ಕೊಡಿ ಹಬ್ಬ: ಗಮನ ಸೆಳೆಯುತ್ತಿರುವ ವೆಲ್ಲೂರು ಮಹಾಲಕ್ಷ್ಮೀ ಚಿನ್ನದ ದೇವಸ್ಥಾನದ ಪ್ರತಿಕೃತಿ.

ಕೋಟೆಶ್ವರ: ಕೊಡಿ ಹಬ್ಬದ ಅಂಗವಾಗಿ ರಾಮನಾಥ ಗೋಳಿಕಟ್ಟೆ ಪ್ರೆಂಡ್ಸ್ ಪ್ರಾಯೋಜಕ್ವದಲ್ಲಿ ನಿರ್ಮಿಸಲಾಗಿರುವ ವೆಲ್ಲೂರು ಮಹಾಲಕ್ಷ್ಮೀ ಚಿನ್ನದ ದೇವಸ್ಥಾನದ ಪ್ರತಿಕೃತಿ (ವಿಶ್ವಕರ್ಮ ಕಲ್ಯಾಣ ಮಂದಿರದ ಎದುರು)  ಎಲ್ಲರ ಗಮನ ಸೆಳೆಯುತ್ತಿದೆ. 
       ಈ ಕಲಾಕೃತಿಯನ್ನು ಥರ್ಮಕೋಲ್ ಹಾಗೂ ಮರದಿಂದ ನಿರ್ಮಿಸಲಾಗಿದ್ದು ಸ್ವರ್ಣ ವರ್ಣದ ಬಣ್ಣವನ್ನು ಲೇಪಿಸಲಾಗಿದೆ.
          23 ಅಡಿ ಎತ್ತರ, 29 ಅಡಿ ಉದ್ದವಿರುವ ಪ್ರತಿಕೃತಿಯನ್ನು ಪ್ರಸಿದ್ಧ ಕುಸುರಿಗಾರ ಜೀವಿ ಆರ್ಟ್ಸ್ ಹೌಸ್  ಗೋಪಾಡಿಯ ವೆಂಕಟೇಶ ಆಚಾರ್ ನಿರ್ಮಿಸಿದ್ದು, ವಿನೇಂದ್ರ ಆಚಾರ್, ಆಶೀಶ್ ಆಚಾರ್, ಸುಭ್ರಮಣ್ಯ, ವಸಂತ, ಮಂಜುನಾಥ್ ಆಚಾರ್, ಹರೀಶ್, ಗಿರೀಶ್ ಆಚಾರ್ ಶ್ರಮಿಸಿದ್ದಾರೆ.
ಚಿತ್ರ: ಯೋಗೀಶ ಕುಂಭಾಶಿ