ತ್ಯಾಗ ಮತ್ತು ಬಲಿದಾನದ ಹಬ್ಬ ಬಕ್ರಿದ್

       ಮಾನವೀಯ ಮೌಲ್ಯಗಳು ನಿರಂತರ ಕುಸಿಯು ತ್ತಿರುವ ಪ್ರಸ್ತುತ ಸಾಮಾಜಿಕ ಪರಿಸ್ಥಿತಿ ಯಲ್ಲಿ ಈ ಹಬ್ಬವು ಮಾನವೀಯ ಏಕತೆಯ ಸಂದೇಶವನ್ನು ಸಾರುವುದರ ಜೊತೆಗೆ ತಂದೆ ಮತ್ತು ಮಗನು ಅಲ್ಲಾಹನ ಆಜ್ಞೆಯನ್ನೂ ಪಾಲಿಸುವುದಕ್ಕೆ ಮಹಾನ್ ತ್ಯಾಗವೊಂದಕ್ಕೆ ಸನ್ನದ್ಧ ರಾದ ಘಟನೆಯಾಗಿದೆ.
        ಅಲ್ಲಾಹನ ಮೇಲಿನ ಅಚಲವಾದ ವಿಶ್ವಾಸ ದಿಂದ ತನ್ನ ದೇವತ್ವವನ್ನು ನಿರಾಕರಿಸಿದ್ದಕ್ಕಾಗಿ ಅಂದಿನ ರಾಜನಾದ ನಮ್ರೂದನು ಇಬ್ರಾಹಿಂ ರನ್ನು ಅಗ್ನಿ ಕುಂಡಕ್ಕೆ ಎಸೆದಾಗ ಅಗ್ನಿ ಕುಂಡವು ಅಲ್ಲಾಹನ ಅನುಗ್ರಹದಿಂದ ಹೂಕುಂಡವಾಗಿ ಪರಿಣಮಿಸಿತು ಈ ಘಟನೆಯಿಂದ ಕ್ರೂರಿ ರಾಜನಿಗೆ ಇವರ ವಿರುದ್ಧ ಮತ್ತಷ್ಟು ದ್ವೇಷದ ಕಿಡಿ ಹೆಚ್ಚಾಯಿತು. ಇಬ್ರಾಹಿಂ ನೆಬಿ ಕೊನೆಗೂ ತನ್ನ ಕುಟುಂಬ ಬಿಟ್ಟು ಹುಟ್ಟೂರನ್ನು ತ್ಯಜಿಸ ಬೇಕಾದ ಸಂದರ್ಭ ಬಂದೊದಗಿತ್ತು.
       ಮೂಢನಂಬಿಕೆಯ ವಿರುದ್ಧ ಒಂದು ಕ್ರಾಂತಿಕಾರಿ ಚಳುವಳಿಯ ಮೂಲಕ ಅಂದಿನ ಕಾಲದಲ್ಲಿ ಅಜ್ಞಾನ ದಲ್ಲಿದ್ದ ಜನ ಸಮೂಹವನ್ನು ಜ್ಞಾನ ದೆಡೆಗೆ ತರುವಲ್ಲಿ ಇಬ್ರಾಹಿಂ ನೆಬಿ ಯಶಸ್ವಿಯಾದರು. ಇಳಿವಯಸ್ಸಿನಲ್ಲಿ ಅವರಿಗೆ ಮಕ್ಕಳಿಲ್ಲದ ಒಂದು ಕೊರಗು ಅವರನ್ನು ಸದಾ ಕಾಡುತ್ತಿತ್ತು. ಆ ಕಾರಣದಿಂದಾಗಿ ಅಲ್ಲಾಹನಲ್ಲಿ ತಮಗೆ ಸಹಾಯ ಹಸ್ತವನ್ನು ನೀಡುವಂತಹ ಒಂದು ಪುತ್ರನನ್ನು ದಯಪಾಲಿಸು ಎಂದು ಅಲ್ಲಾಹನಲ್ಲಿ ಮೊರೆಯಿ ಟ್ಟರು. ಅಲ್ಲಾಹನೂ ಅದಕ್ಕೆ ಸ್ಪಂದಿಸಿ ಒಂದು ಸುಂದರ ವಾದ ಹ.ಇಸ್ಮಾಯಿಲ್ (ಅ) ಎಂಬ ಪುತ್ರನನ್ನು ದಯ ಪಾಲಿಸಿದನು. ಈ ಸಂತೋಷದ ಸಮಯದಲ್ಲಿ ಅಲ್ಲಾಹನು ಒಂದು ಕಠಿಣವಾದ ಆಜ್ಞೆಯನ್ನು ನೀಡಿ ಪ್ರವಾದಿಯನ್ನು ಪರೀಕ್ಷೆ ಗೊಳಪಡಿ ಸಿದನು. ಅದೇನೆಂದರೆ ಅರೇಬಿಯಾದ ಮರಳುಗಾಡಿನಲ್ಲಿ ಯಾವ ಜೀವಜಂತು ವಿಲ್ಲದ ಬಿಸಿಲಿನ ದಗದಗಿಸುವ ವಾತಾವರಣದಲ್ಲಿ ಯಾವುದೇ ವ್ಯಕ್ತಿಯ ಆಸರೆ ಇಲ್ಲದೆ ಆ ಮರುಭೂಮಿಯಲ್ಲಿ ತಾಯಿ ಮತ್ತು ಮಗುವನ್ನು ಬಿಟ್ಟು ಬರುವ ಆದೇಶವನ್ನು ಕೊಟ್ಟು ಈ ಮೂಲಕ ಅಲ್ಲಾಹನು ಇಬ್ರಾಹಿಂ ನೆಬಿ ಮನಸ್ಸಿನಲ್ಲಿ ದುಃಖದಿಂದ ಗದ್ಗದಿ ತರಾದರು. ಆದರೂ ಮನಸ್ಸಿನಲ್ಲಿ ಧೈರ್ಯ ತಂದುಕೊಂಡು ಇದು ಅಲ್ಲಾಹ ನಾಜ್ಞೆ ಎಂಬುದನ್ನು ಅರಿತು ದೇವಾಜ್ಞೆ ಯನ್ನು ಉಲ್ಲಂಘಿಸದೆ ಮರು ಭೂಮಿಯಲ್ಲಿ ಭಾರವಾದ ಮನಸ್ಸಿನಿಂದ ತಾಯಿ ಮಗುವನ್ನು ಬಿಟ್ಟು ಬಂದರೂ ಇಬ್ರಾಹಿಂ ನೆಬಿ ಮರಳಿದ ನಂತರ ತನ್ನ ಬಳಿ ಇದ್ದ ಆಹಾರ ಮತ್ತು ನೀರು ಮುಗಿದು ಹೋದಾಗ ಮಗು ಇಸ್ಮಾಯಿಲ್ ಬಾಯಾ ರಿಕೆಯಿಂದ ಅಳ ಲಾರಂಭಿಸಿತು. ಪುಟ್ಟ ಕಂದನ ಆಕ್ರಂದನವನ್ನು ತಾಳಲಾರದೆ ತಾಯಿ ದುಃಖದಿಂದ ಗದ್ಗದಿತರಾದರು. ಸಫಾ ಮತ್ತು ಮರ್‌ವಾ ಎಂಬ ಬೆಟ್ಟಗಳ ನಡುವೆ ನೀರಿಗಾಗಿ ಅತ್ತಿತ್ತ ಹುಡುಕಾಡಿದರೂ ಅಲ್ಲಿ ಏನೂ ಸಿಗದ ಕಾರಣ ನಿರಾಶೆಯಿಂದ ಕಂಗಾಲಾ ದರು. ಆ ಸಮಯದಲ್ಲಿ ತಕ್ಷಣ ದೇವದೂತರು ಅಲ್ಲಿ ಬಂದು ಆ ಮಹಾ ತಾಯಿ ಯಲ್ಲಿ ನೀನು ನಿನ್ನ ಪುತ್ರನ ಬಳಿ ಹೋಗು ಅಲ್ಲಿ ನೀರಿದೆ ಎಂಬ ಸಂದೇಶವನ್ನೂ ಬಿತ್ತರಿಸಿದಾಗ ತಕ್ಷಣ ಆ ತಾಯಿ ಕಂದನ ಬಳಿ ಧಾವಿಸು ತ್ತಾರೆ. ಮತ್ತು ಅದ್ಭುತವಾದ ಪವಾಡ ದೃಶ್ಯದಲ್ಲಿ ಆ ಕಂದನ ಕಾಲಿನ ಸಪ್ಪಳಕ್ಕೆ ಅಲ್ಲಿ ನೀರಿನ ಬುಗ್ಗೆಯೊಂದು ಹೊರಹೊಮ್ಮಿತು. ಆ ನೀರೆ ಆಗಿದೆ ಝಮ್- ಝಮ್ ಎಂಬ ಪವಿತ್ರವಾದ, ಇಂದಿಗೂ ಮಕ್ಕಾಕ್ಕೆ ತೆರಳಿದ ಹಜ್ಜಾಜ್‌ಗಳು ತರುವ ನೀರು.
           ಮಗನ ಮೇಲೆ ತಂದೆಗೆ ಅಪಾರವಾದ ಪ್ರೀತಿ ಮಮತೆಯಿಂದ ಕಾಲ ಕಳೆಯುತ್ತಿದ್ದಾಗ ಒಂದು ದಿನ ಕನಸ್ಸಿನಲ್ಲಿ ಅಲ್ಲಾಹನು ನಿನ್ನ ಪ್ರೀತಿಯ ಪುತ್ರನನ್ನು ನನಗೆ ಬಲಿಯರ್ಪಿಸು ಎಂದು ದೇವಾಜ್ಞೆಯಾಯಿತು. ಮರುದಿನ ಬೆಳಗ್ಗೆ ಎದ್ದು ಎಚ್ಚರವಾದಾಗ ಮತ್ತೆ ಮತ್ತೆ ಇಬ್ರಾಹಿಂ ನೆಬಿ ಯವರು ಇದರ ಬಗ್ಗೆ ಯೋಚನಾ ಮಗ್ನರಾದರು. ಇದು ಇಬ್ಲೀಸನ ಕನಸಾಗಿರಬಹುದೆಂದು ಸುಮ್ಮನಾದರು. ಮರುದಿನ ಮತ್ತೆ ಇದೇ ಕನಸು ಬಿದ್ದಾಗ ತನ್ನ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದಾಗ ಹಿಂದೊಮ್ಮೆ ಅಲ್ಲಾಹನ ಹಲವು ಪರೀಕ್ಷೆಗೊಳಗಾದಾಗ ಇಬ್ರಾಹಿಂ ನೆಬಿ ಯವರು ನಾನು ಅಲ್ಲಾಹನಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಹೇಳಿದರು. ತನ್ನ ಪತ್ನಿಯಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ಒಮ್ಮೆ ಪತ್ನಿ ದಿಗ್ಭ್ರಮೆಗೊಂಡರು. ಮತ್ತು ಎಚ್ಚೆತ್ತು ಇದು ಅಲ್ಲಾಹನ ಆಜ್ಞೆ ಎಂದು ಉದಾರ ಮನೋಭಾವದಿಂದ ಈ ಆಳವಾದ ಮನಸ್ಸಿನ ದುಃಖ ದೊಂದಿಗೆ ತಂದೆ ಮತ್ತು ತಾಯಿ ಇಬ್ಬರು ಮಗನೊಂದಿಗೆ ತನ್ನ ಕನಸಿನ ಬಗ್ಗೆ ಪ್ರಸ್ತಾಪಿಸಿದರು. ದೇವ ಭಕ್ತಿಯಲ್ಲಿ ತಂದೆಯಷ್ಟೇ ನಿಸ್ಸೀ ಮರಾಗಿದ್ದ ವಿಧೇಯತೆಯ ಸಾಕಾರ ಮೂರ್ತಿಯಾಗಿದ್ದ ಮಗ ಇಸ್ಮಾಯಿಲ್ (ಅ) ಅಪ್ಪಾ ತಮಗೆ ಅಲ್ಲಾಹನು ಆಜ್ಞಾಪಿಸಿರುವುದನ್ನು ತಾವು ಮಾಡಿರಿ. ಅಲ್ಲಾಹನಿನಿಚ್ಚಿಸಿದರೆ ತಾವು ನನ್ನನ್ನು ಸಹನಶೀಲರಾಗಿ ಕಾಣುವಿರಿ ಎಂದು ಹೇಳುತ್ತಾ ಕೂಡಲೇ ಸಮ್ಮತಿಯಿತ್ತರು. ತಂದೆ ಮಗ ಇಬ್ಬರೂ ದೇವೆಚ್ಚೆ ಯನ್ನು ಸಾಕ್ಷಾತ್ಕರಿಸುವ ತ್ಯಾಗವೊಂದಕ್ಕೆ ಇತಿಹಾಸದಲ್ಲೇ ಸರಿ ಸಾಟಿಯಿಲ್ಲದೆ ಮಹಾನ್ ತ್ಯಾಗವೊಂದಕ್ಕೆ ಸನ್ನದ್ಧರಾದರು. ಆ ಸಂದರ್ಭದಲ್ಲಿ ಪುತ್ರ ಇಸ್ಮಾಯಿಲ್ ತಂದೆ ಇಬ್ರಾಹಿಂನಲ್ಲಿ ಅಪ್ಪಾ ನೀವು ನನ್ನನ್ನು ಬಲಿ ನೀಡು ವಾಗ ನನ್ನ ಬಟ್ಟೆಗೆ ರಕ್ತವಾಗದಂತೆ ಜಾಗ್ರತೆ ವಹಿಸಿರಿ. ಯಾಕೆಂದರೆ ಆ ಬಟ್ಟೆಯನ್ನು ನನ್ನ ತಾಯಿ ನೋಡಿ ಸಂಕಟ ಪಡುವರು ಮತ್ತು ನನ್ನ ಮುಖವನ್ನು ನಿಮಗೆ ಕಾಣದಂತೆ ಭೂಮಿಯ ಕೆಳಭಾಗಕ್ಕೆ ಸರಿಸಿ ಮಲಗಿಸಿ. ಯಾಕೆಂದರೆ ನನ್ನ ಮೇಲಿನ ಮಮತೆಯಿಂದ ನನ್ನ ಮುಖ ಕಂಡು ನಿಮಗೆ ಈ ಮಹತ್ತರವಾದ ಕಾರ್ಯ ನೆರವೇರಿಸಲು ಕಷ್ಟವಾಗಬಹುದು ಎಂಬ ಮಾತು ಮಗನಿಂದ ಕೇಳಿದ ಅಪ್ಪಾ ಇಬ್ರಾಹಿಂ ನೆಬಿಯವರು ದುಃಖದಿಂದ ಗದ್ಗದಿತರಾ ದರು. ತಕ್ಷಣ ಎಚ್ಚೆತ್ತು ಕೊಂಡು ಮಗನ ವಾತ್ಸಲ್ಯದಿಂದ ದೇವೆಚ್ಚೆಗೆ ಅಡ್ಡಿಯಾಗಬಾರದೆಂದು ಮನಸ್ಸಿನಲ್ಲಿ ಸಮಾಧಾನಿಸಿ ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸಿ ಮಗ ಇಸ್ಮಾಯಿಲ್‌ರ ಕೊರಳನ್ನು ಹರಿತವಾದ ಕತ್ತಿಯಿಂದ ಕೊಯ್ಯ ಲಾರಂಭಿಸಿದರು. ಮತ್ತು ತಕ್ಬೀರ್ ಧ್ವನಿಯನ್ನು ಮೊಳಗಿಸಿ ದಾಗ ಕುತ್ತಿಗೆಯು ಕೊಯ್ಯ ಲ್ಪಡುವುದಿಲ್ಲ , ಏನಾಶ್ಚರ್ಯ ! ಹರಿತವಾದ ಕತ್ತಿಯನ್ನು ಇಬ್ರಾಹಿಂ ನೆಬಿಯವರು ತನ್ನೆಲ್ಲಾ ಶಕ್ತಿಯನ್ನು ಪ್ರಯೋಗಿಸಿದರೂ ಕುತ್ತಿಗೆ ಕೊಯ್ಯಲ್ಪ ಡುವುದಿಲ್ಲ. ಇಬ್ರಾಹಿಂ ನೆಬಿಯವರು ಕೋಪದಿಂದ ತನ್ನ ಕೈಯಲ್ಲಿದ್ದ ಚೂರಿಯನ್ನು ಸಮೀಪದಲ್ಲಿರುವ ಕಲ್ಲಿನ ಮೇಲೆ ಹೊಡೆಯುತ್ತಾರೆ. ಕಲ್ಲು ಎರಡು ತುಂಡಾಗುತ್ತದೆ. ಅಲ್ಲಾಹನು ಇಸ್ಮಾಯಿಲ್ ರವರ ಜಾಗದಲ್ಲಿ ಪವಾಡ ಸದೃಶವಾಗಿ ಆಡನ್ನು ಪ್ರತ್ಯಕ್ಷಗೊಳಿಸುತ್ತಾನೆ ಮತ್ತು ತಕ್ಷಣ ಅಲ್ಲಾಹನ ದೇವದೂತರು ಪ್ರತ್ಯಕ್ಷರಾಗಿ ಇಬ್ರಾಹಿಂ ತನ್ನ ಒಡೆಯನಿಗೆ ನಿಮ್ಮ ಮಗನ ಬಲಿ ಬೇಕಾಗಿರಲಿಲ್ಲ. ಆದರೆ ಇದು ನಿಮ್ಮ ಮತ್ತು ಅಲ್ಲಾಹನ ನಡುವೆ ಇರುವ ಪರೀಕ್ಷೆಯಾ ಗಿತ್ತು. ನೀನು ಅಲ್ಲಾಹನ ಪರೀಕ್ಷೆಯಲ್ಲಿ ಉತ್ತೀರ್ಣನಾದೆ. ಆದ್ದರಿಂದ ನಿನ್ನ ಮಗನ ಬದಲು ಇಗೋ ಈ ಆಡನ್ನು ಬಲಿಕೊಡು ಎಂಬ ಅಲ್ಲಾಹನ ಆಜ್ಞೆಯಾದಾಗ ಇಬ್ರಾಹಿಂ ಮತ್ತೆ ಚೂರಿಯನ್ನೆತ್ತಿ ಆಡನ್ನು ಕೊಯ್ಯುತ್ತಾರೆ.
            ದೇವಾಜ್ಞೆಯ ಈಡೇರಿಕೆಗಾಗಿ ಇಳಿವಯಸ್ಸಿನಲ್ಲಿ ಆಧಾರವಾ ಗಬಹು ದಾಗಿದ್ದ ಪ್ರೀತಿಯ ಪುತ್ರನನ್ನು ಬಲಿ ನೀಡಲು ಸಿದ್ಧರಾದ ಈ ಘಟನೆಯ ಸಂಕೇತವಾಗಿ ಬಕ್ರಿದ್ ಹಬ್ಬದ ಸಲುವಾಗಿ ಪ್ರಾಣಿ ಬಲಿಯನ್ನು ನಿರ್ವ ಹಿಸುವುದರ ಮೂಲಕ ಮನುಷ್ಯ ದೇವಾದೇಶಗಳಿಗೆ ಆದ್ಯತೆ ನೀಡಬೇಕೆಂಬ ಕರೆಯನ್ನು ಬಕ್ರಿದ್ ಹಬ್ಬ ಸಾರುತ್ತದೆ. ಹಜ್ಜ್ ನೆರವೇರಿಸುವುದು ಮತ್ತು ಸಫಾ ಮತ್ತು ಮರ್ವಾ ಕಣಿವೆಯಲ್ಲಿ ಏಳು ಬಾರಿ ಓಡುವುದು ಪ್ರಾಣಿ ಬಲಿ ನೀಡುವುದು ಮುಂತಾದ ಹಲವು ಕರ್ಮಗಳನ್ನು ನೆರವೇರಿಸುವುದರ ಮೂಲಕ ಸ್ವತಃ ಇಬ್ರಾಹಿಂ ನೆಬಿಯವರು ನಿರ್ಮಾಣ ಮಾಡಿದ ಆ ಭವ್ಯ ಭವನಕ್ಕೂ ಹೋಗಿ ಪ್ರಾರ್ಥಿಸಿ ವ್ಯಕ್ತಿ ತನ್ನ ಎಲ್ಲಾ ಪಾಪಗಳನ್ನು ಶುದ್ಧೀಕರಿಸುವುದೇ ಬಕ್ರಿದ್ ಹಬ್ಬದ ಪ್ರಮುಖ ಅಂಶವಾಗಿದೆ.
-ಗುರುರಾಜ