ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ 9 ನೇ ಆಳ್ವಾಸ್ ನುಡಿಸಿರಿಗೆ ಚಾಲನೆ

ಅವರು ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ 9 ನೇ ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆ ವಹಿಸ ಮಾತನಾಡುತ್ತಿದ್ದರು. ಮೂಲತಃ ಸಮನ್ವಯ ಕನ್ನಡಿಗರದು.
ಸಮನ್ವಯ,ಸರ್ವಾನುನಯ ಮತ್ತು ಸಹಜೀವಿಗಳೊಂದಿಗೆ ಸಹನೆಯಿಂದ ಸಹಕರಿಸಿಕೊಂಡು ಹೋಗುವ ಹುಟ್ಟುಸ್ವಭಾವ. ಇದರಿಂದ ಒಂದು ಸೌಹಾರ್ದದ ಹದ ಮತ್ತು ಮಾಗು ಮೈಗೂಡಿಕೊಂಡಿದೆ .ಜೋಗದ ದೀಪ್ತಿವಂತ ಸಿರಿಯಂತಹ, ತುಂಗೆಯ ಸುಸಮೃದ್ಧ ತುಂಬು ತೆನೆಯಂತಹ, ಸಹ್ಯಾದ್ರಿಯ ರಾಮಣೀಯಕ ಎತ್ತರದ ಲೋಹದ ಹಾಗೂ ಹೊನ್ನು ಮತ್ತಿತರ ಖನಿಜಗಳ ಹೊಳಪಿನಂತಹ, ಶ್ರೀಗಂಧ ಹೆತ್ತೇಗಗಳ ನಿತ್ಯ ಹರಿದ್ವರ್ಣದಂತಹ ಸವರ್ೋಪಕಾರಿ ಮತ್ತು ಸುಸಂಪನ್ನ ಅಂತರಂಗ ಮತ್ತು ಜೀವನಾದರ್ಶದ ವಿಶಿಷ್ಟತೆ ಕನ್ನಡ ಜನಪದದ್ದು. ಹಾಗೆಯೇ ಹಲವುಗಳಲ್ಲಿ ಕವಲಾಗದ, ಕುಲವೆನ್ನುವುದರಲ್ಲಿ ಸೇದಿ ಹೋಗದೆ ಮತ್ತು ಬೇದದೆಣಿಕೆಯ ಇಲ್ಲವೇ ಕುತ್ಸಿತ ಕರುಬುಗಳ ಜೀವಿತ ರೀತಿಯಲ್ಲ..ಈ ಮಾತು ಭಾವತಿರೇಕದ ಅಭಿಮಾನೋದ್ಗಾರವಲ್ಲ.ಸಮಷ್ಟಿ ಸಲ್ಲಕ್ಷಣದ ಸತ್ಯ ಸ್ಥಿತಿಯ ಉವಚ. ಕನ್ನಡಿಗರ ಈ ಗುಣಾತಿಶಯವೇ ಅವರಿಗೆ ಮುಳುವಾಗಬಾರದೆಂಬುದು ಸತಸ್ಯಸತ್ಯ ಸಂಗತಿ ಎಂದು ಅವರು ಹೇಳಿದರು.

ಒಬಾಮನಿಗೆ ಈಗ ಬೇಕಿರುವುದು ಸರ್ವೋದಯ ಅಮೇರಿಕಾ ಸಂಕಷ್ಟದಲ್ಲಿದೆ. ಅಭಿವೃದ್ದಿ -ಡವಲಪ್ ಮೆಂಟ್ ಎಂಬ ಪದ ನಾಶದ ಅರ್ಥವನ್ನು ನೀಡುವಂತೆ ಕಾಣುತ್ತಿದೆ. ಕೃಷಿಯ ನಾಶ ಮತ್ತು ಅಭಿವೃದ್ದಿಯಿಂದ ಬಹಳ ಕೆಟ್ಟ ಪರಿಣಾಮ ಬೀರಿದೆ ಎಂದರು.
ಬರಹ ಸತ್ಯಕ್ಕೆ ಮತ್ತು ಶಾಶ್ವತಕ್ಕೂ ಕನ್ನಡಿಯಾಗಬೆಕು. ಕೆಲವೊಮ್ಮೆ ಶಾಶ್ವತದ ಆರಾಧಕರಾಗಿ ಸತ್ಯಕ್ಕೆ ಸ್ಪಂದಿಸದೇ ಇರ ಬಹುದು. ನಮ್ಮ ರತ್ನಾಕರ ವರ್ಣಿ ಮತ್ತು ಹಿರಿಯ ಕವಿಗಳು ನೀಡಿದ ತತ್ವಗಳನ್ನು ಇಂದಿಗೂ ವಿಶ್ವ ಸಾಹಿತ್ಯದ ಥೀಮ್ಗಳಾಗಿವೆ ಎಂದರು.
ನಾವು ಗರ್ಭಕೋಶದಲ್ಲಿಯೇ ಮಕ್ಕಳಿಗೆ ತಾಂತ್ರಿಕವಾಗಿ ಸಾಧ್ಯವಿದ್ದರೆ ಕಲಿಸುತ್ತೇವೆ. ಆದರೆ ಅದು ಹುಟ್ಟುವಾಗ ವಿಶ್ವದ ಭಾಷೆ ಚೀನಿಯೂ ಆಗಿರ ಬಹುದು ಎಂದು ವಿಶ್ವದ ಸ್ಥಿತಿಗೆ ಕನ್ನಡಿ ಹಿಡಿದರು.
ಹೊಸ ಕನ್ನಡ ಪರಂಪರೆ ದಕ್ಷಿಣ ಕನ್ನಡದ ವಿದ್ವಾಂಸರ ಛಾಪು , ಮೈಸೂರಿನ ಇಂಗ್ಲಿಷ್ ಪ್ರಭಾವದ ಪರಂಪರೆ ಮತ್ತು ಧಾರಾವಾಡದ ಜಾನಪದ ಹಿನ್ನಲೆಯ ಪರಂಪರೆ ಕನ್ನಡವನ್ನು ಬೆಳೆಸಿದೆ. ಈ ಮೂರು ಛಾಪುಗಳು ಒಂದಾಗಿ ಒಟ್ಟಾಗಿ ಕನ್ನಡದ ಬೆಳವಣಿಗೆ ಆಗಬೇಕು ಎಂದು ಅವರು ಅಭಿಪ್ರಾಯ ಪಟ್ಟರು. ಶತಾಯುಷಿ ವೆಂಕಟಸುಬ್ಬಯ್ಯ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ. ಮೋಹನ ಆಳ್ವಾ ಅವರು ಸ್ವಾಗತಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ, ಮಾಜಿ ಸಚಿವ ಅಮರನಾಥ ಶೆಟ್ಟಿ, ಸಂಸದ ನಳಿನ್ ಕುಮಾರ್, ಶಾಸಕ, ವಿರೋಧ ಪಕ್ಷದ ಮುಖ್ಯ ಸಚೇತಕ ಕೆ,ಅಭಯಚಂದ್ರ, ಜಯಶ್ರೀ ಅಮರನಾಥ ಶೆಟ್ಟಿ , ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣೀಕ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮ್ಮೇಳವನ್ನು ಬೆಳ್ಳಿ ಕೊಡದ ಹಾಲನ್ನು ತೆನೆಗೆ ಎರಡಯುವ ಮೂಲಕ ಅನಂತಮೂರ್ತಿ ನಡೆಸಿದರು.ಉದ್ಘಾಟಿಸಿದರು. ಅಧ್ಯಕ್ಷರನ್ನು ಮತ್ತು ಮಹಾಕಾವ್ಯಗಳನ್ನು ಪಲ್ಲಕ್ಕಿಯಲ್ಲಿ ಕರೆತರಲಾಯಿತು. ಕರಾವಳಿ ಛಾಪಿನ ಮೆರವಣಿಗೆ ಬಹಳ ಸಂಭ್ರಮದೊಂದಿಗೆ ನಡೆಯಿತು.
ಆಳ್ವಾಸ್ ಉಪನ್ಯಾಸಕ ವೇಣುಗೋಪಾಲ್ ಶೆಟ್ಟಿ ಕಿದೂರು ನಿರೂಪಿಸಿದರು. ಉಪನ್ಯಾಸಕ ಡಾ.ಧನಂಜಯ ಕುಂಬ್ಳೆ ಅವರು ವಂದಿಸಿದರು.ಕಳೆದ ವರ್ಷದ ಭಾಷಣಗಳ ಸಂಗ್ರಹ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಯಕ್ಷಗಾನದ ಪಟ್ಟಿಗಳನ್ನು ಎದೆಗವಚಗಳನ್ನು ಬಳಸಿ ಮಾಡಲಾದ ವೇದಿಕೆಯ ಅಲಂಕಾರ, ಈ ವರ್ಷ ನಿರ್ಮಾಣವಾದ ಆಳ್ವಾಸ್ನ ಬೃಹತ್ ಸಭಾಂಗಣದಲ್ಲಿ ಆಳವಡಿಸಲಾದ ಅಪೂರ್ವ ಕಲಾಕೃತಿಗಳು ಗಮನ ಸೆಳೆಯುತ್ತಿವೆ.
ಕುಂದಾಪ್ರ.ಕಾಂ- editor@kundapra.com