ಆಳ್ವಾಸ್ ನುಡಿಸಿರಿ ರೂವಾರಿ ಡಾ. ಎಂ. ಮೋಹನ್ ಆಳ್ವರೊಂದಿಗೆ ಮಾತುಕತೆ

ವಿದ್ಯಾಗಿರಿ ಕಾಂಪಸ್: ನಾಡು-ನುಡಿಯ ರಾಷ್ಟೀಯ ಸಮ್ಮೇಳನ  ''ಆಳ್ವಾಸ್ ನುಡಿಸಿರಿ'' ನಾಳೆಯಿಂದ ಆರಂಭಗೊಳ್ಳಲಿದ್ದು ಸಿದ್ದತೆಗಳು ಭರದಿಂದ ಸಾಗುತ್ತಿದ್ದು, ನುಡಿಸಿರಿಯ ರೂವಾರಿ ಡಾ. ಎಂ. ಮೋಹನ್ ಆಳ್ವ ಸಂಘಟಕರಿಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ನುಡಿಸಿರಿ ಹಿಂದಿನ ದಿನದ ರಾತ್ರಿ ಸುಮಾರು 11 ಗಂಟೆಯ ವೇಳೆಗೂ ಕಾಲೇಜಿನ ಕ್ಯಾಂಪಸ್ ಸುತ್ತಿ ಪ್ರತಿಯೊಂದು ಸಿದ್ದತೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಈ ತರಾತೂರಿಯ ನಡುವೆಯೂ ಕುಂದಾಪ್ರ ಡಾಟ್ ಕಾಂ ಗೆ ಕೆಲಕಾಲ ಮಾತಿಗೆ ಸಿಕ್ಕರು. ನಮ್ಮ ಸಂಕ್ಷೀಪ್ತ ಪ್ರಶ್ನೆಗಳಿಗೆ ಸೌಮ್ಯವಾಗಿ ಪ್ರತಿಕ್ರಿಯಿಸಿದರು.

ಕುಂದಾಪ್ರ ಡಾಟ್ ಕಾಂ : ಈ ಬಾರಿಯ ನುಡಿಸಿರಿಯ ವೈಶಿಷ್ಟ್ಯವೇನು? ಕಳೆದ ವರ್ಷಕ್ಕಿಂತ ಹೇಗೆ ವಿಭಿನ್ನ?
ಡಾ. ಮೋಹನ್ ಆಳ್ವ : ನುಡಿಸಿರಿಯನ್ನು ಗೊಂದಲವಿಲ್ಲದೇ ಶಿಸ್ತುಬದ್ಧವಾಗಿ ಹೇಗೆ ಮಾಡಬಹುದು ಎಂಬುವುದರ ಬಗ್ಗೆ ಯೋಚಿಸಿ ಹಂತ ಹಂತವಾಗಿ ವ್ಥೆಶಿಷ್ಟ್ಯಪೂರ್ಣಗೊಳಿಸಲಾಗುತ್ತಿದೆ. ನಮ್ಮನ್ನು ನಂಬಿ ವಿಸ್ವಾಸವಿಟ್ಟು ಬಹಳಷ್ಟು ದೂರದಿಂದ ಹಿರಿಯರು ನುಡಿಸಿರಿಗೆ ಆಗಮಿಸುತ್ತಾರೆ. ಇಲ್ಲಿ ಅವರಿಗೆ ತೊಂದರೆಯಾಗದ ಹಾಗೆ ಅವರ ವಿಶ್ವಾಸಕ್ಕೆ ನ್ಯಾಯ ಒದಗಿಸುತ್ತಿದ್ದೆವೆ. ಈ ಬಾರಿಯಂತೂ ಅಂದುಕೊಂಡ ಹಾಗೆಯೇ ಬಹಳ ಕ್ರಮಬದ್ಧವಾಗಿ ಎಲ್ಲಾ ತಯಾರಿಗಳು ನಡೆಯುತ್ತಿದ್ದು ಅದೇ ನನಗೆ ನೆಮ್ಮದಿ ತಂದಿದೆ, ಕಳೆದೆಲ್ಲಾ ವರುಷರಳಿಗಿಂತ ವಿಭಿನ್ನವೆನಿಸಿದೆ.

ಕುಂದಾಪ್ರ ಡಾಟ್ ಕಾಂ: ಈ ಎಲ್ಲಾ ಸಿದ್ಧತೆಗಳು ವಿಶ್ವ ನುಡಿಸಿರಿಗೆ ಪೂಕಕವಾದುದೇ?
ಡಾ. ಮೋಹನ್ ಆಳ್ವ: ಹೌದು. ಖಂಡಿತವಾಗಿಯೂ.

ಕುಂದಾಪ್ರ ಡಾಟ್ ಕಾಂ : ಕನ್ನಡ ಸಾಹಿತ್ಯ ಸಮ್ಮೇಳನಕ್ಕಿಂತ ಆಳ್ವಾಸ್ ನುಡಿಸಿರಿಗೆ ಹೆಚ್ಚು ಜನಾಭಿಮತವಿದೆ. ಈ ಬಗ್ಗೆ ಎನನ್ನುತ್ತಿರಿ?
ಡಾ. ಮೋಹನ್ ಆಳ್ವ : ಅಲ್ಲಿರುವ ದೋಷಗಳನ್ನು ಇಲ್ಲಿ ಸರಿಪಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿರುತ್ತದೆ. ಅಲ್ಲಿನ ಗೊಂದಲಗಳು ಇಲ್ಲಿರುವುದಿಲ್ಲ. ಹಾಗಾಗಿ ಜನ ನುಡಿಸಿರಿಯನ್ನು ಮೆಚ್ಚುತ್ತಾರೆ. ಸಾಗರೋಪಾದಿಯಲ್ಲಿ ಬರುತ್ತಾರೆ.

ಕುಂದಾಪ್ರ ಡಾಟ್ ಕಾಂ : ಈ ಬಾರಿ ಕ್ಯಾಂಪಸ್ ನಲ್ಲಿ ಬಹಳಷ್ಟು ಕಲಾಕೃತಿಗಳನ್ನು ಕಾಣುತ್ತಿದ್ದೇವೆ. ಏನಿದಕ್ಕೆ ಕಾರಣ.
ಡಾ. ಮೋಹನ್ ಆಳ್ವ : ನುಡಿಸಿರಿಯಲ್ಲಿ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಈ ಮೂರು ವರ್ಗಗಳನ್ನು ಆಕರ್ಷಿಸಲು ಇದೆಲ್ಲಾ ಅಗತ್ಯವಾಗುತ್ತದೆ. ಸಾಹಿತ್ಯದ ಜೊತೆಗೆ ಕಲಾ ವೈವಿಧ್ಯವನ್ನು ಜನ ಮೆಚ್ಚುತ್ತಾರೆ. 

ಕುಂದಾಪ್ರ ಡಾಟ್ ಕಾಂ : ಕಲಾವಿದರಾದ ತಾವು ಈ ಹಿಂದೆ ಕುಣಿದಂತೆ ಈ ಬಾರಿ ಗಜ್ಜೆ ಕಟ್ಟಲಿದ್ದಿರಾ?
ಡಾ.ಮೋಹನ್ ಆಳ್ವ : ವರುಷ 60 ದಾಟಿದ ಮೇಲೆ ಆ ಉತ್ಸಾಹವಿಲ್ಲ. ನಾಡು-ನುಡಿ, ಕಲೆ-ಸಂಸ್ಕ್ರತಿ ಇವೆಲ್ಲದಕ್ಕೂ ಪ್ರೋತ್ಸಾಹಿಸುವುದು, ಪೋಷಿಸುವುದುದರತ್ತ  ನನ್ನ ಗಮನ.

ನುಡಿಸಿರಿ ವಿಶೇಷ ಸಂಚಿಕೆ: http://nudisiri.kundapra.com

ಕುಂದಾಪ್ರ ಡಾಟ್ ಕಾಂ- editor@kundapra.com