ಕುಂದಾಪುರದ ರಂಗ ಅಧ್ಯಯನ ಕೇಂದ್ರದಲ್ಲಿ ನಾಟಕೋತ್ಸವ.

ಕುಂದಾಪುರ: ಇಲ್ಲಿನ ರಂಗ ಅಧ್ಯಯನ ಕೇಂದ್ರವು ಪ್ರತಿವರ್ಷದಂತೆ ಈ ವರ್ಷವೂ ನಾಟಕೋತ್ಸವವನ್ನು ಅಕ್ಟೋಬರ್ 17 ರಿಂದ 20 ರನರೆಗೆ ನಡೆಸಲು ನಿರ್ಧರಿಸಿದೆ. ಈ ನಾಟಕೋತ್ಸವದಲ್ಲಿ ಅ.17 ಬುಧವಾರದಂದು ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸುವ ಅಭ್ಯಾಸ ಮಾಲಿಕೆಯ ಪ್ರಯೋಗ ದುಂಡಿರಾಜ್ ರಚನೆಯ ''ಹುಡುಕಾಟ'' ನಾಟಕ, ಅ 18 ರಂದು ಶಂಕರ ಮೊಕಾಶಿ ಪುರಾಣೀಕ್ ರಚನೆಯ "ವಿಪರ್ಯಾಸ ವಿನೋದ" ನಾಟಕ ಪ್ರದರ್ಶನಗೊಳ್ಳಲಿದೆ. ಅ19 ರಂದು ಕೋಶಿಕಾ ಚೇರ್ಕಾಡಿಯ ಬಿ. ವಿ. ಕಾರಂತ್ ರಚನೆಯ ಅಪೂರ್ವ ನಿರ್ದೇಶಿಸಿದ ""ಹೆಡ್ಡಾಯಣ"" ಮತ್ತು ಅ20 ರಂದು ರಂಗಭೂಮಿ ಉಡುಪಿ ಇವರ ""ಯುಗಾಂತ"" ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕಗಳು ಪ್ರತಿದಿನ ಸಂಜೆ 7ಗಂಟೆಗೆ ಸರಿಯಾಗಿ ಕೇಂದ್ರದ ಪದ್ಮಾವತಿ ಭಂಡಾರ್ ಕಾರ್ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ನಿರ್ದೇಶಕ ಡಾ| ಹೆಚ್. ಶಾಂತಾರಾಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.