ಸಂಭ್ರಮದಿ ಜರುಗಿದ ಕೊಡಿ ಹಬ್ಬ


ಕೋಟೆಶ್ವರ: ಸಪ್ತಕ್ಷೇತ್ರಗಳಲ್ಲೊಂದಾದ ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮನ್ಮಹ ರಥೋತ್ಸವ ಕೊಡಿ ಹಬ್ಬ ಸಂಭ್ರಮದಿಂದ ಜರುಗಿತು. 
    ಒಂದು ವಾರಗಳ ಕಾಲ ನಡೆಯುವ ಕೊಡಿ ಹಬ್ಬದ ಅಂಗವಾಗಿ ದೇವಳ ಸಂಪೂರ್ಣ ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು. ಸಂಪ್ರದಾಯದಂತೆ ನಡೆದ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೋಂಡರು. ನವವಿವಾಹಿತರು ದೇವರಿಗೆ ಕೊಡಿ ಅರ್ಪಿಸಿದರು.

       ರಥೋತ್ಸವದ ಸಂದಂರ್ಭದಲ್ಲಿ ಮಹಿಳೆಯರಿಂದ ಚಂಡೆವಾದನ, ಕಂಗಿಲು ನೃತ್ಯ, ಹೊನ್ನಾವರ ಬ್ಯಾಂಡ್ ವಾದನ ವಿಶೇಷ ಆಕರ್ಷಣೆಯಾಗಿತ್ತು. ದಾನಿ ಕೆ. ವಿ. ಆನಂದರಾವ್ ಭಕ್ತರಿಗೆ ಉಚಿತ ಪಾನಕದ ವ್ಯವಸ್ಥೆ ಮಾಡಿದ್ದರು. ಮನ್ನೆಚ್ಚರಿಕಾ ಕ್ರಮವಾಗಿ ಬಿಗು ಪೋಲಿಸ್ ಭದ್ರತೆ ಮಾಡಲಾಗಿತ್ತು.