ಜಯಕರ್ನಾಟಕ ಸಂಘಟನೆಯ ಬಸ್ರೂರು ಘಟಕ ಉದ್ಘಾಟನೆ

ಕುಂದಾಪುರ : ಜಯ ಕರ್ನಾಟಕ ಸಂಘಟನೆಯು ಸಮಗ್ರ ಕರ್ನಾಟಕದ ನಾಡು ನುಡಿ, ನೆಲ, ಜಲ, ಕಲೆ ಸಂಸ್ಕೃತಿ ರಕ್ಷಣೆಗೆ ಸದಾ ಸಿದ್ದವಾಗಿದೆ. ಕನ್ನಡಿಗರ ಬದುಕು ಹಾಗೂ ಅವರಿಗೆ ದಕ್ಕಬೇಕಾದ ಎಲ್ಲಾ ರೀತಿಯ ಹಕ್ಕುಗಳುಗಾಗಿ ಗಾಂಧೀಜಿ, ಮದರ್ ಥೆರೆಸಾ, ಅಂಬೇಡ್ಕರ್‌ರಂತಹಾ ಮಹಾತ್ಮರ ಮಾರ್ಗದರ್ಶನದಂತೆ ಶಾಂತಿ ಹಾಗೂ ಅಹಿಂಸಾತ್ಮಕ ಹೋರಾಟ ಮಾಡುತ್ತದೆ ಎಂದು ಉಡುಪಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಜನನಿ ದಿವಾಕರ ಶೆಟ್ಟಿ ಹೇಳಿದರು.
ಅವರು ಇತ್ತಿಚೆಗೆ ಬಸ್ರೂರಿನ ಶಾರದಾ ಕಾಲೇಜು ಸಭಾಂಗಣದಲ್ಲಿ ನಡೆದ ಜಯಕರ್ನಾಟಕ ಸಂಘಟನೆಯ ಬಸ್ರೂರು ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಜಯಕರ್ನಾಟಕ ಸಂಘಟನೆಯು ರಾಜಕೀಯೇತರ ಸಂಘಟನೆಯಾಗಿದ್ದು, ಈ ಸಂಘಟನೆಯು ಅತ್ಯಂತ ಬದಿಗೊತ್ತಲ್ಪಟ್ಟ ಸಮುದಾಯಗಳ ಧ್ವನಿಯಾಗಿ ಕೆಲಸ ನಿರ್ವಹಿಸುತ್ತದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಬಸ್ರೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಕಾಸ್ ಹೆಗ್ಡೆ ವಹಿಸಿದ್ದರು. ಬಸ್ರೂರು ಘಟಕದ ಅಧ್ಯಕ್ಷ ಬಿ. ದಿನಕರ ಶೆಟ್ಟಿ, ಗೌರವಾಧ್ಯಕ್ಷ ಸುರೇಶ್ ಶೆಟ್ಟಿ, ಉಪಾಧ್ಯಕ್ಷ ರಾಮಮನೋಹರ ಆಚಾರ್ಯ, ವಿಖ್ಯಾತ್, ಪ್ರಧಾನ ಕಾರ್ಯದರ್ಶಿ ಸಂದೇಶ್ ಶೆಟ್ಟಿ, ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನಾಗರಾಜ ಗಾಣಿಗ, ಗೌರವ ಸಲಹೆಗಾರ ಸುಧಾಕರ ರಾವ್ ಬಾರ್ಕೂರು, ಜಿಲ್ಲಾ ಘಟಕದ ಪ್ರಧಾನ ಸಮಘಟನಾ ಕಾರ್ಯದರ್ಶಿ ಅಣ್ಣಪ್ಪ ಕುಲಾಲ್, ಜಿಲ್ಲಾ ಉಪಾಧ್ಯಕ್ಷ ನಿತ್ಯಾನಂದ ಅಮೀನ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜೇಶ್ ಶೆಟ್, ಜಿಲ್ಲಾ ಮುಖಂಡ ಚಂದ್ರ ಕಾಂತ ನಾಯ್ಕ್, ಸಾಬ್ರ ಕಟ್ಟೆ ಘಟಕದ ಅಧ್ಯಕ್ಷ ನಿರಂಜನ ಹೆಗ್ಡೆ, ಗೌರವಾಧ್ಯಕ್ಷ ಅಶೋಕ್ ಪ್ರಭು, ಸಾಸ್ತಾನ ಘಟಕದ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಜಿಲ್ಲಾ ಘಟಕದ ಜೊತೆ ಕಾರ್ಯದರ್ಶಿ ದಿನೇಶ್, ಉಚ್ಚಿಲ ಘಟಕದ ಅಧ್ಯಕ್ಷ ಹರೀಶ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಮಹೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಅರುಣ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸಂದೇಶ್ ಶೆಟ್ಟಿ ಪ್ರಸ್ತಾವಿಸಿದರು. ಮನೋಹರ ಆಚಾರ್ಯ ವಂದಿಸಿದರು. ಹಳ್ಳಾಡಿ ಪ್ರತಾಪಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.