
ಅವರು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಹೊಟೇಲ್ ಹರಿಪ್ರಸಾದ್ನ ಅಕ್ಷತಾ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ "ಪ್ರಜಾಪ್ರಭುತ್ವ ಮತ್ತು ಪತ್ರಕರ್ತರು" ಎನ್ನುವ ವಿಷಯದ ಕುರಿತು ಮಾತನಾಡಿದರು.
ಪ್ರಭುತ್ವದ ವ್ಯವಸ್ಥೆಯನ್ನು ಹೋಗಲಾಡಿಸಲು ಪತ್ರಿಕೋದ್ಯಮವೂ ಬಹಳಷ್ಟು ಶ್ರಮವಹಿಸಿದ್ದು, ಈ ನಿಟ್ಟಿನಲ್ಲಿ ನಿರಂತರವಾಗಿ ಕಾಯರ್ೋನ್ಮುಖವಾಗಬೇಕಾಗಿದೆ. ಪತ್ರಿಕೋದ್ಯಮವು ಸಾಮಾಜಿಕ ಕಳಕಳಿಯ ಜೊತೆ ಜೊತೆಗೆ ನ್ಯಾಯಕ್ಕಾಗಿ ಹೋರಾಡುವ ಪ್ರಾಮಾಣಿಕ ಮಾಧ್ಯಮವಾಗಿದ್ದು ಪತ್ರಕರ್ತರು ಈ ವಿಷಯವಾಗಿ ಹೆಚ್ಚೆಚ್ಚು ಅಧ್ಯಯನ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಮಟ್ಟದಲ್ಲಿ ಪ್ರಶಸ್ತಿ ಗಳಿಸಿದ ಜಿಲ್ಲೆಯ ಛಾಯಾಗ್ರಾಹಕರುಗಳಾದ ಸಂತೋಷ ಕುಂದೇಶ್ವರ, ಗಣೇಶ್ ಬೀಜಾಡಿ, ಹೇಮನಾಥ ಪಡುಬಿದ್ರಿ, ಉಮೇಶ್ ಮಾರ್ಪಳ್ಳಿ, ಜನಾರ್ಧನ ಕೊಡವೂರು, ದುರ್ಗಾಪ್ರಸಾದ್ ಕಡಿಯಾಳಿ ಇವರುಗಳನ್ನು ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ವಹಿಸಿದ್ದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕಿರಣ್ ಮಂಜನಬೈಲು, ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ ಉಪಸ್ಥಿತರಿದ್ದರು.
ಸಂಘಟನಾ ಕಾರ್ಯದರ್ಶಿ ಯೋಗೀಶ್ ಡಿ. ಕುಂಭಾಶಿ ಸ್ವಾಗತಿಸಿ, ಸದಸ್ಯ ರಾಮೃಷ್ಣ ಹೇರ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ಸ್ಪಂದನ ಉಪನ್ಯಾಸಕರನ್ನು ಪರಿಚಯಿಸಿದರು. ಜಯಶೇಖರ್ ಮಡಪ್ಪಾಡಿ ಸನ್ಮಾನಿತರನ್ನು ಪರಿಚಯಿಸಿದರು. ಸಂಘದ ಕಾರ್ಯದಶರ್ಿ ನಾಗರಾಜ ರಾಯಪ್ಪನಮಠ ವಂದಿಸಿದರು. ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು.