ರಾಜ್ಯಮಟ್ಟದ ಹೊನಲು ಬೆಳಕಿನ ನೆಟ್‌ಬಾಲ್, ಕಬಡ್ಡಿ ಪಂದ್ಯಾಟಕ್ಕೆ ಚಾಲನೆ

ಕುಂದಾಪುರ : ಕೊಲ್ಲೂರಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಹಾಗೂ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಕಾಲೇಜಿನ ದಶಮಾನೋತ್ಸವ ಸಂಭ್ರಮಾಚರಣೆ ನಿಮಿತ್ತ ಹಮ್ಮಿಕೊಂಡ ರಾಜ್ಯಮಟ್ಟದ ಪದವಿಪೂರ್ವ ವಿಭಾಗದ ಹೊನಲು ಬೆಳಕಿನ ನೆಟ್‌ಬಾಲ್ ಮತ್ತು ಕಬಡ್ಡಿ ಪಂದ್ಯಾಟವನ್ನು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಉದ್ಘಾಟಿಸಿದರು 
           ಕೊಲ್ಲೂರು ಗ್ರಾ.ಪಂ. ಅಧ್ಯಕ್ಷ ಉದಯ ಶೇರುಗಾರ್ ಅಧ್ಯಕ್ಷತೆ
ವಹಿಸಿದ್ದರು.ಜಿ.ಪಂ. ಸದಸ್ಯೆ ಸುಪ್ರೀತಾ ದೀಪಕ್ ಶೆಟ್ಟಿ, ತಾ.ಪಂ. ಸದಸ್ಯ ರಮೇಶ ಗಾಣಿಗ ಕೊಲ್ಲೂರು, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ
ಎಸ್. ಎಸ್. ಶಿಂಧಾ, ದೇವಸ್ಥಾನದ ಆಡಳಿತ ಕಾರ್ಯನಿರ್ವಣಾಧಿಕಾರಿ ಎಲ್. ಎಸ್. ಮಾರುತಿ, ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ್ ಅಡ್ಯಂತಾಯ, ಪಿಎಸ್‌ಐ ಸಂಪತ್ ಕುಮಾರ, ಕೊಲ್ಲೂರು ಠಾಣೆ ಪಿಎಸ್‌ಐ ದೇವೇಂದ್ರ ಉಪಸ್ಥಿತರಿದ್ದರು. ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಪದವಿಪೂರ್ವ ಕಾಲೇಜು ಕೊಲ್ಲೂರಿನ ಕ್ರೀಡಾಪಟುಗಳಾದ ಕಾವೇರಿ, ಸಾಗರ, ಸಿರಿ, ಧನರಾಜ್, ಸುಮನ್, ಅನಿತಾ, ಕಿರಣ, ನಂದೀಶ್, ಅನಿತಾ, ಶ್ರುತಿ, ಅವಿನಾಶ, ಆನಂದ, ಅಭಿನಯ, ಲಲಿತಾ, ಸುಪ್ರೀಯಾ, ಅಕ್ಷತಾ, ವಿಕ್ರಮ, ಪೂಜಾ, ಸುದೀಪ್, ಚೆತ್ರಿಕಾ ಹಾಗೂ ಸರೋಜರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ ರಾಜ್ಯದ ಸುಮಾರು 1500 ಕ್ರೀಡಾಪಟುಗಳು ಭಾಗವಹಿಸಿದ್ದರು. ಮಂಜುನಾಥ ಮರಾಠಿ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕೊಲ್ಲೂರು ಮುಕಾಂಬಿಕಾ ದೇವಳ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಎಸ್. ಅರುಣ ಪ್ರಕಾಶ ಶೆಟ್ಟಿ ಸ್ವಾಗತಿಸಿದರು. ಕ್ರೀಡಾ ಮೇಲ್ವಿಚಾರಕ ಶ್ರೀಧರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ಚಂದ್ರ ಶೆಟ್ಟಿ, ಶ್ರೀಕಾಂತ್ ಸಾಮಂತ ಹಾಗೂ ವಿಜಯ ಆಳ್ವ ಕಾರ್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಣ ಉಪನ್ಯಾಸಕ ಎಚ್.ಸುಕೇಶ ಶೆಟ್ಟಿ ವಂದಿಸಿದರು.