  ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಕೆ.ಇಂದ್ರಾಕ್ಷಿ ಉಡುಪ ಪ್ರಾಸ್ತಾವಿಕ ಮಾತುಗಳಲ್ಲಿ ಕಾರ್ಯಕ್ರಮದ ಸ್ಥೂಲ ಪರಿಚಯ ಮಾಡಿದರು.
 ವಿಜ್ಞಾನ ಶೀಕ್ಷಕರಾದ ಕೋಟ ವಿವೇಕ ಪ್ರೌಢಶಾಲೆಯ ವೆಂಕಟೇಶ ಉಡುಪ, ಗಿಳಿಯಾರು ಶಾಂಭವಿ ಪ್ರೌಢಶಾಲೆಯ .ಕೆ ರಾಜಾರಾಮ  ಐತಾಳ್ , ಕೋಟೇಶ್ವರ ಪದವಿ ಪೂರ್ವ ಕಾಲೇಜಿನ ಬಿ.ರೇಶ್ಮಾ ಉಡುಪ ಮತ್ತು ಸಂಧ್ಯಾ.ಯು ತೆಕ್ಕಟ್ಟೆ ಪ್ರೌಢಶಾಲೆಯ ಅನುರಾಧ ಮತ್ತು ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿ ಇಲ್ಲಿಯಗಂಗಾಧರ್ ಐತಾಳ್ ಇವರು ತೀಪರ್ುಗಾರರಾಗಿ ಆಗಮಿಸಿದ್ದರು.
  ಪ್ರೌಢಶಾಲಾ ಶಿಕ್ಷಕಿ ಪ್ರತೀಕಾ ನಿರೂಪಿಸಿದರು, ಹಾಗೂ ಪ್ರಾಥಮಿಕ ವಿಭಾಗದ ಗಾಯತ್ರಿ ಸ್ವಾಗತಿಸಿ, ದೀಪಾ.ಕೆ ವಂದಿಸಿದರು.