ಎಂ.ಐ.ಟಿ ಮೂಡ್ಲಕಟ್ಟೆ ವಿಧ್ಯಾರ್ಥಿಗಳ ಕಾಳು ಮೆಣಸನ್ನು ಬಳ್ಳಿಯಿಂದ ಬೇರ್ಪಡಿಸುವ ಯಂತ್ರ

ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ತಯಾರಿಸಿರುವ ಕಾಳು ಮೆಣಸನ್ನು ಬಳ್ಳಿಯಿಂದ ಬೇರ್ಪಡಿಸುವ ಯಂತ್ರದ ಮಾದರಿಯನ್ನು ಇತ್ತೀಚೆಗೆ ಕ್ಯಾಂಪ್ಕೊ ಸಂಸ್ಥೆಯ ಆಶ್ರಯದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಜರಗಿದ ‘ಕೃಷಿ ಯಂತ್ರ ಮೇಳ’ದಲ್ಲಿ ಪ್ರದರ್ಶಿಸಲಾಗಿತ್ತು ಇದು    ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಯಂತ್ರದ ಮಾದರಿಯು ಒಂದು ಅಶ್ವಶಕ್ತಿಯ ಮೋಟಾರನ್ನು ಹೊಂದಿದ್ದು, 500 ಆರ್‌ಪಿ‌ಎಂ ಮತ್ತು 200 ಆರ್‌ಪಿ‌ಎಂ ವೇಗದಲ್ಲಿ ತಿರುಗುವ ಮೆಕ್ಯಾನಿಕಲ್ ಡ್ರಮ್‌ನ್ನು ಹೊಂದಿದೆ. ಇಲ್ಲಿ ಮೋಟಾರು ಹಾಗೂ ಡ್ರಮ್ ರಬ್ಬರ್ ಬೆಲ್ಟ್ ಒಂದರ ಮೂಲಕ ಸಂಪರ್ಕ ಸಾಧಿಸುತ್ತದೆ. ಇದರಿಂದ ಕಾಳುಮೆಣಸನ್ನು ಕಾಂಡದಿಂದ ವೇಗವಾಗಿ ಹಾಗೂ ಕಡಿಮೆ ಖರ್ಚಿನಲ್ಲಿ ಬೇರ್ಪಡಿಸಲಾಗುತ್ತದೆ. 
     ಮೂಡ್ಲಕಟ್ಟೆ ಎಂಜಿನಿಯರಿಂಗ್ ಕಾಲೇಜಿನ ಉಪಪ್ರಾಧ್ಯಾಪಕ ಜಯಶೀಲ ಸಾಗರ್‌ರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಯಂತ್ರವನ್ನು ನಿರ್ಮಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಸ್.ಎಸ್. ರಾವ್ ತಿಳಿಸಿದ್ದಾರೆ.
ಕುಂದಾಪ್ರ.ಕಾಂ- editor@kundapra.com