ಭಂಡಾರ್ ಕಾರ್ಸ್: ಅ18ಕ್ಕೆ ಪ್ರಶಸ್ತಿಪ್ರದಾನ ಸಮಾರಂಭ

ಡಾ| ಹೆಚ್ ಶಾಂತಾರಾಮ್ ಗಮಕ ವಾಚನ ವ್ಯಾಖ್ಯಾನ  ಪ್ರಶಸ್ತಿ  ಪ್ರದಾನ ಸಮಾರಂಭ
ಕುಂದಾಪುರ: ಅ.18ರಂದು ಸುವರ್ಣ ಸಂಭ್ರಮವನ್ನಾಚರಿಸಿಕೊಳ್ಳುತ್ತಿರುವ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಗಮಕ ಕಾರ್ಯಕ್ರಮ ಮತ್ತು ಡಾ. ಹೆಚ್. ಶಾಂತಾರಾಮ್ ಗಮಕ ವಾಚನ ವ್ಯಾಖ್ಯಾನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಬೆಳಿಗ್ಗೆ 9-30ಕ್ಕೆ ಪುತ್ತೂರಿನ ಡಾ. ಸನತ್ ಕುಮಾರ್ ಇವರಿಂದ ಗಮಕ ಪ್ರಾತ್ಯಕ್ಷಿತೆ ನಡೆಯಲಿದೆ.
11-00 ಗಂಟೆಗೆ ಮೈಸೂರಿನ ಖ್ಯಾತ ಗಮಕ ವ್ಯಾಖ್ಯಾನಕಾರ ಡಾ. ಕಬ್ಬಿನಾಲೆ ವಸಂತ ಭಾರಧ್ವಜ್ ಅವರು ಗಮಕ ಕಲೆಯ ಸ್ವರೂಪ ಮತ್ತು ಬೆಳವಣಿಗೆ ಕುರಿತು ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 2-00ಗಂಟೆಗೆ ಡಾ| ಹೆಚ್ ಶಾಂತಾರಾಮ್ ಗಮಕ ವಾಚನ ವ್ಯಾಖ್ಯಾನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಗಮಕ ವಾಚನ ಪ್ರಶಸ್ತಿಯನ್ನು ಬೆಂಗಳೂರಿನ ಶ್ರೀಮತಿ ಗಂಗಮ್ಮ ಕೇಶಮ ಮೂತರ್ಿಅವರಿಗೆ ಮತ್ತು ಗಮಕ ವ್ಯಾಖ್ಯಾನ ಪ್ರಶಸ್ತಿಯನ್ನು ಶಿವಮೊಗ್ಗದ ರಾಜಾರಾಮ್ ಮೂತರ್ಿ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಕಾಲೇಜು ಪ್ರಕಟಣೆಯಲ್ಲಿ ತಿಳಿಸಲಾಗಿದೆ.