ಎಸ್ ಕೆ ಎಫ್ ಕ್ಯಾನ್ ಕ್ರೀಯೆಟ್ ಶಿಬಿರ ಸಮಾರೋಪ


       ಮೂಡುಬಿದಿರೆ: ಒಂಬತ್ತನೆ ತರಗತಿಯಲ್ಲಿ ಓದುತ್ತಿರುವ ಜಿಲ್ಲೆಯ ಸುಮಾರು ೫೩ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಎಸ್.ಕೆ.ಎಫ್ ಸಮೂಹ ಉದ್ಯಮ ಸಂಸ್ಥೆಯು ವಿಶಾಲಾಕ್ಷಿ ರಾಮಕೃಷ್ಣ ಆಚಾರ್‍ ಸ್ಮಾರಕ ಸನಿವಾಸ ಶಿಬಿರದ ಸಮಾರೋಪ ಭಾನುವಾರ ನಡೆಯಿತು.
      ಕಾಷ್ಟ ಶಿಲ್ಪ ಉದ್ಯಮಿ ಮೊಹಮ್ಮದ್ ಆಲಿ ಅಬ್ಬಾಸ್, ಖ್ಯಾತ ಪರಿಸರ ವಿಜ್ಞಾನಿ ಕೆ. ಪ್ರಭಾಕರ್‍ ಆಚಾರ್‍  ಮತ್ತು ಆಹಾರ ಸಂಸ್ಕರಣಾ ಉದ್ಯಮಿ ಕಿಶೋರ್‍ ಕುಮಾರ್‍ ಹೆಗ್ಡೆ ಅವರಿಗೆ ಎಸ್.ಕೆ ಎಫ್ ಪ್ರತಿಷ್ಠಾನ ಪ್ರಶ್ತಿಯನ್ನು ನೀಡಲಾಯಿತು. ಸಂಸ್ಥೆಯ ಎಂಡಿ ಜಿ ರಾಮಕೃಷ್ಣ ಆಚಾರ್‍ ಆವರು ಅಧ್ಯಕ್ಷತೆ ವಹಿಸಿದ್ದರು.
     ಶಿಕ್ಷಣ ಜೀವನಕ್ಕಾಗಿ ಮತ್ತು ಜೀವನೋಪಾಯಕ್ಕಾಗಿಯೂ ಬೇಕಾಗುತ್ತದೆ. ಪ್ರತಿಭಾನ್ವಿತರಿಗೆ ಸೂಕ್ತ ಅವಕಾಶಗಳನ್ನು ಒದಗಿಸಿ ಕೊಡ ಬಹುದು, ಆದರೆ ಯಾರಿಗೂ ಉದ್ಯೋಗ ತೆಗಿಸಿ ಕೊಡುವುದು ಇಂದಿನ ಸ್ಥಿತಿಯಲ್ಲಿ ಸಾಧ್ಯಬವಿಲ್ಲ ಅವರವರ ಗುರಿಯನ್ನು ಅವರವರೆ ನಿರ್ಧರಿಸ ಬೇಕಾಗಿದೆ ಎಂದು ಮುಖ್ಯ ಅತಿಥಿ ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು.
       ನಾವು ಶಿಕ್ಷಣದಲ್ಲಿ ಹಿಂದೆ ಬಿದ್ದಿಲ್ಲ ಆದರೆ ನಾವು ಸಂಸ್ಕಾರ ಕೊಡುವುದರಲ್ಲಿ ಹಿಂದೆ ಬಿದ್ದಿದ್ದೇವೆ. ಹಾಗಾಗಿ ನೆಕ್ಸಲ್ ನಮತಹ ಸಮಸ್ಯೆಗಳು ಎದುರಾಗಿದವೆ ಎಂದು ಸಂಸದ ನಳಿನ್ ಕುಮಾರ್‍ ಅಭಿಪ್ರಾಯ ಪಟ್ಟರು.
ಮಂಗಳೂರು ಕಾಳಿಕಾಂಬಾ ದೇವಾಲಯದ ಆಡಳಿತ ಮುಕ್ತೇಸರ ಕೇಶವ ಆಚಾರ್‍,ಶಾಸಕ ಕೆ.ಆಭಯ ಚಂದ್ರ ಜೈನ್ ಮೊದಲಾದವರು ಅತಿಥಿಗಳಾಗಿದ್ದರು.
          ಮಂಗಳೂರು ವಿವಿಯ ಪ್ರೊ:  ಕೆ.ಕೆ ಆಚಾರ್‍   ಅವರು  ಸಮಾರೋಪ ಭಾಷಣ ಮಾಡಿದರು. ಕಳೆದ ಆರು ವರ್ಷಗಳಿಂದ ನಡೆಯುತ್ತಿರುವ ಈ ಶಿಬಿರ ಸಂಪೂರ್ಣ ಉಚಿತವಾಗಿದ್ದು ಕಾರ್ಯಕ್ರಮದ ಬಳಿಕ ಮನೋರಂಜನಾ ಕಾರ್ಯಕ್ರಮ ನಡೆಯಿತು. ಎಸ್ ಕೆ ಎಫ್ ಐಟಿಐ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್‍ ವಂದಿಸಿದರು.