ಕುಂದಾಪ್ರ ಡಾಟ್ ಕಾಂ ನ ಅಂಕಣ ಬರಹ: ಅನುಭವದ ಆಳದಿಂದ

      ಕುಂದಾಪುರದ ಹಿರಿಯ ಸಾಹಿತಿ ಎ.ಎಸ್.ಎನ್. ಹೆಬ್ಬಾರ್  ಕುಂದಾಪ್ರ ಡಾಟ್ ಕಾಂ ಓದುಗರಿಗಾಗಿ "ಅನುಭವದ ಆಳದಿಂದ" ಅಂಕಣ  ಬರೆಯುತ್ತಿದ್ದಾರೆ.

ಲೇಖಕರ ಪರಿಚಯ:
      ಐರೋಡಿ ಶಂಕರನಾರಾಯಣ (ಎ.ಎಸ್.ಎನ್) ಹೆಬ್ಬಾರ್  ವೃತ್ತಿಯಲ್ಲಿ ವಕೀಲರಾಗಿ, ಪ್ರವೃತ್ತಿಯಲ್ಲಿ ಸಾಹಿತಿಯಾಗಿ, ಪತ್ರಕರ್ತರಾಗಿ, ಅಂಕಣಕಾರಕಾಗಿ, ಹತ್ತಾರು ಸಂಘಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನಮಾನಸದಲ್ಲಿ ಗುರುತಿಸಿಕೊಂಡವರು. ವಯಸ್ಸು 70 ದಾಟಿದರೂ ಸದಾ ಲವಲವಿಕೆಯಿಂದಿರುವ ಹೆಬ್ಬಾರರು ಹಾಸ್ಯ ಪ್ರವೃತ್ತಿ ಉಳ್ಳವರು ಮತ್ತು ಸ್ನೇಹಜೀವಿ. ಹತ್ತಾರು ದೇಶ ಸುತ್ತಿದ ಅನುಭವ ಇರುವ ಹೆಬ್ಬಾರರಿಗೆ ಹಲವಾರು ಪ್ರಶಸ್ತಿಗಳು, ಗೌರವಗಳು ಸಂದಿವೆ.
     ಪತ್ನಿ ಸುಧಾರೊಂದಿಗೆ ಕುಂದಾಪುರದ "ನುಡಿ"ಯಲ್ಲಿ ವಾಸಿಸುತ್ತಿರುವ ಹೆಬ್ಬಾರರಿಗೆ ಮೂರು ಮಕ್ಕಳು ಹಾಗೂ ಆರು ಮೊಮ್ಮಕ್ಕಳು.
        ಅವರ ಸುರ್ದೀಘ 50 ವರ್ಷಗಳ ಪತ್ರಿಕಾ ವೃತ್ತಿಯ ಅನುಭವಗಳು, ಪ್ರವಾಸ ಕಥನಗಳು ಈ ಅಂಕಣದಲ್ಲಿ ಮೂಡಿಬರಲಿದೆ.