ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವಾಗಿ.

ಕುಂದಾಪುರ: ಕೆಂಪುಕಲ್ಲು ಕೆತ್ತುವ ಕೆಲಸವನ್ನು ಮಾಡುತ್ತಿದ್ದಾಗ ಎಡಕಾಲಿನ ಮೇಲೆ ಕಲ್ಲು ಬಿದ್ದು ಗಾಯಗೊಂಡ ಪಡುಕೋಣೆ ಗ್ರಾಮದ ಇಗರ್ಜಿಗುಡ್ಡೆ ನಿವಾಸಿ, ಆರ್ಥಿಕಕವಾಗಿ ತೀರಾ ಹಿಂದುಳಿದವರಾದ ಮಾಧವ ಯಾನೆ ಮಹಾದೇವ ಅವರು ತಮ್ಮ ಕಾಲಿನ ಶಸ್ತ್ರಚಿಕಿತ್ಸೆಗೆ ಸಾರ್ವಜನಿಕರ ನೆರವನ್ನು ಕೋರಿದ್ದಾರೆ. 
        ಕೂಲಿ ಕೆಲಸವನ್ನು ಮಾಡಿಕೊಂಡು ಜೀವನ ನಿರ್ವಹಿಸುವ ಮಾಧವ ಅವರಿಗೆ ಮೂವರು ಮಕ್ಕಳಿದ್ದು, ಕಷ್ಟಪಟ್ಟು ಅವರ ಶಿಕ್ಷಣದ ಹೊಣೆಗಾರಿಕೆಯನ್ನು ನಿಭಾಯಿಸುತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ವೃದ್ಧ ತಾಯಿ ಕೂಡಾ ಮನೆಯಲ್ಲಿ ಇದ್ದು, ಸಂಸಾರ ನಿರ್ವಹಣೆಗೆ ಏಕೈಕ ಆಸರೆಯಾಗಿರುವ ಮಾಧವ ಅವರು ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಆದರೆ ಅವರ ಕಾಲಿಗೆ ಬಲವಾದ ಏಟು ತಗುಲಿದ್ದರಿಂದ ಕಳೆದ ಕೆಲವು ತಿಂಗಳುಗಳಿಂದ ಯಾವುದೇ ಕೆಲಸಕಾರ್ಯವನ್ನು ನಿರ್ವಹಿಸಲು ಅಸಾಧ್ಯವಾಗಿದ್ದು, ಅವರ ಕುಟುಂಬ ತೀವ್ರ ಸಂಕಷ್ಟದ ಸ್ಥಿತಿಗೆ ಸಿಲುಕುವಂತಾಗಿದೆ. 
              ಕುಂದಾಪುರದ ಆಸ್ಪತ್ರೆಯೊಂದರಲ್ಲಿ ಒಳರೋಗಿಯಾಗಿ ಚಿಕಿತ್ಸೆಯನ್ನು ಪಡೆಯುತ್ತಿರುವ ಮಾಧವ ಅವರ ಕಾಲಿನ ಚಿಕಿತ್ಸೆಗೆ 1.5 ಲಕ್ಷ ರೂಪಾಯಿಗಳಿಗೂ ಅಧಿಕ ವೆಚ್ಚ ತಗುಲುವುದಾಗಿ ವೈದ್ಯರು ತಿಳಿಸಿದ್ದು, ಬಡವರಾದ ಅವರಿಂದ ಆವಶ್ಯವಿರುವ ಹಣವನ್ನು ಭರಿಸುವುದು ತುಂಬಾ ಕಷ್ಟಕರವಾಗಿದೆ. ಆದ್ದರಿಂದ ಮಾಧವ ಅವರಿಗೆ ಆಥರ್ಿಕ ಸಹಾಯವನ್ನು ನೀಡಲಿಚ್ಛಿಸುವ ಸಹೃದಯಿಗಳು ವಿಜಯಾ ಬ್ಯಾಂಕ್ ನಾಡಾ ಶಾಖೆಯ ಉಳಿತಾಯ ಖಾತೆ ಸಂಖ್ಯೆ 115401011001906ಕ್ಕೆ ಸಲ್ಲಿಸಬಹುದು. ಅಥವಾ ಮಾಧವ ಯಾನೆ ಮಹಾದೇವ, ಬಿನ್ ಜಟ್ಟ, ವಿದ್ಯಾನಗರ-ಇಗರ್ಜಿಗುಡ್ಡೆ, ನಾಡಾ-ಪಡುಕೋಣೆ ವಿಳಾಸಕ್ಕೆ ಸಂಪರ್ಕಿಸಬಹುದಾಗಿದೆ.