ಮೂಕಾಂಬಿಕಾ ರೈಲ್ವೆ ನಿಲ್ದಾದಲ್ಲಿ ಎರ್ನಾಕುಲಂ-ಅಜ್ಮೀರ್ ರೈಲಿಗೆ ತಾತ್ಕಾಲಿಕ ನಿಲುಗಡೆ

  ಬೈಂದೂರುನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಬೈಂದೂರು ಮೂಕಾಂಬಿಕಾ ರೈಲ್ವೆ ನಿಲ್ದಾದಲ್ಲಿ ರೈಲು ಸಂಖ್ಯೆ 12977/12978 ಎರ್ನಾಕುಲಂ-ಅಜ್ಮೀರ್ ವಾರದ ರೈಲಿಗೆ ತಾತ್ಕಾಲಿಕ ನಿಲುಗಡೆ ನೀಡಿ ಕೇಂದ್ರ ರೈಲ್ವೆ ನಿಗಮ ಆದೇಶ ಹೊರಡಿಸಿದೆ.

      ರೈಲು ಸಂಖ್ಯೆ 12977 ಎರ್ನಾಕುಲಂ-ಅಜ್ಮೀರ್ ರೆಲು ಪ್ರತಿ ಸೋಮವಾರ ಬೆಳಗ್ಗೆ 7.36ಗಂಟೆಗೆ ಬೆಂದೂರು ರೈಲ್ವೆ ನಿಲ್ದಾಣಕ್ಕೆ ಬರಲಿದ್ದು 7.38ಗಂಟೆಗೆ ಹೊರಡಲಿದೆ.

ಹಾಗೆ ರೈಲು ಸಂಖ್ಯೆ 12978 ಅಜ್ಮೀರ್-ಎರ್ನಾಕುಲಂ ಪ್ರತಿ ಸೋಮವಾರ ಸಂಜೆ 5.50ಗಂಟೆಗೆ ಆಗಮಿಸಿ 5.53 ಗಂಟೆಗೆ ಹೊರಡಲಿದೆ. 
        ಈ ನಿಲುಗಡೆಯಿಂದಾಗಿ ವಾರದ ಎಲ್ಲ ದಿನಗಳಲ್ಲಿ ಬೆಳಗ್ಗೆ 7.30ರ ಅವಧಿಯಲ್ಲಿ ಕೇರಳದಿಂದ ಬರಲು ಹಾಗೂ ಮುಂಬಯಿ ಕಡೆಗೆ ಪ್ರಯಾಣಿಸಲು ಅನುಕೂಲವಾಗಿದೆ ಎಂದು ಬೆಂದೂರು ರೆಲ್ವೆ ಯಾತ್ರಿ ಸಂಘ ತಿಳಿಸಿದೆ.

            ಬೆಂಗಳೂರು-ಕಣ್ಣೂರು ರೈಲನ್ನು ಕಾರವಾರಕ್ಕೆ ವಿಸ್ತರಿಸಲು ಹೈಕೋರ್ಟ್ ಆದೇಶಿಸಿದ್ದು ರೈಲ್ವೆ ಯಾತ್ರಿ ಸಂಘ ಸ್ವಾಗತಿಸುತ್ತದೆ. ಈ ಕಾನೂನು ಹೋರಾಟದಲ್ಲಿ ಸಂಘವು ಸಕ್ರೀಯವಾಗಿ ಪಾಲ್ಗೊಂಡಿದ್ದು ಈ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದಲೇ ವಿಂಗಡಿಸಿ ಕಾರವಾರ ಮತ್ತು ಕಣ್ಣೂರು ಕಡೆಗೆ ಓಡಿಸಬೇಕು. ಇದರಿಂದ ಕೊಲ್ಲೂರಿಗೆ ಬರುವ ಯಾತ್ರಿಗಳಿಗೆ ಸಂಜೆ ಹೊತ್ತಿನಲ್ಲಿ ಒಂದೆ ಟಿಕೇಟ್ ಪಡೆದುಕೊಂಡು ಮೂಕಾಂಬಿಕಾ ರೈಲ್ವೆ ನಿಲ್ದಾಣದಿಂದ ಮಂಗಳೂರು ಸೆಂಟ್ರಲ್ ನಿಲ್ದಾಣದವರೆಗೆ ಸಂಚರಿಸಿ ಇಲ್ಲಿಂದ ಹೊರಡುವ ಬೇರೆ ಬೇರೆ ರೆಲುಗಳಲ್ಲಿ ಕೇರಳ ಮತ್ತು ತಮಿಳುನಾಡಿಗೆ ಪಯಣಿಸಬಹುದಾಗಿದೆ. ಅಲ್ಲದೆ ಮತ್ಸ್ಯಗಂಧ ರೆಲಿಗೆ ಕಾರವಾರ ಮತ್ತು ಮಂಗಳೂರು ಮಧ್ಯೆ ಅಲ್ಲಲ್ಲಿ ನಿಲುಗಡೆಗಳನ್ನು ನೀಡಲಾಗಿದೆಯೋ ಆ ಎಲ್ಲಾ ನಿಲ್ದಾಣಗಳಲ್ಲಿ ಬೆಂಗಳೂರು-ಕಾರವಾರ ರೆಲಿಗೆ ನಿಲುಗಡೆ ನೀಡಬೇಕು ಎಂದು ಸಂಘ ಒತ್ತಾಯಿಸುತ್ತದೆ. ಈ ಬಗ್ಗೆ ಕೇಂದ್ರ ರೆಲ್ವೆ ಮಂತ್ರಿ ಹಾಗೂ ಕೊಂಕಣ ರೆಲ್ವೆ ನಿಗಮಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಬೆಂದೂರು ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ವೆಂಕಟೇಶ್ ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.