ಕುಂದಾಪ್ರ ಕನ್ನಡು ಉಳಿಕಾರೇ ನಾವ್ ನಮ್ ಭಾಷಿನ ಎಗಳಿಕು ಮಾತಾಡ್ತನೇ ಇರ್ಕ

     ಕುಂದಾಪ್ರ ಕನ್ನಡದ ಸೊಬಗೇ ಅಂತದ್ದು. ಮಾತನಾಡಲೂ ಸೊಗಸು. ಕೇಳಲು ಮುದ. ಹೌದು. ಕನ್ನಡದಲ್ಲಿ ಅದೇಷ್ಟು ಭಾಷಾ  ಪ್ರಕಾರಗಳಿದ್ದರೂ ಕುಂದಾಪ್ರ ಕನ್ನಡ ಅದೆಲ್ಲಕ್ಕಿಂತಲೂ ಕೊಂಚ ವಿಭಿನ್ನವಾಗಿ ನಿಲ್ಲುತ್ತದೆ. ಸರಳ ಹಾಗೂ ಸಂಕ್ಷಿಪ್ತ ಪದೋಚ್ಚಾರಣೆಯೇ ಇದರ ವೈಶಿಷ್ಟ್ಯ.
   ಆಧುನಿಕತೆ, ಪ್ರತಿಷ್ಠೆಗಳೆಂಬ ಕುರುಡು ನೆಪದಲ್ಲಿ ಅಳಿದುಳಿದು ಮತ್ತೆ ಕಳೆದುಹೋಗುತ್ತಿರುವ ನಮ್ಮ ಭಾಷೆಯನ್ನು ಕುಂದಾಪುರದ ಮನಸುಗಳಲ್ಲಿ ಉಳಿಸುವ ಒಂದು ಸಣ್ಣ ಪ್ರಯತ್ನ ನಮ್ಮದು.
    ಕುಂದಾಪ್ರ ಕನ್ನಡು ಉಳಿಕಾರೇ ನಾವ್ ನಮ್ ಭಾಷಿನ ಎಗಳಿಕು ಮಾತಾಡ್ತನೇ ಇರ್ಕ. ಬನ್ನಿ ಪುರ್ಸೊತ್ ಆದಳಿಕೆಲ್ಲ ಇಲ್ಲಿ ಬರಿನಿ. ಮಾತಾಡಿನಿ. ಕುಂದಾಪ್ರ ಕನ್ನಡದ ಲೇಖನಗಳನ್ನು ಇಲ್ಲಿ ಓದಿ.