ಯಶವಂತಪುರ-ಕಾರವಾರ ರೈಲು ಸಂಚಾರ ಆರಂಭ


ಕುಂದಾಪುರ: ಕುಂದಾಪುರದವರಿಗೊಂದು ಸಿಹಿ ಸುದ್ದಿ. ಇಂದಿನಿಂದ ಯಶವಂತಪುರ - ಮಂಗಳೂರು ಕಣ್ಣೂರು ಮಧ್ಯೆ ಓಡಾಡುತ್ತಿದ್ದ ರಾತ್ರಿ ರೈಲು(ನಂ. 16523/16524)  ಕಾರವಾರಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಕುಂದಾಪುರದ ಮೂಲಕ ತೆರಳಲಿದೆ. 
            ಬೆಂಗಳೂರು, ಮಂಡ್ಯ, ಮೈಸೂರು, ಕೃಷ್ಣರಾಜನಗರ, ಹೊಳೆನರಸೀಪುರ, ಹಾಸನ, ಸಕಲೇಶಪುರ,ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು, ಬಂಟ್ವಾಳ, ಮಂಗಳೂರು ಸೆಂಟ್ರಲ್, ತೋಕೂರು, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ,  ಬೈಂದೂರು, ಭಟ್ಕಳ, ಮುರುಡೇಶ್ವರ, ಕುಮಟಾ, ಗೋಕರ್ಣ, ಅಂಕೋಲ ಮೂಲಕ ಕಾರವಾರಕ್ಕೆ ತೆರಳಲಿದ್ದು, ರೈಲು ಎಂಟು ಸ್ಲೀಪರ್, ಒಂದು ಎಸಿ 3ಟಯರ್, ಒಂದು ಎಸಿ 2ಟಯರ್, ಒಂದು ಜನರಲ್, ಎರಡು ಎಸ್‌ಎಲ್‌ಆರ್ ಕೋಚ್ ಸಹಿತ 13 ಬೋಗಿಗಳನ್ನು ಹೊಂದಿದೆ.


            ಕೊನೆಗೂ ಕಾರವಾರ, ಕರಾವಳಿ ಭಾಗದ ಜನರ ರಾತ್ರಿ ರೈಲಿನ ಬಹುದಿನಗಳ ಕನಸು ನನಸಾಗಿದೆ. ಕಾರವಾರಕ್ಕೆ ರೈಲು ವಿಸ್ತರಿಸುವ ಸಂಬಂಧ ಕರಾವಳಿ ಹಾಗೂ ಕಾರವಾರ ಭಾಗದ ಜನ ಸಾಕಷ್ಟು ಹೋರಾಟಗಳನ್ನು ನಡೆಸಿದ್ದರು. ಸಂಸದ ಜಯಪ್ರಕಾಶ್ ಹೆಗ್ಡೆ ಇದರಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ವಕೀಲ ಶಂಕರ್ ಭಟ್  ಕುರಿತಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಆದೇಶದಂತೆ ಕುಂದಾಪುರ ಮಾರ್ಗವಾಗಿ ಬೆಂಗಳೂರು -ಕಾರವಾರ ನಡುವೆ ರಾತ್ರಿ ರೈಲು ಸಂಚಾರ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಆರಂಭಿಸಿದೆ.

               ಕಾರವಾರ ಭಾಗದ ಜನರ ರಾತ್ರಿ ರೈಲಿನ ಬಹುದಿನಗಳ ಕನಸು ಕೊನೆಗೂ ನನಸಾಗಿದೆ. ಹೈಕೋರ್ಟ್ ಆದೇಶದಂತೆ ಮಂಗಳೂರು ಮಾರ್ಗವಾಗಿ ಬೆಂಗಳೂರು -ಕಾರವಾರ ನಡುವೆ ರಾತ್ರಿ ರೈಲು ಸಂಚಾರ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ನಿಗದಿಗಿಂತ ಮೊದಲೇ ಆರಂಭಿಸಿದೆ.