ಕುಂದಾಪ್ರ:ದಾಸ ಸಾಹಿತ್ಯ, ವಚನ ಸಾಹಿತ್ಯ ಇವುಗಳ ಹುಟ್ಟಿಗೆ ದಾಸರು, ಶರಣರುಗಳಲ್ಲಿನ ಅಪಾರ ಜ್ಞಾನವೊಂದೇ ಕಾರಣವಾಯಿತು. ವ್ಯಕ್ತಿಯೊಬ್ಬನಲ್ಲಿ ಅನುಭವ ಜ್ಞಾನ ಶೈಕ್ಷಣಿಕ ಜ್ಞಾನ ಹೆಚ್ಚಾದಂತೆ ಆತ ಪರಿಪೂರ್ಣನೆನಿಸಿಕೊಳ್ಳುತ್ತಾನೆ ಎಂದು ಸಾಹಿತಿ ಅಮೀರುಲ್ಲಾ ಶರೀಫ್ ಹೇಳಿದರು.
ಅವರು ಕುಂದಪ್ರಭ ಟ್ರಸ್ಟ್, ರೋಟರಿ ಕುಂದಾಪುರ ಹಾಗೂ ಬಕುಳ ಸಾಹಿತ್ಯ ವೇದಿಕೆಯ ಸಹಯೋಗದಲ್ಲಿ ನಡೆದ ‘ನುಡಿ ಬೆಳಕು’ ಮೌಲಿಕ ಶಿಕ್ಷಣ ಸರಣಿ ಕಾರ್ಯಕ್ರಮದ ಸಮಾರೋಪದಲ್ಲಿ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಂದ್ರ ಅಡಿಗ ವಹಿಸಿದ್ದರು. ಮಾಜಿ ಶಾಸಕ ಬಿ. ಅಪ್ಪಣ್ನ ಹೆಗ್ಡೆ , ಸೊಲೊಮೊನ್ ಸೋನ್ಸ್, ಹಿರಿಯ ಉದ್ಯಮಿ ದತ್ತಾನಂದ ಗಂಗೊಳ್ಳಿ, ಕುಂದಾಪುರ ರೋಟರಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ, ದಕ್ಷಿಣ ರೋಟರಿ ಅಧ್ಯಕ್ಷ ವಿವಿಯನ್ ಕ್ರಾಸ್ತಾ, ಕುಂದಾಪುರ ಸರ್ಕಾರಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಷಿ, ಉಪಪ್ರಾಂಶುಪಾಲ ಭಾಸ್ಕರ ಶೇಟ್, ಅಂಕಣಕಾರ ಕೊ.ಶಿ.ಕಾರಂತ, ಕುಂದಪ್ರಭ ಟ್ರಸ್ಟ್ ನ ಅಧ್ಯಕ್ಷ ಯು.ಎಸ್.ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.