ಮೂಡುಬಿದಿರೆ: 10 ನೇ ನುಡಿಸಿರಿ ವಿಶ್ವ ನುಡಿಸಿರಿಯ ಮುನ್ನೋಟ, ಮಾತು, ತಯಾರಿಯ ಹಿನ್ನಲೆಯಲ್ಲಿ 9ನೇ ಆಳ್ವಾಸ್ ನುಡಿಸಿರಿಯ ಕೊನೆಯ ದಿನವಾದ ಭಾನುವಾರ ಸಕಲ ಸಡಗರಗಳೊಂದಿಗೆ ಭಾನುವಾರ ಸಮಾಪ್ತಿಗೊಂಡಿತು. ನಾಡಿನ ಹಿರಿಯರಾದ 10 ಸಾಧಕಶ್ರೇಷ್ಠರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ನೀಡಿಗೌರವಿಸಲಾಯಿತು. ಮಾನಿನಿಯರ ಆರತಿ, ವಾದ್ಯಘೋಷಗಳ ಸಂಭ್ರಮ, ಸಡಗರದೊಂದಿಗೆ ಪ್ರಶಸ್ತಿ ಪ್ರದಾನಿಸಲಾಯಿತು.
ಕನ್ನಡ ಶಿಕ್ಷಣಕ್ಕಾಗಿ ಅ.ವಂ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜಾ, ಕನ್ನಡ ಸಾಂಸ್ಕೃತಿಕ ಸೇವೆ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಸಾನೆಹಳ್ಳಿ, ಸಾಹಿತ್ಯ ಸೇವೆಗಾಗಿ ಡಾ.ಸಿ.ಪಿ.ಕೃಷ್ಣ ಕುಮಾರ್, ಚಲನಚಿತ್ರ ಸಾಧನೆಗಾಗಿ ಗಿರೀಶ್ ಕಾಸರವಳ್ಳಿ, ಸಾಹಿತ್ಯಕ್ಕಾಗಿ ಡಾ.ಜಿ.ಸಿದ್ಧಲಿಂಗಯ್ಯ ಮತ್ತು ಡಾ.ವಿಷ್ಣು ನಾಯ್ಕ್, ನೃತ್ಯ ಕಿರುತೆರೆಗಾಗಿ ವೈಜಯಂತಿ ಕಾಶಿ, ಗಾನ ಸಾಧನೆಗಾಗಿ ಚಿಟ್ಟಾಣಿ ರಾಮಚಂದ್ರ ಹೆಗಡೆ, ಯಕ್ಷರಂಗಭೂಮಿ ಸೇವೆಗಾಗಿ ಸುಭದ್ರಮ್ಮ ಮನ್ಸೂರು, ಪ್ರಕಾಶನ ಸೇವೆಗಾಗಿ ಲೋಕ ಶಿಕ್ಷಣ ಟ್ರಸ್ಟ್ನ ಪ್ರತಿನಿಧಿಗಳು ಪ್ರಶಸ್ತಿ ಸ್ವೀಕರಿಸಿದರು.
ಇದು ಮಂಗಳೂರು ಧರ್ಮ ಪ್ರಾಂತ್ಯಕ್ಕೆ ಸಂದ ಗೌರವ ಇದು ಎಂದು ಡಾ. ಅಲೋಶಿಯೇಸ್ ಪಾವ್ಲ್ ಡಿಸೋಜಾ ಉತ್ತರಿಸಿದರು. ಕನ್ನಡದ ನಿಜವಾದ ಹಬ್ಬ ಇದು ಎಂದು ಸಾಣೆಹಳ್ಳಿ ಸ್ವಾಮಿಜಿ ಅವರು ಪ್ರತಿಕ್ರಿಯಿಸಿದರು.
ಅತ್ಯುತ್ತಮ ಕಲಾವೇದಿಕೆಯ ಈ ಸನ್ಮಾನ ಎಲ್ಲಾ ಸನ್ಮಾನಗಳಿಗಿಂತ ಹೆಚ್ಚಿನ ಸನ್ಮಾನ ಎಂದು ನಟಿ ವೈಜಯಂತಿ ಕಾಶಿ ಹೇಳಿದರು.
ಅಭಿಮಾನಿಗಳೇ ಕಲಾವಿದರ ಬದುಕಿನ ಪ್ರೇರಣೆ. ಕಲಾ ಲೋಕದ, ಕಲಾಭಿಮಾನಿಗಳ ಪ್ರೀತಿಯಿಂದ ನನಗೆ ಪದಶ್ರೀ ಹಾಗೂ ನುಡಿಸಿರಿ ಪ್ರಶಸ್ತಿ ದೊರಕಿದೆ ಎಂದು ಚಿಟ್ಟಾಣಿ ರಾಮಚಂದ್ರ ಹೆಗ್ಡೆ ಸಲ್ಲಿಸಿದರು.
ನುಡಿಸಿರಿಯ ಸರ್ವಾಧ್ಯಕ್ಷ ಕೆ.ಎಸ್. ನಿಸಾರ್ ಅಹಮ್ಮದ್ ಅವರು ಸಮ್ಮೇಳನ ಅಧ್ಯಕ್ಷರ ಪ್ರತಿಕ್ರಿಯೆ ನೀಡಿದರು.
ಸಮಾರೋಪ ಭಾಷಣ ಮಾಡಿದ ಡಾ.ಏರ್ಯ ಲಕ್ಷ್ಮೀ ನಾರಾಯಣ ಆಳ್ವ , ಮಾಜಿ ಸಚಿವ ಅಮರನಾಥ ಶೆಟ್ಟಿ, ಶಾಸಕ ಕೆ. ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಮತ್ತು ಶ್ರೀಮತಿ ಜಯಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘಟಕ ಆಳ್ವಾಸ್ ಎಜುಕೇಶನ್ ಪೌಂಡೇಶನ್ ಅಧ್ಯಕ್ಷ ಡಾ. ಮೋಹನ ಆಳ್ವ ಅವರು ಸ್ವಾಗತಿಸಿ ನ.25 ರಂದು ನಡೆಯಲಿರುವ ದೀಪಾವಳಿ ಸಂಭ್ರದ ಬಗ್ಗೆ ಮತ್ತು ಮುಂದಿನ ನುಡಿಸಿರಿಯ ದಿನಾಂಕವನ್ನು ಪ್ರಕಟಿಸಿದರು.
ಕೆ.ವಿ ರಮಣ್ ನಿರ್ದೇ ಶನದಲ್ಲಿ ಅಧ್ಯಕ್ಷರ ಗೀತೆಗಳನ್ನು ಸಾದರ ಪಡಿಸಿದರು.
ಕುಂದಾಪ್ರ.ಕಾಂ- editor@kundapra.com