ಮೌಢ್ಯದಿಂದ ಮನಸ್ಸು ಮುಕ್ತವಾಗಲಿ


         ಮೂಢನಂಬಿಕೆಗಳ ಕುದಿಯಲ್ಲಿ ಬೆಯುತ್ತಿದೆ ಈ ಸಮಾಜ. ಪ್ರಾಚೀನ ಕಾಲದ ಅನಾಗರಿಕ ಕಾಡು ಜನರಂತೆ ನಮ್ಮ ಹಳ್ಳಿಯ ಕೆಲವೊಂದು ಮಂದಿ ಈಗಲೂ ಮೌಢ್ಯವನ್ನೇ ಜೀವನವನ್ನಾಗಿ ನಡೆಸುತ್ತಿದ್ದಾರೆ. ದೇಹ ಚಲನೆ ಇಲ್ಲದ ಸ್ಥಿತಿಯೇ ಮರಣವೆಂದು ತಿಳಿಯಬಹುದು. ಆದರೆ ಸತ್ತನಂತರ ವ್ಯಕ್ತಿ ಬದುಕಿ ಇನ್ನೊಬ್ಬರ ಮೈಮೇಲೆ ಬರುತ್ತಾನೆ ಎನ್ನುವುದು ನಂಬಲಾರ್ಹ ಸಂಗತಿಯೇ?
         ಈ ಯುಗದಲ್ಲಿ ಕೂಡ ತನ್ನ ಮೈಮೇಲೆ ದೇವರು ಬರುತ್ತಾನೆಂದು ಪೊಳ್ಳು ಮಾತುಗಳನ್ನಾಡಿ, ಸಾಮಾನ್ಯ ಜನರನ್ನು ಮೋಸಗೊಳಿಸುತ್ತಲೇ ಇದ್ದಾರೆ. ಈ ನವ ಸಮಾಜ ಜೋತಿಷ್ಯದಲ್ಲಿಯೂ ನಂಬಿಕೆ ಇಟ್ಟಿದೆ. ನಾನೊಮ್ಮೆ ಜೋಯಿಸರ ಬಳಿ ನನ್ನ ಜಾತಕ ತೋರಿಸಿದಾಗ ಆತ ಹೇಳಿದ್ದು ಹೀಗೆ, ಮಗು ಇನ್ನು ನಿನಗೆ ಹದಿನೇಳುವರೆ ವರ್ಷ ಶುಕ್ರದೆಸೆ ಇದೆ. ಕಷ್ಟಗಳೆಲ್ಲ ಮಾಯವಾಗಿ ಸುಖಮಯ ಜೀವನ ನಿನ್ನದಾಗುವುದು. ಆದರೆ ಅದೇ ನಾಲ್ಕು ತಿಂಗಳಲ್ಲೇ ನನ್ನ ತಾಯಿ ಮೃತರಾದರು. ಮೊದಲೇ ತಂದೆಯನ್ನು ಕಳೆದುಕೊಂದಿದ್ದ ನಾನು ಈಗ ನನ್ನ ತಾಯಿಯ ಪ್ರೀತಿಯಿಂದಲೂ ದೂರವಾದೆ. ಒಂದು ಹಾಸ್ಯಸ್ಪದ ಸಂಗತಿಯೆಂದರೆ ನನ್ನ ತಾಯಿ ನಿಧನವಾದ ದಿನ ಅಮ್ಮನಿಗೆ ನಿಂಬೆ ಹಣ್ಣನ್ನು ಮೂರು ಬಾರಿ ಸುಳಿದು ಬಿಸಾಡಿದ್ದರು. ಆಕಸ್ಮತ್ತಾಗಿ ಅದು ಪಕ್ಕದ ಮನೆಯ ಬಾವಿಯ ಬದಿಯಲಿ ಬಿದ್ದಿತ್ತು. ಆಗ ಆ ಪಕ್ಕದ ಮನೆಯವರು ತಮಗೆ ಯಾಕೋ ಕೆಟ್ಟದನ್ನು ಬಯಸಿ ಈ ನಿಂಬೆ ಹಣ್ಣನ್ನು ಇಟ್ಟಿರಬಹುದೆಂದು ದೇವರನ್ನು ಅವರ ಮನೆ0ುಲ್ಲಿ ಅಳಿಸಿ ಕೇಳಿದಾಗ ಅದು ಹೇಳಿದ್ದು ಹೀಗೆ ನಿಮ್ಮ ಮಗ ದುಡಿ0ುುತ್ತಿದ್ದಾನೆ. ಅದನ್ನು ಸಹಿಸದ ನಿಮ್ಮ ಕುಟುಂಬಿಕರೇ ಆ ಕೃತ್ಯವನ್ನು ಎಸಗಿದ್ದಾರೆ. ಆದರೆ ನಾವು ಅವರ ಕುಟುಂಬಿಕರು ಅಲ್ಲ, ಸಂಬಂಧಿಕರು ಅಲ್ಲ. ಆಕಸ್ಮಿಕವಾಗಿ ಆ ನಿಂಬೆ ಹಣ್ಣು ಅವರ ಬಾವಿಯ ಬಳಿ ಬಿದ್ದಿತ್ತು. ಅದಕ್ಕಾಗಿ ಅವರು ಸಾವಿರಾರು ರೂಪಾಯಿ ಸಾಲ ಮಾಡಿ ಪೂಜೆ ನಡೆಸಿದ್ದರು. ಈ ರೀತಿ ಮೌಢ್ಯವನ್ನು ತುಂಬಿಕೊಂಡಿರುವ ಈ ಸಮಾಜಕ್ಕೆ ಯಾವಾಗ ವಾಸ್ತವದ ಅರಿವಾಗುವುದೇನೋ? ಈ ರೀತಿ ನಂಬುವುದು ತಪ್ಪೆಂದು ನಾನು ಹೇಳುವುದಿಲ್ಲ ಏಕೆಂದರೆ ಅದು ಅವರಿಗೆ ಬಿಟ್ಟಿದ್ದು, ಆದರೆ ಅದೇ ತಮ್ಮ ಬದುಕು, ಜೀವನವೆಂದು ತಿಳಿಯುವುದು ಎಷ್ಟು ಸಮಂಜಸ. ಈ ಮೌಢ್ಯತೆಯಿಂದ ದೂರಸರಿಯಬೇಕಾದರೆ ಎ.ಎಸ್. ನಟರಾಜ್ ಅವರು ಬರೆದ ಜೋತಿಷ್ಯಕ್ಕೆ ಸವಾಲು ಮತ್ತು ದೆವರು ಸಮಗ್ರ ಚಿಂತನೆ ಎಂಬ ಪುಸ್ತಕ ಓದಲೇಬೇಕು. ಕಾಡು ಪ್ರಾಣಿಯಂತೆ, ಕಾಡು ಮನುಷ್ಯನಾಗಿದ್ದ ಮಾನವ ಆಕಸ್ಮಿಕವಾಗಿ ಬೆಂಕಿಯ ಉಪಯೋಗ ಕಂಡುಕೋಂಡಾಗಿನಿಂದ ವಿಜ್ನಾನದ ಚಿಂತನೆ ಹುಟ್ಟಿತು. ವಿಜ್ನಾನದಲ್ಲಿ ನಂಬಿಕೆ ಇಟ್ಟ ವ್ಯಕ್ತಿ ಎಂದಿಗೂ ಈ ಮೌಢ್ಯವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಲಾರ. ಮಾನವನ ಮನಸ್ಸು ಮೌಢ್ಯದಿಂದ ಮುಕ್ತವಾಗಲಿ ಎನ್ನುವುದೇ ನನ್ನ ಆಶಯ
-ಚೈತ್ರ ಚಂದನ್ ಪಡುಕೋಣೆ  .