ಮೊಗೇರಿಗೆ ಭೇಟಿ ನಿಡಿದ ನಿತ್ಯೋತ್ಸವ ಕವಿ.

ಕುಂದಾಪುರ: ನಿತ್ಯೋತ್ಸವ ಕವಿ ನಾಡೋಜ ಕೆ.ಎಸ್‌.. ನಿಸಾರ್‌ ಅಹಮದ್‌ ಸೋಮವಾರ ಸಂಜೆ ಅನಿರೀಕ್ಷಿತ ಎಂಬಂತೆ ಕವಿ ದಿ| ಎಂ. ಗೋಪಾಲಕೃಷ್ಣ ಅಡಿಗ ಅವರ ಹುಟ್ಟೂರಾದ ಕುಂದಾಪುರದ ಮೊಗೇರಿಗೆ ಭೇಟಿ ನೀಡಿದರು.
   ಅಡಿಗರ ಸಹೋದರ ಸಂಬಂಧಿ ಹಿರಿಯ ಜೀವ ಶಂಕರನಾರಾಯಣ ಅಡಿಗ ಮತ್ತು ಅವರ ಪತ್ನಿ ಲಲಿತಮ್ಮ ಅವರಿಂದ ಅಡಿಗರ ಬಾಲ್ಯದ ದಿನಗಳ ಬಗ್ಗೆ ಕೇಳಿ ತಿಳಿದ ಕವಿ ನಿಸಾರ್‌, ಶಂಕರ ನಾರಾಯಣ ಅಡಿಗರು ನೀಡಿದ ಶಾಸ್ತ್ರೋಕ್ತ ಪಂಚಾಂಗವನ್ನು ಸ್ವೀಕರಿಸಿದರು.
ಅಡಿಗರ ಇನ್ನೋರ್ವ ಸಹೋದರ ಸಂಬಂಧಿ ಚಂದ್ರಶೇಖರ ಅಡಿಗ ಮತ್ತು ಪತ್ನಿ ದಿವ್ಯಾ ಅವರ ಆತಿಥ್ಯ ಸ್ವೀಕರಿಸಿದರು.
 1957 ರಿಂದ ಅಡಿಗರೊಂದಿಗಿನ ತಮ್ಮ ನಂಟನ್ನು ಹಾಗೂ ತಮ್ಮ ಸಾಹಿತ್ಯದ ಮೇಲೆ ಅಡಿಗರ ಪ್ರಭಾವನ್ನು ಮೆಲಕು ಹಾಕಿದ ಕವಿ ನಿಸಾರ್ ಅಹಮ್ಮದ್ ಅಡಿಗರ ಮನೆ ಹಾಗೂ ಸುತ್ತಲಿನ ಪರಿಸರವನ್ನು ಕಂಡ ಕ್ಷಣ ಕಾಲ ಬೆರಗಾದರು.
       ಅರಣ್ಯಾಧಿಕಾರಿಗಳಾದ ಯೋಗೇಶ್ವರ್‌, ಪ್ರಕಾಶ್ಚಂದ್ರ, ಭಾಸ್ಕರ ಕೆ, ಮೊಗೇರಿ, ಜಾದೂಗಾರ ಓಂಗಣೇಶ್‌ ಉಪ್ಪುಂದ ಮತ್ತು ಸುಧಾಕರ ಪಿ. ಬೈಂದೂರು ಜತೆಗಿದ್ದರು.