ತಾಲೂಕಿನ 12 ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿ.15 ಮತ್ತು 16 ಕ್ಕೆ

ಕುಂದಾಪುರ : ಕುಂದಾಪುರ ತಾಲೂಕು 12 ನೇ ಕನ್ನಡ ಸಾಹಿತ್ಯ ಸಮ್ಮೇಳನ ಇದೇ ಡಿಸೆಂಬರ್15 ಮತ್ತು 16 ರಂದು ಬೈಂದೂರಿನಲ್ಲಿ ನಡೆಯಲಿದೆ.
        ಸ್ಥಳೀಯ ಸಂಸದರು, ಶಾಸಕರು, ಹಿರಿಯ ಅಧಿಕಾರಿಗಳು ಹಾಗೂ ಸಾಹಿತ್ಯಾಸಕ್ತರನ್ನೊಳಗೊಂಡ ಸಮ್ಮೇಳನ ಸ್ವಾಗತ ಸಮಿತಿಯೊಂದನ್ನು ರಚಿಸಲಾಗಿದೆ. ಆರ್ಥಿಕ ವ್ಯವಹಾರ, ಉತ್ಸವ, ಊಟೋಪಚಾರ ಇತ್ಯಾದಿ ಸರ್ವ ವ್ಯವಸ್ಥೆಗಳನ್ನೂ ನಿರ್ವಹಿಸಲು 15 ಉಪಸಮಿತಿಗಳನ್ನು ಈಗಾಗಲೇ ರಚಿಸಲಾಗಿದೆ. ಸ್ವಾಗತ ಸಮಿತಿ ಮತ್ತು ಉಪಸಮಿತಿಯವರು ಬೈಂದೂರಿನ ಲಾವಣ್ಯ ಕಲಾ ಸಂಸ್ಥೆಯ ಕೇಂದ್ರ ಕಛೇರಿ ರಂಗಮನೆಯಲ್ಲಿ ನಿಗದಿತ ಸಭೆಗಳನ್ನು ನಡೆಸುತ್ತಾ ಸಮ್ಮೇಳನದ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ. ಸಮ್ಮೇಳನ ಲಾಂಛನವನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ.
ಬೈಂದೂರಿನ ಬಂಕೇಶ್ವರ ರಸ್ತೆಯ ಶ್ರೀ ರಾಜರಾಜೇಶ್ವರಿ ಕಲಾಭವನ ಆವರಣದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಇದರ ಸವಿ ನೆನಪಿಗಾಗಿ ಸರ್ವಾಂಗ ಸುಂದರವಾದ ಸಾಹಿತ್ತಿಕ ಮೌಲ್ಯದ ಸ್ಮರಣಸಂಚಿಕೆಯೊಂದನ್ನು ಹೊರತರಲಾಗುತ್ತಿದೆ. ಈ ಸಂದರ್ಭದಲ್ಲಿ ಪುಸ್ತಕ, ಕಲಾ ಪ್ರದರ್ಶನ, ತಾಲೂಕಿನಾದ್ಯಂತದ ವಿದ್ಯಾರ್ಥಿಗಳಿಗೆ ನಾಡು - ನುಡಿಗೆ ಸಂಬಂಧಿತ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುವುದು. ವಿದ್ಯಾರ್ಥಿ ಸಮುದಾಯವನ್ನು ಕನ್ನಡದೆಡೆಗೆ ಸೆಳೆಯಲು ಯುವ ಕವಿಗಳಿಂದ ಕವಿತೆಗಳನ್ನು ಆಹ್ವಾನಿಸಲಾಗಿದೆ. ಇವನ್ನು ಸಂಗೃಹಿಸಿ, ಪುಸ್ತಕ ರೂಪದಲ್ಲಿ ಹೊರತಂದು ವಿದ್ಯಾರ್ಥಿಗಳಿಗೆ ತಲುಪುವಂತೆ ಮಾಡಲಾಗುವುದು ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ಜಯಾನಂದ ಹೋಬಳಿದಾರ  ಅವರು ನೀಡಿದರು. 
       ಸಮ್ಮೇಳನ ಉದ್ಘಾಟನಾ ದಿನವಾದ ಡಿ.15 ರ ಶನಿವಾರ ಉದ್ಘಾಟನಾ ಸಮಾರಂಭದ ನಂತರ ಒಂದು ಸಂಸ್ಮರಣಾ ಭಾಷಣ, ಮೂರು ಕವಿಗೋಷ್ಠಿಗಳು ನಡೆಯಲಿವೆ. 2 ನೆಯ ದಿನ ನಾಲ್ಕು ಯುವ ಕವಿಗೋಷ್ಠಿಗಳು ಹಾಗೂ ಸಮಾರೋಪ ನಡೆಯಲಿವೆ. ಉದ್ಘಾಟನೆಯ ಮುನ್ನ ಭವ್ಯ ಭುವನೇಶ್ವರೀ ದೇವಿಯ ಪುರಮೆರವಣಿಗೆ ನಡೆಯಲಿದೆ. ಇದರೊಂದಿಗೆ ಕನ್ನಡ ಗೀತೆ ಗಾಯನವಿದೆ. 
      ಮಾತನಾಡಿ ಆಗಮಿಸುವ ಎಲ್ಲರಿಗೂ ಕುಂದಾಪುರ ಶೈಲಿಯ ಊಟೋಪಚಾರ ವ್ಯವಸ್ಥೆ, ಅಗತ್ಯವಿರುವವರಿಗೆ ವಸತಿ ಸೌಕರ್ಯ ಏರ್ಪಡಿಸಲಾಗಿದೆ. 
 ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ನಾರಾಯಣ ಖಾರ್ವಿ, ಕ.ಸಾ.ಪ. ಕಾರ್ಯದರ್ಶಿ ಸಂದೇಶ್ ಭಟ್  ಕ.ಸಾ.ಪ. ಕೋಶಾಧಿಕಾರಿ ಗಣೇಶ್ ಪ್ರಸನ್ನ ಮಯ್ಯ, ಬೈಂದೂರು ಹೋಬಳಿ ಘಟಕಾಧ್ಯಕ್ಷ ಡಾ || ಸುಬ್ರಹ್ಮಣ್ಯ ಭಟ್, ಸ್ವಾಗತ ಸಮಿತಿ ಸಂಘಟನಾ ಕಾರ್ಯದರ್ಶಿ ಗಣಪತಿ ಹೋಬಳಿದಾರ್, ಜತೆ ಕಾರ್ಯದರ್ಶಿ ರವೀಂದ್ರ ಶಾನುಭಾಗ್‌ ಮೊದಲಾದವರು ಉಪಸ್ಥಿತರಿದ್ದರು.

ಕುಂದಾಪ್ರ.ಕಾಂ- editor@kundapra.com